More

    ಬೆಟ್ಟದ ಬುಡ…ಹೊಲಗಳಿಂದ ನುಸುಳಿ ಬರುತ್ತಿದ್ದಾರೆ ಅವರು…; ತುಮಕೂರಿನ ಗಡಿ ಗ್ರಾಮಗಳಲ್ಲಿ ಸೃಷ್ಟಿಯಾಗಿದೆ ಆತಂಕ

    ತುಮಕೂರು: ಲಾಕ್​ಡೌನ್​ ಇರಲಿ, ರಾಜ್ಯಗಳ ಗಡಿ ಭಾಗಗಳನ್ನು ಸೀಲ್​ ಮಾಡಿರಲಿ. ಒಂದಷ್ಟು ಜನರಿಗೆ ಅದೆಲ್ಲ ಲೆಕ್ಕಕ್ಕೇ ಇಲ್ಲ. ಕರೊನಾ ವೈರಸ್​ ಗಂಭೀರತೆಯ ಅರಿವೂ ಇಲ್ಲ.

    ತುಮಕೂರು ಗಡಿಯಲ್ಲಿ ನುಸುಳುಕೋರರ ಹಾವಳಿ ಹೆಚ್ಚಾಗಿದೆ. ಇದರಿಂದ ಗಡಿ ಗ್ರಾಮಗಳಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಆಂಧ್ರಪ್ರದೇಶದ ಜನರು ಪ್ರತಿದಿನ ಕರ್ನಾಕಕ್ಕೆ ತುಮಕೂರಿನ ಗಡಿ ಮೂಲಕ ನುಸುಳುತ್ತಿದ್ದಾರೆ.

    ಪಾವಗಡ ತಾಲೂಕಿನ ವೈ.ಎನ್​.ಹೊಸಕೋಟೆ ಗಡಿಯಲ್ಲಿ ಪೊಲೀಸ್​ ಬಿಗಿ ಭದ್ರತೆ ಇದೆ. ಇಲಾಖೆಯಿಂದ ಟ್ರಂಚ್​ ಹೊಡೆಸಿ, ಬೇಕಿ ಹಾಕಲಾಗಿದೆ. ಆದರೂ ಅಲ್ಲಲ್ಲೇ ಕಳ್ಳದಾರಿಯಲ್ಲಿ ನುಸುಳುತ್ತಿದ್ದಾರೆ. ಬೆಟ್ಟದ ಬುಡ, ಹೊಲಗಳಿಂದ ನುಗ್ಗುತ್ತಿದ್ದಾರೆ.

    ಹೀಗೆ ಆಂಧ್ರಪ್ರದೇಶದಿಂದ ನುಸುಳುತ್ತಿರುವವರಿಂದಾಗಿ ಗಡಿಭಾಗದ ಗ್ರಾಮಗಳಾದ ಭೀಮನಹಳ್ಳಿ, ದಳವಾಯಿಹಳ್ಳಿ, ಗೌಡತಿಮ್ಮನಹಳ್ಳಿ, ಜಾಲೋಡು, ಮಾರಮ್ಮನಹಳ್ಳಿಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಆಂಧ್ರಪ್ರದೇಶದಲ್ಲಿ ಕರೊನಾ ಸೋಂಕು ಹೆಚ್ಚಾಗಿದೆ. ಹೀಗಿರುವಾಗ ಅಲ್ಲಿಂದ ಬಂದು ಕರ್ನಾಟಕಕ್ಕೆ ನುಸುಳುವ ಜನರಿಂದ ಇಲ್ಲೂ ವೈರಸ್​ ಪ್ರಮಾಣ ಹೆಚ್ಚಾದರೆ ಏನು ಮಾಡುವುದು ಎಂಬ ಭೀತಿಯಲ್ಲಿಯೇ ಬದುಕುವಂತಾಗಿದೆ. (ದಿಗ್ವಿಜಯ ನ್ಯೂಸ್​)

    ‘ಚೀನಾದ ಮೇಲೆ ಖಂಡಿತ ಕೋಪವಿದೆ…’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​; ಡ್ರ್ಯಾಗನ್​ ರಾಷ್ಟ್ರಕ್ಕೊಂದು ಖಡಕ್​ ಎಚ್ಚರಿಕೆ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts