More

    ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಅಂಕಾರಾ (ಟರ್ಕಿ): ಶಿಖರದ ತುತ್ತ ತುದಿಯಲ್ಲಿ ಗರ್ಭಿಣಿ ಪತ್ನಿಯೊಂದಿಗೆ ನಗು ನಗುತ್ತಲೇ ರೊಮ್ಯಾಂಟಿಕ್​ ಸೆಲ್ಫಿಗೆ ಪೋಸ್​​ ನೀಡಿದ ಪತಿರಾಯ, ಮರುಕ್ಷಣವೇ ಆಕೆಯನ್ನು ಬೆಟ್ಟದಿಂದ ನೂಕಿ ಕೊಲೆ ಮಾಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ. ಈ ಘಟನೆ 2018ರಲ್ಲಿ ನಡೆದಿದ್ದು, ವಿಚಾರಣೆ ವೇಳೆ ಅಸಲಿಯತ್ತು ಬಹಿರಂಗವಾಗಿದೆ.

    ಸೆಮ್ರಾ ಅಯ್ಸಾಲ್​ (32) ಮೃತ ದುರ್ದೈವಿ. ಆರೋಪಿ ಪರಿ ಹಕನ್​ ಅಯ್ಸಾಲ್​ (40)ನನ್ನು ಬಂಧಿಸಲಾಗಿದೆ. ಗರ್ಭಿಣಿ ಪತ್ನಿಯೊಂದಿಗೆ ಹಕನ್, ಟರ್ಕಿಯ ಮುಗ್ಲಾ ನಗರದ ಬಟರ್​ಫ್ಲೈ ಕಣಿವೆಗೆ​ ರಜಾ ದಿನದಂದು ತೆರಳಿದ್ದರು. ಈ ವೇಳೆ ಏಳು ತಿಂಗಳ ಗರ್ಭಿಣಿಯಾಗಿದ್ದ ಸೆಮ್ರಾಳನ್ನು ಬೆಟ್ಟದಿಂದ ನೂಕಿ ಆರೋಪಿ ಪತಿ ಕೊಲೆ ಮಾಡಿದ್ದಾನೆ.

    ಇದನ್ನೂ ಓದಿರಿ: ಮೊದಲು ಎಲ್ಲದ್ದಕ್ಕೂ ಓಕೆ ಅಂತಿದ್ದವಳು ಈಗೀಗ ಬೇಡ ಬೇಡ ಅಂತಿದ್ದಾಳೆ- ಮದುವೆಯಾದರೆ ಸುಖವಾಗಿರುವೆನೆ?

    ಅಂದಹಾಗೆ ಈ ಘಟನೆ 2018ರ ಜೂನ್​ ತಿಂಗಳಲ್ಲಿ ನಡೆದಿತ್ತು. ಹೊರಗಿನ ಪ್ರಪಂಚ ನೋಡುವ ತವಕದಲ್ಲಿದ್ದ ಮಗು ಮತ್ತು ಮಗುವನ್ನು ಎದುರು ನೋಡಲು ಕಾದಿದ್ದ ತಾಯಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಒಟ್ಟಿಗೆ ಶಿಖರವೇರಿದ್ದ ದಂಪತಿ ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಹತ್ಯೆ ಮಾಡಿದ್ದಾನೆ.

    ಆರಂಭದಲ್ಲಿ ಇದೊಂದು ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ, ವೈಯಕ್ತಿಕ ಅಪಘಾತ ವಿಮೆ ಖಾತರಿಯೊಂದಿಗೆ, ಒಬ್ಬನೇ ಫಲಾನುಭವಿ ಆದ ಕಾರಣ ಇನ್ಸುರೆನ್ಸ್ ಪಡೆದುಕೊಳ್ಳಲು ಪತಿಯೇ ಮಾಡಿದ ಪೂರ್ವ ನಿಯೋಜಿತ ಕೊಲೆ ಎಂಬುದು​ ಇದೀಗ ಬಯಲಾಗಿದೆ. ತನ್ನ ಯೋಜನೆ ಪ್ರಕಾರ ಮೊದಲು ಪತ್ನಿಯನ್ನು ಹೊರಗೆ ಕರೆದುಕೊಂಡು ಹೋದ ಪತಿ, ಪತ್ನಿಯನ್ನು ಶಿಖರದ ತುದಿಗೆ ಕರೆದೊಯ್ದು ಅಲ್ಲಿ ಮೂರು ಗಂಟೆ ಒಟ್ಟಿಗೆ ಸಮಯ ಕಳೆದಿದ್ದಾನೆ. ಬಳಿಕ ಸುತ್ತಮುತ್ತ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಆಕೆಯನ್ನು ನೂಕಿ ತನ್ನ ಕೃತ್ಯವನ್ನು ಸಾಧಿಸಿದ್ದಾನೆಂದು ವಕೀಲರು ನ್ಯಾಯಾಲಯದ ಎದುರು ತಿಳಿಸಿದ್ದಾರೆ.

    ಇದಾದ ಕೆಲವೇ ಸಮಯದಲ್ಲಿ ವಿಮಾ ಪಾವತಿಯನ್ನು ಹಕ್ಕನ್ನು ಆರೋಪಿ ಸಾಧಿಸಿದ್ದಾನೆ ಎಂದು ದೋಷಾರೋಪಣೆಯಲ್ಲೂ ಉಲ್ಲೇಖಿಸಲಾಗಿದೆ. ಆದರೆ ತನಿಖೆಯ ಸುದ್ದಿ ಹೊರ ಬೀಳುತ್ತಿದ್ದಂತೆ ವಿಮೆಯನ್ನು ನಿರಾಕರಿಸಲಾಯಿತು. ಬಳಿಕ ಆರೋಪಿಯನ್ನು ಪೂರ್ವ ನಿಯೋಜಿತ ಕೊಲೆ ಆರೋಪದ ಮೇಲೆ ಕೋರ್ಟ್​ ಆದೇಶದ ಮೇರೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಯಿತು.

    ಇದನ್ನೂ ಓದಿರಿ: ಅವರನ್ನು ಬಿಟ್ಟು ಬದುಕಿರಲಾರೆ- ಆದರೆ ಅವರು ಇಬ್ಬರು ಮಕ್ಕಳ ತಂದೆ; ಪ್ಲೀಸ್‌ ದಾರಿ ತೋರಿ…

    ಇನ್ನು ಸೆಮ್ರಾ ಹೆಸರಲ್ಲಿ ಅನೇಕ ಇನ್ಸುರೆನ್ಸ್​ಗಳಿದ್ದವು. ಪತಿಯೊಂದಿಗೆ ಮಾತನಾಡಿದ್ದ ಅಯ್ಸಲಾ, 2014ರಿಂದಲೂ ನನಗೆ ಕ್ರೀಡೆಯ ಮೇಲೆ ಆಸಕ್ತಿ ಹೊಂದಿದ್ದೇನೆ. ಪ್ಯಾರಾಚೂಟ್​, ಬಂಗೀ ಜಂಪಿಂಗ್​, ರ್ಯಾಪ್ಟಿಂಗ್​ ಮುಂತಾದ ಕ್ರೀಡೆಯ ಮೇಲೆ ಆಸಕ್ತಿ ಇದೆ ಎಂದು ಹೇಳಿದ್ದರು. ಮದುವೆಗೂ ಮುನ್ನವೇ ಇನ್ಸುರೆನ್ಸ್​ ಹೊಂದಿರುವುದಾಗಿ ಸೆಮ್ರಾ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಪೂರ್ವ ನಿಯೋಜಿತವಾಗಿ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

    ದುಡ್ಡಿನ ದಾಹ- ಯುವತಿಯ ಸುಟ್ಟುಹಾಕಿದ ಪಾಪಿಗಳು: ಕೇಸ್‌ ಮುಚ್ಚಿಹಾಕಲು ಅಡ್ಡ ಬಂತು ಈ ಆಡಿಯೋ ರಿಕಾರ್ಡಿಂಗ್‌!

    ಮದ್ವೆ ಪ್ರಸ್ತಾವನೆ ಬೆನ್ನಲ್ಲೇ ಪ್ರಿಯಕರ ಕಳುಹಿಸಿದ ವಾಟ್ಸ್​ಆ್ಯಪ್​ ಸಂದೇಶ ನೋಡಿ​ ಬೆಚ್ಚಿಬಿದ್ದ ಮಾಜಿ ಪ್ರೇಯಸಿ!

    ರಾಮ ಮಂದಿರ ಹೆಸ್ರಲ್ಲಿ ಯಾರ‍್ಯಾರೋ ಹಣ ಲೂಟಿ ಮಾಡ್ತಾರೆ, ನನ್ನ ಮನೆಗೂ ಬಂದು ಬೆದರಿಕೆ ಹಾಕಿದ್ರು: ಎಚ್​ಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts