More

    ಕೇಂದ್ರ ಸಚಿವರ ಮನಗೆದ್ದಿರುವ ಸುರಂಗ ಮಾರ್ಗದಲ್ಲಿ ಮಳೆ ನೀರು ಸೋರಿಕೆ

    ಹೊಸಪೇಟೆ: ಇತ್ತೀಚೆಗಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪ್ರಶಂಸೆಗೆ ಪಾತ್ರವಾಗಿರುವ ಹೊಸಪೇಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುರಂಗ ಮಾರ್ಗದ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಳೆ ನೀರು ಸೋರುತ್ತಿದೆ.

    ಕಳೆದ ಸೋಮವಾರದಿಂದ ನಿರಂತರ ಮಳೆಗೆ ಟನಲ್‌ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿದ್ದು, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಸುಮಾರು 500 ಮೀಟರ್ ಉದ್ದವಿರುವ ಸುರಂಗ ಮಾರ್ಗವನ್ನು ಸಿಮೆಂಟ್ ಬ್ಲಾಕ್ಸ್‌ಗಳಿಂದ ನಿರ್ಮಿಸಲಾಗಿದೆ. ಬ್ಲಾಕ್ಸ್‌ಗಳ ಸಂದಿಗಳಲ್ಲಿ ಮತ್ತು ಮೇಲ್ಛಾವಣಿಯಲ್ಲಿ ಸೋರಿಕೆ ಕಂಡು ಬಂದಿದೆ. ಇದರಿಂದಾಗಿ ಸುರಂಗದಲ್ಲಿ ಮಳೆ ನೀರು ಸಂಗ್ರಹವಾಗತ್ತಿದ್ದು, ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

    ರಾಷ್ಟ್ರೀಯ ಹೆದ್ದಾರಿ 50ರ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಪರಿಸರಕ್ಕೆ ಧಕ್ಕೆಯಾಗದ ರೀತಿ ಸುರಂಗ ಕೊರೆದು ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಚತುಷ್ಪಥ ರಸ್ತೆ ಸುರಂಗ ಮಾರ್ಗದಿಂದ ಮಹಾರಾಷ್ಟ್ರ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸಾರಿಗೆ ಸಚಿನ ನಿತಿನ್ ಗಡ್ಕರಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.

    ಆದರೆ ಇದೀಗ ಸುರಂಗದಲ್ಲಿ ಸೋರಿಕೆ ಕಂಡು ಬಂದಿದ್ದು, ಕೇಂದ್ರ ಸಚಿವರಿಗೆ ಮುಜುಗರದ ಸಂಗತಿ. ಅಲ್ಲದೇ, ಟನಲ್ ಬಗ್ಗೆ ಭಾರಿ ಮೆಚ್ಚುಗೆ ನುಡಿಗಳನ್ನಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಈಗ ಏನು ಹೇಳುತ್ತಾರೆ ಎಂಬುದು ವಿಪಕ್ಷಗಳ ಪ್ರಶ್ನೆಯಾಗಿದೆ.

    ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ: ನಾಳೆಯೂ ಕರಾವಳಿ, ಮಲೆನಾಡಲ್ಲಿ ರೆಡ್ ಅಲರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts