More

    ಪತ್ನಿಯಿಂದ ಹೇರ್‌ಕಟ್ ಮಾಡಿಸಿಕೊಳ್ಳಲು ಎದೆಗಾರಿಕೆ ಬೇಕೆಂದ ಪೂಜಾರ!

    ಬೆಂಗಳೂರು: ಲಾಕ್‌ಡೌನ್ ಸಮಯದಲ್ಲಿ ಸೆಲೂನ್‌ಗಳು ಬಂದ್ ಆಗಿದ್ದರಿಂದ ಹೇರ್‌ಕಟ್ ಮಾಡಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಹೆಚ್ಚಿನವರು ಪತ್ನಿಯಿಂದಲೇ ಹೇರ್‌ಕಟ್ ಮಾಡಿಸಿಕೊಳ್ಳುತ್ತಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಪತ್ನಿ ಅನುಷ್ಕಾ ಶರ್ಮರಿಂದಲೇ ಹೇರ್‌ಕಟ್ ಮಾಡಿಸಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಗಮನ ಸೆಳೆದಿದ್ದರು. ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಕೂಡ ಈಗ ತಂಡದ ನಾಯಕನ ಹಾದಿಯನ್ನೇ ಹಿಡಿದಿದ್ದಾರೆ. ಪತ್ನಿ ಪೂಜಾ ಪಬರಿ ಅವರಿಂದ ಹೇರ್‌ಕಟ್ ಮಾಡಿಸಿಕೊಳ್ಳುತ್ತಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಪೂಜಾರ, ಇದು ಭಾರಿ ಧೈರ್ಯದ ಕೆಲಸ ಎಂದೂ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: VIDEO: ಪಾಂಡ್ಯ ಸಹೋದರರ ಸಂಗೀತ ಪ್ರೇಮ

    ‘99 ರನ್ ಗಳಿಸಿ ಆಡುತ್ತಿರುವಾಗ ಸಿಂಗಲ್ಸ್ ಕಸಿಯಲು ನಿಮ್ಮ ಬ್ಯಾಟಿಂಗ್ ಜತೆಗಾರನನ್ನು ನಂಬುವುದು ಅಥವಾ ಹೇರ್‌ಕಟ್ ಮಾಡಿಕೊಳ್ಳಲು ಪತ್ನಿಯನ್ನು ನಂಬುವುದು. ಇವೆರಡರಲ್ಲಿ ಯಾವುದು ಹೆಚ್ಚು ಎದೆಗಾರಿಕೆಯ ಕೆಲಸ?’ ಎಂದು ಪೂಜಾರ ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ, ‘ಖಂಡಿತವಾಗಿಯೂ ಎರಡನೆಯದು’ ಎಂದು ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಪ್ರತಿಕ್ರಿಯಿಸಿದ್ದಾರೆ.

    ಪತ್ನಿಯಿಂದ ಹೇರ್‌ಕಟ್ ಮಾಡಿಸಿಕೊಳ್ಳಲು ಎದೆಗಾರಿಕೆ ಬೇಕೆಂದ ಪೂಜಾರ!

    ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳ ನೆಚ್ಚಿನ ಸಂಗಾತಿ ಯಾರು ಗೊತ್ತೇ?

    ಪೂಜಾರ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿ, ‘ನೀವು ಈ ರೀತಿಯ ಅಡಿಬರಹ ಬರೆದಿರುವುದು ಅದಕ್ಕಿಂತ ಹೆಚ್ಚು ಎದೆಗಾರಿಕೆಯ ಕೆಲಸ’ ಎಂದು ಜೋಕ್ ಮಾಡಿದ್ದಾರೆ. ‘ಹೆಂಡತಿಗಿಂತ ಜತೆಗಾರ ಬ್ಯಾಟ್ಸ್‌ಮನ್‌ನನ್ನು ನಂಬುವುದೇ ಉತ್ತಮ’ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, ‘ನಿಮ್ಮ ಪತ್ನಿ ನಿಜಕ್ಕೂ ಉತ್ತಮ ಕೆಲಸ ನಿರ್ವಹಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಪತ್ನಿಯಿಂದ ಹೇರ್‌ಕಟ್ ಮಾಡಿಸಿಕೊಂಡ ಬೆನ್ನಲ್ಲೇ ಮತ್ತೋರ್ವ ಕ್ರಿಕೆಟಿಗ ಸುರೇಶ್ ರೈನಾ ಕೂಡ ಬಾಣಂತಿ ಪತ್ನಿ ಪ್ರಿಯಾಂಕಾ ಚೌಧರಿಯಿಂದ ಹೇರ್‌ಕಟ್ ಮಾಡಿಸಿಕೊಂಡು ಗಮನಸೆಳೆದಿದ್ದರು. ಲಾಕ್‌ಡೌನ್ ಸಮಯದಲ್ಲಿ ಪತ್ನಿ ಪೂಜಾ ಮತ್ತು ಪುತ್ರಿ ಅದಿತಿ ಜತೆಗೆ ಹೆಚ್ಚಿನ ಸಮಯ ಕಳೆಯುತ್ತಿರುವ ಪೂಜಾರ, ಮನೆಕೆಲಸದಲ್ಲೂ ಪತ್ನಿಗೆ ನೆರವಾಗುತ್ತಿದ್ದಾರೆ. ಗಿಡಕ್ಕೆ ನೀರು ಹಾಕುವುದು, ವ್ಯಾಕ್ಯೂಂ ಕ್ಲೀನರ್‌ನಿಂದ ಮನೆ ಸ್ವಚ್ಛಗೊಳಿಸುವುದು ಮತ್ತು ಅಡುಗೆಗೆ ತರಕಾರಿ ಕತ್ತರಿಸುವ ಕೆಲಸದಲ್ಲೂ ಪತ್ನಿಗೆ ನೆರವಾಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts