More

    ಸ್ವಂತ ಖರ್ಚಲ್ಲೇ ಕರೊನಾ ಪರೀಕ್ಷೆ!

    ಬೆಂಗಳೂರು: ತೀವ್ರ ಸೋಂಕುಳ್ಳ ರಾಜ್ಯಗಳಿಂದ ಆಗಮಿಸುವ ವಿಮಾನ ಮತ್ತು ರೈಲು ಪ್ರಯಾಣಿಕರು ಇನ್ನು ಮುಂದೆ ಖಾಸಗಿ ಪ್ರಯೋಗಾಲಯಗಳಲ್ಲಿ ಸ್ವಂತ ಖರ್ಚಿನಲ್ಲೇ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅದೇಶ ಹೊರಡಿಸಿದೆ.

    ವಿಮಾನ ನಿಲ್ದಾಣ, ರೈಲು ನಿಲ್ದಾಣ, ವಸತಿ ಗೃಹ ಸೇರಿ ನಿಗದಿತ ಸ್ಥಳಗಳಲ್ಲಿ ಚೌಕಿ ಆರಂಭಿಸಸಲಾಗುತ್ತದೆ. ಅಲ್ಲಿಂದ ಪ್ರಯಾಣಿಕರ ಗಂಟಲು ದ್ರವ ಸಂಗ್ರಹಿಸಿ, ಐಸಿಎಂಆರ್ ಮಾರ್ಗ ಸೂಚಿಯಂತೆ ಆರ್​ಟಿ-ಪಿಸಿಆರ್ ವಿಧಾನದಲ್ಲಿ ಮಾದರಿಗಳ ಪರೀಕ್ಷೆ ನಡೆಸಿ ಸರ್ಕಾರದ ನೋಡಲ್ ಅಧಿಕಾರಿಗಳಿಗೆ ಹಾಗೂ ಮಾದರಿ ನೀಡಿದ ವ್ಯಕ್ತಿಗೆ ವರದಿ ನೀಡುವಂತೆ ಸೂಚಿಸಲಾಗಿದೆ.

    ಇದನ್ನೂ ಓದಿ: ಬೆಂಗ್ಳೂರಲ್ಲಿ ಮುನ್ನೂರು ದಾಟಿದ ಸೋಂಕಿತರ ಸಂಖ್ಯೆ

    ನಿಗದಿತ ಪ್ರಯೋಗಾಲಯಗಳು

    ಎಲ್ಲ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಪ್ರಯಾಣಿಕರು ಬೆಂಗಳೂರಿನ ಎಕ್ಸ್​ಟಾನ್ ಡಯಾಗ್ನೋಸ್ಟಿಕ್ಸ್​ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎಲ್ಲ ಅಂತರ ರಾಜ್ಯ ರೈಲು ಪ್ರಯಾಣಿಕರಿಗೆ ನ್ಯೂಬರ್ಗ್ ಆನಂದ್ ರೆಫರೆನ್ಸ್ ಲ್ಯಾಬೊರೇಟರಿಸ್, ಕ್ಯಾನ್​ಸೈಟಿ ಟೆಕ್ನಾಲಜಿಸ್ ಪ್ರೈ.ಲಿ., ಆಸ್ಟರ್ ಲ್ಯಾಬ್, ನಾರಾಯಣ ಹೃದಯಾಲಯ, ವೈದೇಹಿ ಆಸ್ಪತ್ರೆಯ ಪ್ರಯೋಗಾಲಯ, ಸಂಜೀನ್ ಇಂಟರ್​ನ್ಯಾಷನಲ್ ನಲ್ಲಿ ಪ್ರಯೋಗಾಲಯಗಳನ್ನು ಗುರುತಿಸಲಾಗಿದೆ.

    ಖಾಸಗಿ ಪ್ರಯೋಗಾಲಯಗಳ ಜತೆ ರ್ಚಚಿಸಿ, ಒಟ್ಟು 8 ಪ್ರಯೋಗಾಲಯಗಳನ್ನು ಗುರುತಿಸಲಾಗಿದೆ. ಮಾದರಿಗಳನ್ನು ಪೂಲಿಂಗ್ ವಿಧಾನದಲ್ಲಿ ಪರೀಕ್ಷಿಸಬೇಕು (1 ಪೂಲ್​ನಲ್ಲಿ 5 ಮಾದರಿಗಳ ಪರೀಕ್ಷೆ). ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಅಥವಾ ನೆಗೆಟಿವ್ ಯಾವುದೇ ಇರಲಿ ಪ್ರಯಾಣಿಕರಿಂದ ಕೇವಲ 650 ರೂ. ಶುಲ್ಕ ಪಡೆಯುವಂತೆ ಆದೇಶದಲ್ಲಿ ತಿಳಿಸಲಾಗಿದೆ.

    ಹೊರರಾಜ್ಯಗಳಿಂದ ಬರುವ ಎಲ್ಲರನ್ನೂ ಸ್ಥಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಅತಿ ಹೆಚ್ಚು ಸೋಂಕಿತ ರಾಜ್ಯಗಳಿಂದ ಬರುವವರನ್ನು ಮಾತ್ರ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ. ಹೀಗೆ ಬಂದವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದುವರೆಗೂ ಸರ್ಕಾರವೇ ಪರೀಕ್ಷೆಯ ಖರ್ಚು ಭರಿಸುತ್ತಿತ್ತು. ಇನ್ನು ಮುಂದೆ ಕೆಲ ವರ್ಗದವರನ್ನು ಹೊರತುಪಡಿಸಿ ಉಳಿದವರು ಸ್ವಂತ ಖರ್ಚಿನಲ್ಲಿ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

    ಕಾರ್ಪೋರೇಟರ್​ಗೆ ಪಾಸಿಟಿವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts