More

    ನಿಮ್ಮ ಮನೆ ‘ತುಳಸಿ’ ಜೋಪಾನ…ಮಿತಿಮೀರುತ್ತಿದೆ ಗಿಡಗಳ ಕಳ್ಳತನ…!

    ನವದೆಹಲಿ: ಕರೊನಾ ಬಂದ ಮೇಲೆ ಮನುಷ್ಯರ ಜೀವನ ಶೈಲಿ ಬದಲಾಗಿದೆ. ಈಗ ಪ್ರತಿಯೊಬ್ಬರೂ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಅದರಲ್ಲೂ ಔಷಧೀಯ ಗಿಡಮೂಲಿಕೆಗಳ ಮೊರೆ ಹೋಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

    ಈ ಮಧ್ಯೆ ಹರಿಯಾಣ ಮತ್ತು ಚಂಡಿಗಢ್​ಗಳಿಂದ ಒಂದು ವಿಚಿತ್ರ ವರದಿಯಾಗಿದೆ. ಇಲ್ಲಿನ ಹಲವು ಮನೆಗಳಲ್ಲಿ ಕಳ್ಳತನ ಹೆಚ್ಚಾಗಿದೆ. ಆದರೆ ಹಣ, ಬೆಳ್ಳಿ-ಬಂಗಾರದ ಒಡವೆಗಳಲ್ಲ ಬದಲಿಗೆ ಮನೆಯ ಆವರಣದಲ್ಲಿ ಇರುವ, ಪಾಟ್​ಗಳಲ್ಲಿ ಬೆಳೆಸಲಾದ ತುಳಸಿಗಿಡಗಳು ನಿಗೂಢವಾಗಿ ಕಣ್ಮರೆಯಾಗುತ್ತಿವೆ. ಇದನ್ನೂ ಓದಿ:  ನಿಖಿಲ್​ ಕುಮಾರಸ್ವಾಮಿಗೆ ಸ್ವಪಕ್ಷದವರಿಂದಲೇ ಬೈಗುಳ! ಜೆಡಿಎಸ್​ ಯುವರಾಜನ ಸಮಜಾಯಿಷಿಗೂ ಕರಗಲಿಲ್ಲ ಕಾರ್ಯಕರ್ತರ ಆಕ್ರೋಶ

    ತುಳಸಿ ಶೀತ, ಕೆಮ್ಮುಗಳನ್ನು ಗುಣಪಡಿಸುತ್ತದೆ. ಅಷ್ಟೇ ಅಲ್ಲ ತುಳಸಿಯಲ್ಲಿ ಕೆಟ್ಟ ಬ್ಯಾಕ್ಟೀರಿಯಾ ಮತ್ತು ವೈರಸ್​ಗಳನ್ನು ಕೊಲ್ಲುವ ಶಕ್ತಿ ಇದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೇ ಕಾರಣಕ್ಕೆ ತುಳಸಿಗೆ ಬೇಡಿಕೆ ಹೆಚ್ಚಾಗಿದೆ.

    ಚಂಡಿಗಢ್​, ಫರಿದಾಬಾದ್​, ಕರ್ನಲ್​, ಹಿಸಾರ್​ ಮತ್ತು ಗುರ್​​ಗಾಂವ್​​ಗಳಲ್ಲಿ ತುಳಸಿ ಕಳ್ಳತನ ಮಿತಿಮೀರಿದೆ. ಮೊದಮೊದಲು ತುಳಸಿ ಗಿಡ ಇರುವವರ ಮನೆಗೆ, ಇಲ್ಲದವರು ಬಂದು ಕೇಳಿ, ಒಂದಷ್ಟು ಎಲೆಗಳನ್ನು ಪಡೆದು ಹೋಗುತ್ತಿದ್ದರು. ಆದರೆ ಈಗೀಗ ರಾತ್ರಿ ಬೆಳಗಾಗುವಷ್ಟರಲ್ಲಿ ಗಿಡಗಳೇ ಕಳವಾಗುತ್ತಿವೆ. ಈ ಬಗ್ಗೆ ಅನೇಕರು ದೂರಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ ಅವರಿಗೆ ಕೋವಿಡ್​ 19 ಪಾಸಿಟಿವ್​

    ಅಷ್ಟೇ ಅಲ್ಲ ತುಳಸಿ ನರ್ಸರಿಗಳಿಂದಲೂ ಗಿಡಗಳನ್ನು ಕಳವು ಮಾಡಲಾಗುತ್ತಿದೆ. ತುಳಸಿ ಗಿಡಗಳ ಬೆಲೆ ಏರಿಕೆ ಆಗಿರುವುದರಿಂದ ಕಳ್ಳತನದ ಪ್ರಕರಣಗಳೂ ಅತ್ಯಧಿಕವಾಗುತ್ತಿವೆ ಎಂದು ಹೇಳಲಾಗಿದೆ.

    ತುಳಸಿಯನ್ನು ಲಕ್ಷ್ಮೀ ದೇವಿ ಎಂದು ಮನೆಮನೆಯಲ್ಲೂ ಪೂಜಿಸಲಾಗುತ್ತಿದೆ. ಗೃಹಿಣಿಯರು ನಿತ್ಯಪೂಜೆ ಮಾಡುತ್ತಾರೆ. ಈಗಂತೂ ಕರೊನಾ ಇರುವುದರಿಂದ ಅದನ್ನು ಔಷಧಿಗೂ ಬಳಸಲಾಗುತ್ತಿರುವುದರಿಂದ ಅದನ್ನೇ ಕಳ್ಳರು ಎಗರಿಸುತ್ತಿದ್ದಾರೆ. ಅವರು ತಮ್ಮ ಸ್ವಂತ ಬಳಕೆಗೆ ತೆಗೆದುಕೊಂಡುಹೋಗುತ್ತಿದ್ದಾರೋ, ಮಾರಾಟ ಮಾಡಿ, ಹಣ ಗಳಿಸಲು ಹೊತ್ತೊಯ್ಯುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಮಾಧ್ಯಮಗಳು ಬರೆದಿವೆ. (ಏಜೆನ್ಸೀಸ್​)

    ಶ್ರಮಿಕ್​ ರೈಲುಗಳಿಂದ ಬಂದ ಆದಾಯ ಕೇವಲ 429 ಕೋಟಿ ರೂ. ಆದ್ರೂ ಲಾಭ ಮಾಡಿಕೊಂಡ್ರು ಎಂದ ರಾಹುಲ್​ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts