More

    ಶಿರಾಡಿಯಲ್ಲಿ ರೈಲ್ವೆಗೂ ಸುರಂಗ ಮಾರ್ಗ

    ಮಂಗಳೂರು: ಮಂಗಳೂರು -ಬೆಂಗಳೂರು ಮಧ್ಯೆ ಸರಕು ಸಾಗಾಟಕ್ಕೆ ವೇಗ ಕೊಡುವ ಉದ್ದೇಶದಿಂದ ಕೇವಲ ರಸ್ತೆ ಮಾತ್ರವಲ್ಲ, ರೈಲ್ವೆಗೂ ಸುರಂಗ ಮಾರ್ಗ ಯೋಜನೆ ರೂಪಿಸಬೇಕು ಎಂದು ಭಾರತೀಯ ಕೈಗಾರಿಕೆಗಳ ಮಹಾಒಕ್ಕೂಟ (ಸಿಐಐ) ಮಂಗಳೂರು ಶಾಖೆಯ ನೂತನ ಅಧ್ಯಕ್ಷ ಜೀವನ್ ಸಾಲ್ದಾನ್ಹ ಒತ್ತಾಯಿಸಿದ್ದಾರೆ.

    ಸಿಐಐ ಮಂಗಳೂರು ನೇತೃತ್ವದಲ್ಲಿ ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಸೋಮವಾರ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಿಕ್ಕಿಂನಲ್ಲಿ ಈಗಾಗಲೇ ಇದೇ ಮಾದರಿಯ ಯೋಜನೆ ಕಾರ್ಯಗತವಾಗುತ್ತಿದೆ. ನಮ್ಮಲ್ಲಿ ಶಿರಾಡಿ ಘಾಟ್ ಮಾರ್ಗ ದುರ್ಗಮ ಆಗಿರುವ ಹಿನ್ನೆಲೆಯಲ್ಲಿ ಒಳನಾಡಿನ ಸರಕು ನವಮಂಗಳೂರಿಗೆ ಬರದೆ ಚೆನ್ನೈ ಕಡೆಗೆ ಹೋಗುತ್ತಿದೆ, ರೈಲ್ವೆ ಸುರಂಗವಾದರೆ ವೇಗವಾಗಿ ಸರಕು ತರುವುದು ಸಾಧ್ಯವಾಗಲಿದೆ ಎಂದರು.

    ಮೂಡುಬಿದಿರೆ-ಕಾರ್ಕಳ ಹೆದ್ದಾರಿ ಅಭಿವೃದ್ಧಿಯಾದರೆ ಗಂಜಿಮಠದಲ್ಲಿ ನಡೆಯಲಿರುವ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ವೇಗ ದೊರೆಯಲಿದೆ. ಮಂಗಳೂರು ನಗರದ ಟ್ರಾಫಿಕ್ ಒತ್ತಡ ನಿವಾರಿಸಲು ರಿಂಗ್ ರೋಡ್ ಪರಿಕಲ್ಪನೆ ಜಾರಿಯಾಗಬೇಕಿದೆ. ಕೆಸಿಸಿಐ ಒತ್ತು ನೀಡುತ್ತಿರುವ ಐಟಿ ಪಾರ್ಕ್ ನಿರ್ಮಾಣ ಯೋಜನೆಯ ಮೂಲಕ ಕರಾವಳಿಯ ಆರ್ಥಿಕ ಚಟುವಟಿಕೆ ಇನ್ನಷ್ಟು ವೇಗ ಪಡೆಯಲು ಸಾಧ್ಯವಿದೆ. ಾರ್ಮಾ ಪಾರ್ಕ್ ಅಭಿವೃದ್ಧಿಗೆ ಬಹಳಷ್ಟು ಅವಕಾಶವಿದೆ. ವಾಟರ್ ಸ್ಪೋರ್ಟ್ಸ್, ಹೌಸ್ ಬೋರ್ಟ್ಸ್, ಬೀಚ್ ರಿಸೋರ್ಟ್, ಸರ್ಫಿಂಗ್ ಸೇರಿದಂತೆ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿ ನೆಲೆಯಲ್ಲಿಯೂ ವಿಶೇಷ ಯೋಜನೆಗಳಿಗೆ ಅವಕಾಶವಿದೆ. ಜತೆಗೆ ಮೆರಿಟೈಮ್ ಬೋರ್ಡ್ ರಚನೆ ಸಂಬಂಧ ಸರಕಾರದ ಗಮನಸೆಳೆಯಲಾಗುವುದು ಎಂದರು.

    ಸಿಐಐ ಕರ್ನಾಟಕದ ಅಧ್ಯಕ್ಷ ಹಾಗೂ ಟಾಟಾ ಹಿಟಾಚಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್, ಸಿಐಐ ಮಂಗಳೂರು ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕಲ್ಬಾವಿ, ಸಿಐಐ ನೂತನ ಉಪಾಧ್ಯಕ್ಷ ಗೌರವ್ ಹೆಗ್ಡೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts