More

    video/ ಮಳೆ ಸುರಿಯುತ್ತಿದ್ದರೂ ಪೊಲೀಸ್​ ಠಾಣೆ ಎದುರಲ್ಲೇ ಧರಣಿ ಕುಳಿತ ಮಹಿಳೆ, ಕ್ಯಾರೆ ಎನ್ನದ ಸಿಬ್ಬಂದಿ…

    ಚಾಮರಾಜನಗರ: ಮಹಿಳೆಯೊಬ್ಬರು ಮಳೆಯಲ್ಲಿ ನೆನೆಯುತ್ತಲೇ ಪೊಲೀಸ್​ ಠಾಣೆ ಎದುರು ಧರಣಿ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ವೇಳೆ ಖಾಕಿಪಡೆ ಕ್ಯಾರೆ ಎನ್ನದೆ ಅಮಾನವೀಯವಾಗಿ ನಡೆದುಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

    ಪಕ್ಕದ ಜಮೀನಿನ ವ್ಯಕ್ತಿಯಿಂದ ತನಗೆ ತೊಂದರೆ ಆಗುತ್ತಿದ್ದು, ರಕ್ಷಣೆ ನೀಡಬೇಕು ಎಂದು ಪೂರ್ವ ಪೊಲೀಸ್ ಠಾಣೆ ಆವರಣದಲ್ಲಿ ಜೂ.10ರಂದು ಚಾಮರಾಜನಗರದ ಸುಶೀಲಾ ಎಂಬುವರು ಧರಣಿ ಕುಳಿತಿದ್ದರು. ಆಗ ಮಳೆ ಬಂದಿದ್ದು, ಅದನ್ನೂ ಲೆಕ್ಕಿಸದ ಮಹಿಳೆ ಅಲ್ಲೇ ಕುಳಿತು ಧರಣಿ ಮುಂದುವರಿಸಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಧರಣಿ ಕುಳಿತದ್ದಾದರೂ ಏಕೆ ಗೊತ್ತಾ?

    ಇದನ್ನೂ ಓದಿರಿ ಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!

    video/ ಮಳೆ ಸುರಿಯುತ್ತಿದ್ದರೂ ಪೊಲೀಸ್​ ಠಾಣೆ ಎದುರಲ್ಲೇ ಧರಣಿ ಕುಳಿತ ಮಹಿಳೆ, ಕ್ಯಾರೆ ಎನ್ನದ ಸಿಬ್ಬಂದಿ...ಚಾಮರಾಜನಗರ ತಾಲೂಕಿನ ಚಂದಕವಾಡಿ ಎಚ್.ಡಿ. ಫಾರೆಸ್ಟ್ ಸರ್ವೇ ನಂಬರ್ 1/168ರಲ್ಲಿ ಸುಶೀಲಾ ಮತ್ತು ಶಿವಣ್ಣ ದಂಪತಿಯ ಜಮೀನಿದೆ. ಪಕ್ಕದ ಜಮೀನಿನ ಮಾಲೀಕ ದೊರೆಸ್ವಾಮಿ ಎಂಬಾತ ಅತಿಕ್ರಮಣ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿ ದಾಖಲೆಗಳು ತಮ್ಮಂತೆಯೇ ಇರುವುದು ದೃಢಪಟ್ಟಿದೆ. ಈಗ ವ್ಯವಸಾಯ ಮಾಡಲು ಹೋದರೆ ಆತ ತೊಂದರೆ ಕೊಡುತ್ತಿದ್ದಾನೆ. ತಮಗೆ ಪೊಲೀಸ್ ರಕ್ಷಣೆ ಬೇಕು ಎಂದು ಸುಶೀಲಾ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು.

    ಇದನ್ನೂ ಓದಿರಿ ಪತ್ನಿ ಜತೆಗಿದ್ದ ಪರಪುರುಷನ ಗಂಟಲು ಬಗೆದು ರಕ್ತ ಕುಡಿದ… ಬೆಚ್ಚಿ ಬೀಳೀಸುತ್ತೆ ಆರೋಪಿ ಬಾಯ್ಬಿಟ್ಟ ಸತ್ಯ!

    ಪೊಲೀಸ್ ನಿಯೋಜಿಸುವಂತೆ ಸೇವಾ ಶುಲ್ಕವನ್ನೂ ಪಾವತಿಸಿದ್ದರು. ಆದರೂ ತಮಗೆ ಯಾವುದೇ ರಕ್ಷಣೆ ನೀಡದ ಹಿನ್ನೆಲೆಯಲ್ಲಿ ಸುಶೀಲಾ ಜೂ.10ರಂದು ಇಡೀ ದಿನ ಠಾಣೆ ಮುಂದೆ ಮಳೆಯಲ್ಲೇ ನೆನೆಯುತ್ತ ಧರಣಿ ನಡೆಸಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

    ಈ ವಿಡಿಯೋ  ನೋಡಿ 

    ಯಾಕೀ ಕಷ್ಟ? ಪೊಲೀಸ್​ ಠಾಣೆ ಎದುರಲ್ಲೇ…

    ಯಾಕೀ ಕಷ್ಟ? ಪೊಲೀಸ್​ ಠಾಣೆ ಎದುರಲ್ಲೇ…ಇಲ್ನೋಡಿ ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆ ಎದುರಲ್ಲಿ ಮಳೆಯನ್ನೂ ಲೆಕ್ಕಿಸದೆ ರೈತ ಮಹಿಳೆ ಸುಶೀಲಾ ಎಂಬಾಕೆ ಧರಣಿ ನಡೆಸಿದ್ದಾರೆ. ಆದರೆ, ಪೊಲೀಸರು ಮಾತ್ರ ಕ್ಯಾರೆ ಎನ್ನದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತನ್ನ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದ ಪಕ್ಕದ ಜಮೀನಿನ ಮಾಲೀಕ ದೊರೆಸ್ವಾಮಿ ಎಂಬಾತನಿಂದ ತೊಂದರೆ ಆಗುತ್ತಿದ್ದು, ರಕ್ಷಣೆ ನೀಡಿ ಎಂದು ಮಹಿಳೆ ಜೂ.10ರಂದು ಧರಣಿ ನಡೆಸಿದ್ದಾರೆ. #Chamarajanagar #Police #Rain #Protest

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜೂನ್ 12, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts