More

    ಮಂಗಳವಾರ 228 ಜನರಿಗೆ ಸೋಂಕು, 6 ಸಾವು

    ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಂಗಳವಾರವೂ ಕರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಕೋವಿಡ್-19 ಆಸ್ಪತ್ರೆಯ ಬಿಮ್ಸ್ ವಸತಿ ಗೃಹದ 3 ಮತ್ತು ಉಜ್ವಲ ನಗರದ 2 ವರ್ಷದ ಹೆಣ್ಣು ಮಗು ಸೇರಿದಂತೆ ಮಂಗಳವಾರ ಒಂದೇ ದಿನ 228 ಜನರಲ್ಲಿ ಮಾರಕ ಸೋಂಕು ಪತ್ತೆಯಾಗಿದೆ. ಓರ್ವ ವೃದ್ಧೆ ಸೇರಿದಂತೆ ಒಟ್ಟು ಆರು ಜನರು ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.

    ಜಿಲ್ಲಾ ಆರೋಗ್ಯ ಇಲಾಖೆಯ ಮಂಗಳವಾರದ ಮಾಹಿತಿ ಪ್ರಕಾರ ಅಥಣಿಯ 58 ವರ್ಷದ ಪುರುಷ, ಬೈಲಹೊಂಗಲದ 44 ವರ್ಷದ ಪುರುಷ, ಸವದತ್ತಿಯ 65 ವರ್ಷದ ವೃದ್ಧೆ, ಕುಡಚಿ-ರಾಯಬಾಗದ 50 ವರ್ಷದ ಮಹಿಳೆ, ಬೆಳಗಾವಿಯ 54 ವರ್ಷದ ಹಾಗೂ ರಾಯಬಾಗದ 46 ವರ್ಷದ ಪುರುಷರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಪತ್ತೆಯಾದ 228 ಪ್ರಕರಣಗಳಲ್ಲಿ ಬೆಳಗಾವಿ ತಾಲೂಕಿನಲ್ಲಿ 96, ಗೋಕಾಕ 24, ಅಥಣಿ 36, ಚಿಕ್ಕೋಡಿ 11, ರಾಯಬಾಗ 11, ಬೈಲಹೊಂಗಲ 14, ಸವದತ್ತಿ 6, ರಾಮದುರ್ಗ 6, ಹುಕ್ಕೇರಿ 8 ಹಾಗೂ ಖಾನಾಪುರ ತಾಲೂಕಿನ 6 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

    ಈವರೆಗೆ ಜಿಲ್ಲಾದ್ಯಂತ ಒಟ್ಟು 2,538 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, ಅವರಲ್ಲಿ 739 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 1,741 ಜನ ಬಿಮ್ಸ್ ಹಾಗೂ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts