More

    ಸೊಂಟ ಮತ್ತು ಬೆನ್ನು ನೋವು ತಡೆಯಲು ಈ ಯೋಗಾಸನ ಉಪಕಾರಿ

    ಸೊಂಟ ನೋವು ಮತ್ತು ಬೆನ್ನು ನೋವು ನಿಯಂತ್ರಣಕ್ಕೆ ಉಪಯುಕ್ತವಾದ ಆಸನ, ಸೇತುಬಂಧ ಸರ್ವಾಂಗಾಸನ. ಈ ಆಸನದಲ್ಲಿ ದೇಹವು ಸೇತುವೆ ಆಕಾರವನ್ನು ಹೋಲುತ್ತದೆ. ಅಸ್ತಮಾ ನಿಯಂತ್ರಣ ಮತ್ತು ಥೈರಾಯ್ಡ್​ ಗ್ರಂಥಿಯ ಆರೋಗ್ಯವರ್ಧನೆಗೂ ಇದು ಉತ್ತಮ ವ್ಯಾಯಾಮ.

    ಪ್ರಯೋಜನಗಳು : ಜಮಖಾನದ ಮೇಲೆ ಅಂಗಾತ ಮಲಗಿ. ಎರಡೂ ಕಾಲುಗಳನ್ನು ಮಡಿಸಿ. ಕೈಗಳು ಹಿಮ್ಮಡಿಯ ಭಾಗಕ್ಕೆ ತಾಗುವಂತೆ ಚಾಚಿರಬೇಕು. ಪಾದಗಳು ನೆಲಕ್ಕೆ ಊರಿರಬೇಕು. ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಪೃಷ್ಠದ ಭಾಗವನ್ನು ಸಾಧ್ಯವಾದಷ್ಟೂ ಮೇಲಕ್ಕೆ ಎತ್ತಿ. ಬೆನ್ನು ಮೇಲ್ಮುಖವಾಗಿ ಕಮಾನಿನಂತೆ ಬಾಗಿಸಿ. ಹೊಟ್ಟೆ, ಎದೆಯ ಭಾಗ ಸಾಧ್ಯವಾದಷ್ಟೂ ಮೇಲಕ್ಕೆ ಎತ್ತಿ. ಹಸ್ತದಿಂದ ಪಾದಗಳ ಹಿಮ್ಮಡಿಯ ಭಾಗವನ್ನು ಹಿಡಿದುಕೊಳ್ಳಿ. ಗಲ್ಲವು ಕಾಲರ್​ ಬೋನ್​ಗೆ ತಾಗುವಂತಿರಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ. ನಂತರ ಉಸಿರನ್ನು ಬಿಡುತ್ತಾ ನಿಧಾನವಾಗಿ ಪೃಷ್ಠವನ್ನು ಕೆಳಗಿಳಿಸಿ ವಿಶ್ರಮಿಸಬೇಕು.

    ಇದನ್ನೂ ಓದಿ: ಮುಟ್ಟಿನ ದೋಷ ಮತ್ತು ಹೊಟ್ಟೆಯ ಬೊಜ್ಜಿಗೆ ಇದು ರಾಮಬಾಣ!

    ಅಭ್ಯಾಸ ಕ್ರಮ : ಸೊಂಟ ನೋವು, ಬೆನ್ನು ನೋವು ನಿಯಂತ್ರಣವಾಗುತ್ತದೆ. ಅಸ್ತಮಾ ನಿಯಂತ್ರಣವಾಗುತ್ತದೆ. ಥೈರಾಯ್ಡ್​ ಗ್ರಂಥಿಯ ಆರೋಗ್ಯವರ್ಧನೆಯಾಗುತ್ತದೆ. ಭುಜಗಳು ಬಲಿಷ್ಠವಾಗುತ್ತವೆ. ಉದರದ ಭಾಗಕ್ಕೆ ವ್ಯಾಯಾಮ ದೊರಕಿ ಜೀರ್ಣಕ್ರಿಯೆಗೆ ಸಹಾಯ ದೊರಕುತ್ತದೆ. ಮುಟ್ಟಿನ ದೋಷ ಸಹ ನಿಯಂತ್ರಣವಾಗುತ್ತದೆ. ಶಿರಸ್ಸಿಗೆ ರಕ್ತ ಸಂಚಲನೆ ಹೆಚ್ಚುವುದರಿಂದ ಆತಂಕ, ಮನಸ್ಸಿಗೆ ಆಯಾಸ, ತಲೆನೋವು ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತವೆ.

    ಪೆಪ್ಟಿಕ್ ಅಲ್ಸರ್, ಉದರದ ಹರ್ನಿಯಾ ಇರುವವರು ಈ ಆಸನ ಅಭ್ಯಾಸ ಮಾಡುವುದು ಬೇಡ.

    ಅಭಿಷೇಕ್ ಬ್ಯಾನರ್ಜಿ, ಬಂಗಾಳ ಸಚಿವ ಬ್ರತ್ಯ ಬಸು ವಿರುದ್ಧ ಕೇಸ್​!

    ಗಾಲ್ಫ್​ನಲ್ಲಿ ಪದಕ ಜಸ್ಟ್​ ಮಿಸ್! ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts