More

    ಟಾರ್ಗೆಟ್​ ಚೀನಾ, ಡಬ್ಲ್ಯುಎಚ್​ಒ ಜತೆಗಿನ ಸಂಬಂಧ ಕಟ್​: ಅಮೆರಿಕ ಅಧ್ಯಕ್ಷ

    ವಾಷಿಂಗ್ಟನ್​: ಜಾಗತಿಕವಾಗಿ ಕೋವಿಡ್​19 ಸಾಂಕ್ರಾಮಿಕ ರೋಗಕ್ಕೆ ಇಷ್ಟೊಂದು ಜನ ಬಲಿಯಾಗುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮತ್ತು ಚೀನಾ ಕಾರಣ ಎಂದು ಆರೋಪಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ಡಬ್ಲ್ಯುಎಚ್​ಒ ಜತೆಗಿನ ಸಂಬಂಧವನ್ನು ಅಮೆರಿಕ ಕಡಿದುಕೊಳ್ಳುತ್ತಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ, ಡಬ್ಲ್ಯುಎಚ್​ಒಗೆ ಕೊಡುತ್ತಿದ್ದ ಅನುದಾನವನ್ನು ಜಗತ್ತಿನ ಇತರೆ ಜಾಗತಿಕ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಕೊಡುವುದಾಗಿ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

    ಅವರು ವೈಟ್​ಹೌಸ್​ನ ರೋಸ್​ಗಾರ್ಡನ್​ನಲ್ಲಿ ನಡೆದ ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ, ಚೀನೀಯರು ಮತ್ತು ಚೀನಾ ವಿರುದ್ಧ ತೆಗೆದುಕೊಳ್ಳಲಿರುವ ಸರಣಿ ಕ್ರಮಗಳ ವಿವರವನ್ನು ಒದಗಿಸಿದರು.ಇದರಲ್ಲಿ ಚೀನೀಯರ ಅಮೆರಿಕ ಪ್ರವೇಶ, ಅಮೆರಿಕದಲ್ಲಿ ಚೀನಾದ ಹೂಡಿಕೆಗಳ ಮೇಲಿನ ನಿರ್ಬಂಧವೂ ಸೇರಿದೆ.ಟ್ರಂಪ್ ಅವರ ಸುದ್ದಿಗೋಷ್ಠಿಯ ಸಾರ ಇಲ್ಲಿದೆ.

    ಇದನ್ನೂ ಓದಿ: ನನ್ನ ಸಂಕಲ್ಪ ಶಕ್ತಿಯ ಮೂಲವೇ ನೀವು…!

    ಚೀನಾದ ಮೇಲಿನ ಹೊಸ ನಿಯಂತ್ರಣ, ನಿರ್ಬಂಧಗಳ ಕಾರಣ ಇನ್ನು ಮೇಲೆ ಹಾಂಕಾಂಗ್​ಗೆ ವಿಶೇಷ ಸವಲತ್ತುಗಳು ಕೂಡ ಸ್ಥಗಿತಗೊಳ್ಳಲಿದೆ.ಜಗತ್ತಿಗೆ ಚೀನಾದಿಂದ ಉತ್ತರ ಬೇಕಾಗಿದೆ.ಚೀನಾದಿಂದ ಅಮೆರಿಕ ಬಯಸುವುದಿಷ್ಟೆ- ಅದು ಮುಕ್ತವಾಗಿ ಮತ್ತು ರಚನಾತ್ಮಕವಾಗಿ ಸಂಬಂಧವೃದ್ಧಗೆ ಪ್ರಯತ್ನಿಸಬೇಕು.ಆದರೆ ಈ ಸಂಬಂಧ ವೃದ್ಧಿ ಆಗಬೇಕಾದರೆ ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಗರಿಷ್ಠಮಟ್ಟದಲ್ಲಿ ಕಾಪಾಡಬೇಕಾಗುತ್ತದೆ.

    ಚೀನಾ ಇದುವರೆಗೂ ಅಮೆರಿಕ ಹಾಗೂ ಇತರೆ ದೇಶಗಳಿಗೆ ಏನೇನು ಭರವಸೆಗಳನ್ನು ನೀಡಿತ್ತೋ ಅದೆಲ್ಲವನ್ನೂ ಉಲ್ಲಂಘಿಸಿದೆ. ಈ ಉಲ್ಲಂಘನೆಗಳನ್ನು ನಿರ್ಲಕ್ಷಿಸಲಾಗದು ಅಥವಾ ಹಾಗೆಯೇ ಕೈ ಬಿಡಲಾಗದು.ಬೌದ್ಧಿಕ ಆಸ್ತಿಯನ್ನು ಕೊಳ್ಳೆ ಹೊಡೆದಿರುವುದಲ್ಲದೆ, ಕೋಟ್ಯಂತರ ಡಾಲರನ್ನೂ, ಉದ್ಯೋಗವನ್ನೂ ಕಸಿದುಕೊಂಡಿದೆ. ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ)ಯ ನಿಯಮಗಳನ್ನೂ ಅದು ಉಲ್ಲಂಘಿಸಿದೆ.ಚೀನಾದ ಅಟಾಟೋಪ ಇಷ್ಟಕ್ಕೇ ನಿಂತಿಲ್ಲ.ಸುತ್ತಮುತ್ತಲಿನ ಭೌಗೋಳಿಕ ಪ್ರದೇಶದಲ್ಲಿ ಅಕ್ರಮವಾಗಿ ವ್ಯಾಪ್ತಿ ಹಿಗ್ಗಿಸುವ ಪ್ರಯತ್ನವನ್ನೂ ಅದು ಮಾಡುತ್ತಿದೆ. ಇದು ಆ ಭಾಗದಲ್ಲಿ ಬಿಗುವಿನ ವಾತಾವರಣವನ್ನು ನಿರ್ಮಿಸಿದೆ. ಈ ಹಿಂದೆ ಈ ರೀತಿಯ ಕೃತ್ಯಗಳನ್ನು ಮಾಡಿಕೊಂಡು ಚೀನಾ ನಿರ್ಬಂಧಗಳಿಂದ, ಶಿಕ್ಷೆಗಳಿಂದ ಬಚಾವ್ ಆಗಿರಬಹುದು. ಆದರೆ, ಈ ಬಾರಿ ಹಾಗಾಗಲು ಸಾಧ್ಯವಿಲ್ಲ.

    ಇದನ್ನೂ ಓದಿ: ಸಾಧನೆಗಳ ಅಮೋಘವರ್ಷ: ನಮೋ ಪರ್ವ 2.0

    ಕೋವಿಡ್ 19 ವೈರಸ್ ವಿಚಾರದಲ್ಲಿ ಚೀನಾದ ಅಧಿಕಾರಿಗಳು ಅದರ ವರದಿಯನ್ನು ಡಬ್ಲ್ಯುಎಚ್​ಒಗೆ ಒದಗಿಸುವುದನ್ನು ನಿರ್ಲಕ್ಷಿಸಿದ್ದರು. ಅಷ್ಟೇ ಅಲ್ಲ, ಮೊಟ್ಟ ಮೊದಲ ಪ್ರಕರಣ ಪತ್ತೆಯಾದಾಗ ಡಬ್ಲ್ಯುಎಚ್​ಒ ಮೇಲೆ ಒತ್ತಡ ಹೇರಿ ಜಗತ್ತಿನ ದಾರಿ ತಪ್ಪಿಸುವಂತೆಯೂ ಮಾಡಿದ್ದಾರೆ. ಚೀನೀಯರಿಗೆ ಈ ವೈರಸ್ ಪತ್ತೆಯಾದ ಕೂಡಲೇ ಜಗತ್ತನ್ನು ಎಚ್ಚರಿಸಿದ್ದರೆ ಇಂದು ಜಗತ್ತು ಈ ರೀತಿ ಕಷ್ಟಪಡಬೇಕಾಗಿರುತ್ತಿರಲಿಲ್ಲ.

    ವಾರ್ಷಿಕವಾಗಿ ಕೇವಲ 40 ದಶಲಕ್ಷ ಡಾಲರ್ ಕೊಟ್ಟು ಡಬ್ಲ್ಯುಎಚ್​ಒ ಮೇಲೆ ಈ ರೀತಿ ನಿಯಂತ್ರಣ ಸಾಧಿಸಬಹುದಾದರೆ, ಪ್ರತಿವರ್ಷ ಅಂದಾಜು 450 ದಶಲಕ್ಷ ಡಾಲರ್ ಅನುದಾನ ನೀಡುವ ಅಮೆರಿಕಕ್ಕೆ ಅದರ ಮೇಲಿನ ನಿಯಂತ್ರಣ ಇನ್ನೂ ಹೆಚ್ಚಾಗಬೇಕಲ್ಲವೇ? ಈ ಬೆಳವಣಿಗೆ ಎಲ್ಲವನ್ನೂ ಮರುಚಿಂತನೆಗೆ ಒಳಪಡಿಸುವಂತೆ ಮಾಡಿದ್ದು, ನಾವು ಇಂದು ಡಬ್ಲ್ಯುಎಚ್​ಒದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇವೆ.ಅದಕ್ಕೆ ಕೊಡುತ್ತಿದ್ದ ಅನುದಾನವನ್ನು ಜಗತ್ತಿನ ಬೇರೆ ಬೇರೆ ಜಾಗತಿಕ ಆರೋಗ್ಯ ಸಂಸ್ಥೆಗಳಿಗೆ ಪೂರೈಸುತ್ತೇವೆ.

    ಇದನ್ನೂ ಓದಿ: ಸ್ವಂತ ಖರ್ಚಲ್ಲೇ ಕರೊನಾ ಪರೀಕ್ಷೆ!

    ಚೀನಾದಿಂದ ನಾವು ಪಾರದರ್ಶಕತೆಯನ್ನು ಬಯಸುತ್ತೇವೆ. ವೈರಸ್ ಪತ್ತೆಯಾದ ಕೂಡ ವುಹಾನ್​ನಿಂದ ಚೀನಾದ ಇತರ ಭಾಗಗಳಿಗೆ ಜನ ಸಂಚಾರವನ್ನು ನಿರ್ಬಂಧಿಸಿದ್ದೇಕೆ? ಇದೇ ವೇಳೆ, ಜಾಗತಿಕ ಪ್ರಯಾಣಕ್ಕೆ ವುಹಾನ್​ನಿಂದ ಅನುಕೂಲ ಮಾಡಿಕೊಟ್ಟದ್ದರ ಕಾರಣವೇನು? ಈ ಪಿಡುಗು ಬೀಜಿಂಗ್​ ಅನ್ನು ತಲುಪಿಯೇ ಇಲ್ಲ.ನಮ್ಮ ಕೈಗಾರಿಕಾ ರಹಸ್ಯಗಳನ್ನು ಅರಿತುಕೊಂಡು ಇಡೀ ಜಗತ್ತಿಗೇ ದ್ರೋಹ ಬಗೆಯುವ ಕೆಲಸವನ್ನು ಚೀನಾ ಮಾಡಿದೆ, ಮಾಡುತ್ತಿದೆ.ಈ ಕಾರಣಕ್ಕೆ ಚೀನಾ ವಿರುದ್ಧ ಸರಣಿ ಕ್ರಮಗಳನ್ನು ಅಮೆರಿಕ ತೆಗೆದುಕೊಳ್ಳುತ್ತಿದೆ. ಚೀನಾದವರ ಅಮೆರಿಕ ಪ್ರವೇಶಕ್ಕೆ ನಿರ್ಬಂಧ, ಚೀನೀಯರು ಅಮೆರಿಕದಲ್ಲಿ ಹೂಡಿಕೆ ಮಾಡುವುದಕ್ಕೂ ನಿರ್ಬಂಧವಷ್ಟೇ ಅಲ್ಲ, ಚೀನಾದವರೊಂದಿಗಿನ ಪ್ರತಿ ವ್ಯವಹಾರದ ಮೇಲೂ ಕಟ್ಟುನಿಟ್ಟಿನ ನಿಗಾ ಇರಲಿದೆ. (ಏಜೆನ್ಸೀಸ್)

    ಕರೊನಾ ಲಾಕ್​ಡೌನ್​ ಅವಧಿ-ಜಲಮಂಡಳಿ ಬಿಲ್ ಸಂಗ್ರಹದಲ್ಲಿ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts