More

    ಎಡವಟ್ಟು ಮಾಡಿಕೊಂಡ್ರು ಅಮೆರಿಕ ಅಧ್ಯಕ್ಷ ಟ್ರಂಪ್​!

    ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಕಾರ್ಯವೈಖರಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ವಿವಾದಕ್ಕೀಡಾಗುತ್ತಿದೆ. ಇವೆಲ್ಲದರ ನಡುವೆ, ಅಧ್ಯಕ್ಷೀಯ ಚುನಾವಣೆ ಸಮೀಪದಲ್ಲಿರುವಾಗಲೇ ಅವರು ಭಾರಿ ಎಡವಟ್ಟು ಮಾಡಿಕೊಂಡಿದ್ದಾರೆ.

    ತನ್ನ ಬೆಂಬಲಿಗರ ಕೂಗುತ್ತಿದ್ದ ವೈಟ್​ ಪವರ್ ಘೋಷಣೆಯ ವಿಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಈ ಘೋಷಣೆ ಜನಾಂಗೀಯ ಧೋರಣೆಗೆ ಸಂಬಂಧಿಸಿದ್ದಾಗುತ್ತದೆ ಎಂಬ ತಪ್ಪಿನ ಅರಿವು ಅವರಿಗೆ ಆಗುತ್ತಲೇ ಆ ವಿವಾದಾತ್ಮಕ ವಿಡಿಯೋ ಟ್ವೀಟ್​ ಅನ್ನು ಟ್ರಂಪ್ ಡಿಲೀಟ್ ಮಾಡಿದ್ದಾರೆ.

    ಇದನ್ನೂ ಓದಿ:  ‘ಕರೊನಾ ಕವಚ್’​ ಇದ್ದರೆ ಸಾಕು ಚಿಂತೆ ದೂರ

    ವಿಡಿಯೋ ದೃಶ್ಯ ದ ವಿಲೇಜಸ್ ಎಂಬ ಫ್ಲೋರಿಡಾ ರಿಟೈರ್​ಮೆಂಟ್ ಕಮ್ಯೂನಿಟಿಯದ್ದಾಗಿತ್ತು. ಅಲ್ಲಿ ಟ್ರಂಪ್ ಪರ ಮತ್ತು ವಿರೋಧಿಗಳು ಎದುರುಬದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ವೈಟ್ ಪವರ್ ಘೋಷಣೆಯನ್ನು ಅವರು ಕೂಗಿದ್ದರು. ಈ ವಿಡಿಯೋವನ್ನೇ ಟ್ರಂಪ್ ಭಾನುವಾರ ಟ್ವೀಟ್ ಮಾಡಿದ್ದು, ಥಾಂಕ್​ ಯೂ ಟು ದ ಗ್ರೇಟ್ ಪೀಪಲ್ ಆಫ್​ ದ ವಿಲೇಜಸ್​ ಎಂಬ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ:  ಕರೊನಾ ಹೊಸ ದಾಖಲೆ; ದೇಶಾದ್ಯಂತ ಒಂದೇ ದಿನ 20 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ

    ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ವೈಟ್ ಹೌಸ್​, ಅಧ್ಯಕ್ಷರಿಗೆ ವೈಟ್​ ಪವರ್ ಎಂಬ ಪದ ಕೇಳಿಸಿರಲಿಲ್ಲ. ಪ್ರಮಾದವಶಾತ್​ ಆ ವಿಡಿಯೋವನ್ನು ಅವರು ಟ್ವೀಟ್ ಮಾಡಿದ್ದರು ಎಂದು ಸಮಜಾಯಿಸಿ ನೀಡಿದೆ.  ವೈಟ್​ಹೌಸ್​ನ ವಕ್ತಾರ ಜುಡ್​ ಡೀರೆ ಈ ಬಗ್ಗೆ ಮಾತನಾಡಿದ್ದು, ಪ್ರೆಸಿಡೆಂಟ್ ಟ್ರಂಪ್ ಅವರು ದ ವಿಲೇಜಸ್​ನ ಭಾರಿ ದೊಡ್ಡ ಅಭಿಮಾನಿ. ವಿಡಿಯೋದಲ್ಲಿದ್ದ ಘೋಷಣೆಯನ್ನು ಅವರು ಆಲಿಸಿರಲಿಲ್ಲ. ಅವರ ಬೆಂಬಲಿಗರ ಭಾರಿ ಉತ್ಸಾಹವನ್ನಷ್ಟೇ ಅವರು ಗಮನಿಸಿ ವಿಡಿಯೋವನ್ನು ಟ್ವೀಟ್​ ಮಾಡಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಬೆಂಬಲಿಗರ ಘೋಷಣೆಯನ್ನು ಟ್ರಂಪ್ ಖಂಡಿಸಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ವೈಟ್​ ಹೌಸ್ ಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ. (ಏಜೆನ್ಸೀಸ್)

    ಗಲ್ವಾನ್ ನದಿ ತಿರುವಿನಲ್ಲಿ ಬೀಡುಬಿಟ್ಟಿದೆ; ಚೀನಾ ಸೇನೆ 16ಕ್ಕೂ ಹೆಚ್ಚು ಶಿಬಿರ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts