More

    ಮಂಗಳಮುಖಿ ಆಗಲು ಹೊರಟಿದ್ದ ಬಾಲಕನ ಬದುಕಲ್ಲಿ ರೋಚಕ ತಿರುವು!

    ಕಂಪ್ಲಿ (ಹೊಸಪೇಟೆ): ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಶಾಲೆ ಬಿಟ್ಟ (ಹತ್ತನೇ ತರಗತಿ) 17 ವರ್ಷದ ಬಾಲಕನೊಬ್ಬ ಮಹಿಳೆಯೊಬ್ಬಳ ಮಧ್ಯಸ್ಥಿಕೆಯಲ್ಲಿ ಮುತ್ತು ಕಟ್ಟಿಸಿಕೊಂಡು ಮಂಗಳಮುಖಿ ಆಗಲು ಹೊರಟಿದ್ದ.

    ಶುಕ್ರವಾರ(ಜೂ.12) ನಡೆಯಬೇಕಿದ್ದ ಈ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರಿಂದ 3,700 ರೂ. ಕಾಣಿಕೆಯನ್ನೂ ಬಾಲಕ ಸಂಗ್ರಹಿಸಿದ್ದ. ಹುಲಿಗೆಮ್ಮನ ಭಕ್ತನಾಗಿ, ಹೆಣ್ಣುಮಕ್ಕಳಂತೆ ಉದ್ದನೆ ಕೂದಲು ಬಿಟ್ಟಿದ್ದ ಬಾಲಕನ ಜತೆ ಮದ್ಯವ್ಯಸನಿ ಅಜ್ಜಿ ಮಾತ್ರ ಇದ್ದಾರೆ. ಗ್ರಾಮಸ್ಥರು ಈತನನ್ನು ಚುಡಾಯಿಸುತ್ತಿದ್ದರು. ಹಾಗಾಗಿ ಮಹಿಳೆಯೊಬ್ಬಳ ಮಧ್ಯಸ್ಥಿಕೆಯಲ್ಲಿ ಮಂಗಳಮುಖಿ ಆಗಲು ಹೊರಟಿದ್ದವನ ಬದುಕಲ್ಲಿ ಆತ ನಿರೀಕ್ಷಿಸಿಯೇ ಇರದ ತಿರುವು ಸಿಕ್ಕಿದೆ.

    ಇದನ್ನೂ ಓದಿರಿ video/ ಮಳೆ ಸುರಿಯುತ್ತಿದ್ದರೂ ಪೊಲೀಸ್​ ಠಾಣೆ ಎದುರಲ್ಲೇ ಧರಣಿ ಕುಳಿತ ಮಹಿಳೆ, ಕ್ಯಾರೆ ಎನ್ನದ ಸಿಬ್ಬಂದಿ…

    ಮಂಗಳಮುಖಿ ಆಗಲು ಸಿದ್ಧತೆ ನಡೆಸಿರುವ ವಿಷಯ ತಿಳಿಯುತ್ತಿದ್ದಂತೆ ಕುರುಗೋಡು ಪೇದೆ ಮಹಾಂತೇಶ್​, ಗ್ರಾಮಲೆಕ್ಕಿಗ ಹೊನ್ನಪ್ಪ, ಪಿಡಿಒ ತಾರಾನಾಯ್ಕ, ಮಕ್ಕಳ ಸಹಾಯವಾಣಿ ತಾಲೂಕು ಸಂಯೋಜಕರಾದ ಚಿದಾನಂದ, ನೇತ್ರಾ ಸೇರಿ ಅಧಿಕಾರಿಗಳ ತಂಡ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಮುತ್ತು ಕಟ್ಟಿಸಿಕೊಳ್ಳಲಿದ್ದ ಬಾಲಕನ ಮನವೊಲಿಸಿದೆ.

    ಸಹಜ ಜೀವನ ನಡೆಸುವಂತೆ ಪ್ರೇರೇಪಿಸಿದ ತಂಡವು ಬಾಲಕನ ಉದ್ದನೆ ಕೇಶ ತೆಗೆಸಿದೆ. ಗ್ರಾಪಂ ಸದಸ್ಯ ಜಡೆಪ್ಪ ಸಮ್ಮುಖದಲ್ಲಿ ನೆರೆಹೊರೆಯವರ ಸಭೆ ನಡೆಸಿ ತಿಳಿವಳಿಕೆ ಮೂಡಿಸಿತು.

    ಇದನ್ನೂ ಓದಿರಿ ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts