More

    ಟ್ವಿಟರ್​ನಿಂದ ಮತ್ತೆ ಎಡವಟ್ಟು; ಭಾರತದ ನಕಾಶೆಯನ್ನೇ ಕೆಡಿಸಿದ ಮೈಕ್ರೋಬ್ಲಾಗಿಂಗ್ ಸಂಸ್ಥೆ

    ನವದೆಹಲಿ: ಕೇಂದ್ರ ಸರ್ಕಾರದೊಂದಿಗೆ ಕೆಲವು ದಿನಗಳಿಂದ ಹಗ್ಗಜಗ್ಗಾಟ ನಡೆಸುತ್ತಿರುವ ಟ್ವಿಟರ್​ ಇದೀಗ ಮತ್ತೆ ಎಡವಟ್ಟು ಮಾಡಿಕೊಂಡಿದ್ದು, ಅದೀಗ ಸಂಸ್ಥೆಯ ಪಾಲಿಗೆ ಭಾರಿ ಉರುಳಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

    ಸೋಷಿಯಲ್ ಮೀಡಿಯಾಗಳಿಗೆ ಸಂಬಂಧಿಸಿದಂತೆ ಭಾರತದ ಹೊಸ ಐಟಿ ಕಾಯ್ದೆಯ ನಿಯಮಗಳನ್ನು ಪಾಲಿಸಲು ಮೀನ-ಮೇಷ ಎಣಿಸುತ್ತಿರುವ ಟ್ವಿಟರ್ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಘರ್ಷ ಹೊಂದಿದೆ. ಇದರ ಜತೆಗೆ ಮೊನ್ನೆಮೊನ್ನೆಯಷ್ಟೇ ಕೇಂದ್ರ ಐಟಿ ಸಚಿವರ ಟ್ವಿಟರ್​ ಖಾತೆ ಕೆಲವು ಗಂಟೆಗಳ ಮಟ್ಟಿಗೆ ಬ್ಲಾಕ್ ಮಾಡಿ ವಿವಾದಕ್ಕೀಡಾಗಿ ಮತ್ತೆ ಅನ್​ಬ್ಲಾಕ್​ ಮಾಡಿತ್ತು. ನಂತರ ಇತ್ತೀಚೆಗಷ್ಟೇ ನೇಮಿಸಲಾಗಿದ್ದ ಟ್ವಿಟರ್​ ಇಂಡಿಯಾದ ಕುಂದುಕೊರತೆ ಅಧಿಕಾರಿ ನಿನ್ನೆಯಷ್ಟೇ ರಾಜೀನಾಮೆ ನೀಡಿದ್ದರು. ಇದರಿಂದ ಟ್ವಿಟರ್ ಐಟಿ ಕಾಯ್ದೆ ಪಾಲನೆಯಿಂದ ಹೊರಬಂದಂತಾಗಿದ್ದು, ಈಗ ಈ ಹಿಂದೆ ಮಾಡಿದ್ದಂಥದ್ದೇ ಎಡವಟ್ಟನ್ನು ಮತ್ತೆ ಮಾಡಿದೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಅದೇನೆಂದರೆ ಭಾರತದ ನಕಾಶೆಯನ್ನು ಟ್ವಿಟರ್ ಮತ್ತೊಮ್ಮೆ ಕೆಡಿಸಿದೆ. ಅಂದರೆ ಜಮ್ಮು-ಕಾಶ್ಮೀರ ಮತ್ತು ಲಡಾಖ್​ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಿ ತಪ್ಪು ನಕಾಶೆಯನ್ನು ಪ್ರಕಟಿಸಿದೆ. ಟ್ವಿಟರ್​ ವೆಬ್​ಸೈಟ್​​ನ ಕರಿಯರ್ ಸೆಕ್ಷನ್​ನಲ್ಲಿನ ‘ಟ್ವೀಪ್ ಲೈಫ್​’ ವಿಭಾಗದಲ್ಲಿ ಪ್ರಕಟಿಸಲಾಗಿರುವ ವಿಶ್ವದ ಭೂಪಟದಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್​ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಲಾಗಿದೆ. ಈ ಹಿಂದೆಯೂ ಲಡಾಖ್​ ಭಾರತದ ಭಾಗ ಅಲ್ಲ ಎಂಬಂತೆ ತೋರಿಸಿದ್ದ ಟ್ವಿಟರ್​, ಕೊನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಿಗೆ ತಪ್ಪನ್ನು ತಿದ್ದಿಕೊಂಡಿತ್ತು. ಈಗ ಮತ್ತೆ ಅಂಥದ್ದೆ ತಪ್ಪು ಮರುಕಳಿಸಿದೆ. ಜತೆಗೆ ಕೇಂದ್ರ ಸರ್ಕಾರದೊಂದಿಗೆ ಟ್ವಿಟರ್​ ಸಂಘರ್ಷ ಇರುವುದರಿಂದ ಈ ಪ್ರಕರಣ ಗಂಭೀರವಾಗಿ ಪರಿಣಮಿಸಿದರೂ ಅಚ್ಚರಿ ಏನಲ್ಲ. (ಏಜೆನ್ಸೀಸ್)

    ಅರ್ಧಕ್ಕರ್ಧ ಕಡಿತ; ಕಪ್ಪು ಶಿಲೀಂಧ್ರ ರೋಗ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿದ ಸರ್ಕಾರ

    ತುಂಬು ಗರ್ಭಿಣಿಯೇ ಆಸ್ಪತ್ರೆಗೆ ದಾಖಲಾಗಿ ಮಗುವನ್ನು ಕದ್ದಳು!; ಕಾರಣ ಮೂರು ಮತ್ತೊಂದು..

    ನೀವು ಈ ಬ್ಯಾಂಕ್​ ಖಾತೆದಾರರಾಗಿದ್ದರೆ ಇತ್ತ ಸ್ವಲ್ಪ ಗಮನಹರಿಸಿ; ಐಎಫ್​ಎಸ್​ಸಿ ಬದಲಾಗಿದೆ ಗಮನಿಸಿ..

    ತುಂಬು ಗರ್ಭಿಣಿಯೇ ಆಸ್ಪತ್ರೆಗೆ ದಾಖಲಾಗಿ ಮಗುವನ್ನು ಕದ್ದಳು!; ಕಾರಣ ಮೂರು ಮತ್ತೊಂದು..

    ನೀವು ಈ ಬ್ಯಾಂಕ್​ ಖಾತೆದಾರರಾಗಿದ್ದರೆ ಇತ್ತ ಸ್ವಲ್ಪ ಗಮನಹರಿಸಿ; ಐಎಫ್​ಎಸ್​ಸಿ ಬದಲಾಗಿದೆ ಗಮನಿಸಿ..

    ತಮ್ಮನ ಮದ್ವೆಗಾಗಿ 2 ದಿನ ರಜೆ ತೆಗೆದುಕೊಳ್ಳಲಿಕ್ಕೂ ಪತ್ರ ಬರೆದು ಕೋರಿಕೊಂಡ ಗ್ರಾಮ ಪಂಚಾಯತ್ ಸದಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts