More

    ಮೊದಲ ದಿನ ತಮಿಳುನಾಡು, ವಿದರ್ಭಕ್ಕೆ ಬ್ರೇಕ್: ಮುಂಬೈ, ಮಧ್ಯಪ್ರದೇಶ ಮೇಲುಗೈ

    ಮುಂಬೈ: ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ 41 ಬಾರಿಯ ಚಾಂಪಿಯನ್ ಮುಂಬೈ ತಂಡ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟೂರ್ನಿಯ ಸೆಮಿೈನಲ್‌ನಲ್ಲಿ ಪ್ರವಾಸಿ ತಮಿಳುನಾಡು ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದು, ಮೊದಲ ದಿನವೇ ಮೇಲುಗೈ ಸಾಧಿಸಿದೆ.
    ಬಿಕೆಸಿ ಗ್ರೌಂಡ್‌ನಲ್ಲಿ ಭಾನುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ತಮಿಳುನಾಡು, 64.1 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಮುಂಬೈ ದಿನದಂತ್ಯಕ್ಕೆ 2 ವಿಕೆಟ್‌ಗೆ 42 ರನ್‌ಗಳಿಸಿದ್ದು, ಸದ್ಯ 101 ರನ್ ಹಿನ್ನಡೆಯಲ್ಲಿದೆ. ಮುಶೀರ್ ಖಾನ್ (24*) ಜತೆಯಾಗಿ ನೈಟ್ ವಾಚ್‌ಮನ್ ಮೋಹಿತ್ ಅವಸ್ತಿ(1) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ತಮಿಳುನಾಡು: 64.1 ಓವರ್‌ಗಳಲ್ಲಿ 146 (ಜಗದೀಶನ್ 4, ಪ್ರದೂಷ್ 8, ಇಂದ್ರಜಿತ್ 11, ವಿಜಯ್ ಶಂಕರ್ 44, ವಾಷಿಂಗ್ಟನ್ 43, ಅಜಿತ್ 15, ತುಷಾರ್ 24ಕ್ಕೆ 3, ತನುಷ್ 10ಕ್ಕೆ 2, ಮುಶೀರ್ 10ಕ್ಕೆ 2). ಮುಂಬೈ: 2 ವಿಕೆಟ್‌ಗೆ 42 (ಪೃಥ್ವಿ ಷಾ 5, ಭೂಪೇನ್ 15, ಮುಶೀರ್ 24*, ಸಾಯಿ ಕಿಶೋರ್ 3ಕ್ಕೆ 1).

    ವಿದರ್ಭಕ್ಕೆ ಆವೇಶ್ ಕಡಿವಾಣ: ವೇಗಿ ಆವೇಶ್ ಖಾನ್ (49ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಮಧ್ಯಪ್ರದೇಶ ತಂಡ ನಾಗ್ಪುರದಲ್ಲಿ ಆರಂಭಗೊಂಡ ಇನ್ನೊಂದು ಸೆಮಿೈನಲ್ ಪಂದ್ಯದಲ್ಲಿ ವಿದರ್ಭ ತಂಡಕ್ಕೆ ಕಡಿವಾಣ ಹೇರಿದೆ. ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿದರ್ಭ, 162 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಕರ್ನಾಟಕದ ಮಾಜಿ ಆಟಗಾರ ಅನುಭವಿ ಕರುಣ್ ನಾಯರ್ (63 ರನ್, 105 ಎಸೆತ, 9 ಬೌಂಡರಿ) ಹೋರಾಟದ ಲವಾಗಿ ಅಂತಿಮವಾಗಿ 56.4 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಮಧ್ಯಪ್ರದೇಶ ದಿನದಂತ್ಯಕ್ಕೆ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 47 ರನ್‌ಗಳಿಸಿದ್ದು, ಸದ್ಯ 123 ರನ್‌ಗಳ ಹಿನ್ನಡೆಯಲ್ಲಿದೆ.

    ವಿದರ್ಭ: 56.4 ಓವರ್‌ಗಳಲ್ಲಿ 170 (ಅಥರ್ವ 39, ಕರುಣ್ ನಾಯರ್ 63, ಯಶ್ ರಾಥೋಡ್ 17, ಆವೇಶ್ 49ಕ್ಕೆ 4, ಕುಲ್ವಂತ್ 38ಕ್ಕೆ 2, ವೆಂಕಟೇಶ್ ಅಯ್ಯರ್ 28ಕ್ಕೆ 2). ಮಧ್ಯಪ್ರದೇಶ: 1 ವಿಕೆಟ್‌ಗೆ 47 (ಯಶ್ ದುಬೆ 11, ಹಿಮಾಂಶು 26*, ಹರ್ಷ 10*, ಉಮೇಶ್ ಯಾದವ್ 18ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts