More

    VIDEO| ಟರ್ಕಿ ಕೋಳಿಗಳಿಗೆ ರಸ್ತೆ ದಾಟಲು ಸಹಾಯ ಮಾಡಿದ ಸಾರ್ವಜನಿಕರು: ಜಾಲತಾಣದಲ್ಲಿ ವಿಡಿಯೋ ವೈರಲ್​​

    ಇಸ್ತಾಂಬುಲ್​: ಟರ್ಕಿ ರಾಷ್ಟ್ರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಟರ್ಕಿ ಕೋಳಿಗಳು ರಸ್ತೆ ದಾಟಲು ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಹಾಯ ಮಾಡುತ್ತಿರುವ ವಿಡಿಯೋ ಚಿತ್ರ ವೈರಲ್​ ಆಗಿದೆ.

    ಭಾರತೀಯ ಅರಣ್ಯ ಸೇವೆಯಲ್ಲಿರುವ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಅಪ್​ಲೋಡ್​ ಆದ ಹಲವು ತಾಸುಗಳಲ್ಲೇ ವಿಡಿಯೋ ವೈರಲ್​ ಆಗಿದೆ. ಅಂದಾಜು 3, 400 ಮಂದಿ ವೀಕ್ಷಣೆ ಮಾಡಿದ್ದಾರೆ.

    ಹೆಚ್ಚು ವಾಹನಗಳ ಸಂಚಾರ ಇರುವ ಟರ್ಕಿಯ ರಸ್ತೆಯಲ್ಲಿ ಟಿರ್ಕಿ ಕೋಳಿಗಳ ಹಿಂಡು ರಸ್ತೆ ದಾಟಲು ಮುಂದಾಗುತ್ತದೆ.  ಕೋಳಿಗಳ ಹಿಂಡಿನ ನಾಯಕ ಟರ್ಕಿ ಕೋಳಿ ಮೊದಲು ರಸ್ತೆ ಮಧ್ಯಕ್ಕೆ ಬಂದು ನಿಲ್ಲುತ್ತದೆ. ನಂತರ ಇತರ ಕೋಳಿಗಳು ಒಂದೊಂದಾಗಿ ರಸ್ತೆ ದಾಟುತ್ತವೆ. ಎಲ್ಲ ಕೋಳಿಗಳು ರಸ್ತೆ ದಾಟಿದ ನಂತರ ನಾಯಕ ಕೋಳಿ ಕೊನೆಗೆ ರಸ್ತೆ ದಾಟುತ್ತದೆ. ಕೋಳಿಗಳು ರಸ್ತೆ ದಾಟುವ ವೇಳೆ ಸಾರ್ವಜನಿಕರು ತಾವು ಚಲಿಸುತ್ತಿದ್ದ ಕಾರು, ಬೈಕ್​ ಹಾಗೂ ಇತರ ವಾಹನಗಳನ್ನು ನಿಲ್ಲಿಸಿ ಅವುಗಳು ರಸ್ತೆ ದಾಟಲು ಅನುವು ಮಾಡಿಕೊಡುತ್ತಾರೆ. ಅವುಗಳು ರಸ್ತೆ ದಾಟಿದ ನಂತರ ಸಾರ್ವಜನಿಕರು ಮುಂದಕ್ಕೆ ಸಾಗುತ್ತಾರೆ.

    ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಅಲ್ಲಿನ ಸಾರ್ವಜನಿಕರ ನಡೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಕೋಳಿ ಹಿಂಡಿನ ನಾಯಕನ ಕರ್ತವ್ಯವನ್ನು ಮೆಚ್ಚಿಕೊಂಡಿದ್ದಾರೆ. ಕೊನೆಯ ಕೋಳಿಯನ್ನು ರಸ್ತೆ ದಾಟಿಸಿದ ನಂತರ ತೆರಳುವ ಅದರ ಕರ್ತವ್ಯ ಶ್ಲಾಘನೀಯ. ನಗರಗಳಲ್ಲಿ ಜನರು ಆತುರದಲ್ಲಿ ಇರುತ್ತಾರೆ. ಇಂತ ಸಮಯದಲ್ಲಿ ಟರ್ಕಿ ಕೋಳಿಗಳಿಗೆ ರಸ್ತೆ ದಾಟಲು ಕಾಯುವುದು ಮಾನವೀಯತೆಯ ಎಂದು ಹೊಗಳಿದ್ದಾರೆ. (ಏಜೆನ್ಸೀಸ್​)

    ಮದ್ಯ ಕೇಳಿದ ವೈದ್ಯನಿಗೆ ಹೈಕೋರ್ಟ್ ಕೊಟ್ಟ ಇನಾಮು ಏನು ಗೊತ್ತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts