More

    ಟ್ವಿಟರ್​ಗೆ ವಾಪಸ್​ ಬನ್ನಿ ಎಂದು ಎಲಾನ್​ ಮಸ್ಕ್​ ಅಕೌಂಟ್​ ಓಪನ್​ ಮಾಡಿಸಿದ್ರೆ ಬೇಕಾಗಿಲ್ಲ ಎಂದ ಟ್ರಂಪ್!

    ನವದೆಹಲಿ: ಸದಾ ಸುದ್ದಿಯಲ್ಲಿರುವ ಎಲಾನ್​ ಮಸ್ಕ್​ ಇತ್ತೀಚೆಗೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರ ಬ್ಯಾನ್​ ಆಗಿದ್ದ ಖಾತೆಯನ್ನು ಮತ್ತೆ ತೆರೆಸಿದ್ದರು. ಆದರೆ ವಿಚಿತ್ರ ಎಂದರೆ ಟ್ವಿಟರ್​ನಂತಹ ಪ್ರಬಲ ಸಾಮಾಜಿಕ ಜಾಲತಾಣವನ್ನೇ ತಿರಸ್ಕರಿಸಿದ್ದಾರೆ!

    ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಖಾತೆಯನ್ನು ಬ್ಯಾನ್​ನಿಂದ ತೆಗೆದಿದ್ದರೂ ಟ್ವಿಟರ್​ಅನ್ನು ತಿರಸ್ಕರಿಸಿದ್ದಾರೆ. ‘ಈಗ ಟ್ವಿಟರ್‌ಗೆ ಮರಳಲು ಯಾವುದೇ ಕಾರಣ ಕಾಣುತ್ತಿಲ್ಲ’ ಎಂದು ಟ್ರಂಪ್​ ಹೇಳಿದ್ದಾರೆ. ರಿಪಬ್ಲಿಕನ್ ಯಹೂದಿ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ‘ನನಗೆ ಟ್ವಿಟರ್​ಗೆ ಮತ್ತೆ ಬರಲು ಯಾವುದೇ ರೀತಿಯ ಕಾರಣ ಕಾಣಿಸುತ್ತಿಲ್ಲ’ ಅಮೆರಿಕದ ಮಾಜಿ ಅಧ್ಯಕ್ಷ ತಮ್ಮ ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ (ಟಿಎಮ್‌ಟಿಜಿ) ಅಭಿವೃದ್ಧಿಪಡಿಸಿರುವ ಟ್ರೂತ್ ಸೋಶಿಯಲ್ ಎಂಬ ತಮ್ಮದೇ ಆದ ವೇದಿಕೆಯ ಮುಖಾಂತರ ಜನರನ್ನು ತಲುಪುವುದಾಗಿ ಹೇಳಿದರು.

    ಸಮೀಕ್ಷೆಯ ಆಧಾರದ ಮೇಲೆಎಲಾನ್​ ಮಸ್ಕ್​ ಭಾನುವಾರ ಟ್ವಿಟರ್​ಗೆ ವಾಪಸ್ಸಾಗಲು ಟ್ರಂಪ್‌ಗೆ ಅವಕಾಶ ನೀಡಲಾಗಿದೆ ಎಂದು ಘೋಷಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಎಲಾನ್​ ಮಸ್ಕ್​ ‘ಜನರು ಮಾತನಾಡಿದ್ದಾರೆ. ಟ್ರಂಪ್​ರ ಖಾತೆಯನ್ನು ಬ್ಯಾನ್​ನಿಂದ ತೆಗೆಯುತ್ತಿದ್ದೇವೆ’ ಎಂದು ಟ್ವೀಟ್​ ಮಾಡಿದ್ದರು. ತಮ್ಮ ಟ್ವೀಟ್​ನಲ್ಲಿ ‘ವೋಕ್ಸ್ ಪಾಪುಲಿ, ವೋಕ್ಸ್ ಡೀ’ ಎಂದು ಮಸಕ್​ ಬರೆದಿದ್ದು ಇದರರ್ಥ ‘ಜನರ ಧ್ವನಿ ದೇವರ ಧ್ವನಿ’

    ಈ ಮಧ್ಯೆ ಟ್ವಿಟರ್‌ನ ಅಮೆರಿಕದ ಕಂಟೆಂಟ್ ಪಾಲುದಾರಿಕೆಗಳ ಮುಖ್ಯಸ್ಥೆ ಸಾರಾ ರೋಸೆನ್, ಎಲಾನ್​ ಮಸ್ಕ್ ಟ್ರಂಪ್ ಅವರ ಖಾತೆಯನ್ನು ಆ್ಯಕ್ಟಿವೇಟ್​ ಮಾಡಿದ ನಂತರ ತಾವು ಟ್ವಿಟರ್​ ತ್ಯಜಿಸುವುದಾಗಿ ಘೋಷಿಸಿದ್ದಾರೆ. ಅಂದರೆ ಎಲಾನ್​ ಮಸ್ಕ್​ ಉದ್ದೇಶಿಸಿದ್ದು ನಡೆದಿಲ್ಲ. ಬದಲಾಗಿ ಮತ್ತೋರ್ವ ಮುಖ್ಯ ಸ್ಥಾನದಲ್ಲಿದ್ದ ಉದ್ಯೋಗಿಯನ್ನು ಕಳೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts