More

    ಅಮೆರಿಕದಲ್ಲಿ ಎಕಾನಮಿ ರೀಓಪನ್ ಮಾಡೋಕೆ 3 ಹಂತದ ಯೋಜನೆ ಮುಂದಿಟ್ರು ಟ್ರಂಪ್​: ಭಾರತದಲ್ಲಿ ಜಾರಿಯಲ್ಲಿರುವ ತಂತ್ರದ ಹೋಲಿಕೆ ಕಾಣಬಹುದಿಲ್ಲಿ…

    ವಾಷಿಂಗ್ಟನ್​: ಕರೊನಾ COVID19 ವೈರಸ್ ಸೋಂಕು ಹರಡಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುವ ಅಮೆರಿಕ ಈಗ ಸ್ಥಗಿತಗೊಂಡಿರುವ ಅರ್ಥವ್ಯವಸ್ಥೆಗೆ ಮರುಚಾಲನೆ ನೀಡುವ ಚಿಂತನೆ ನಡೆಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 3 ಹಂತದ ಯೋಜನೆ ಸಿದ್ಧಪಡಿಸಿ ಗವರ್ನರ್​ಗಳ ಮುಂದಿಟ್ಟಿದ್ದಾರೆ. ಕರೊನಾ ಸೋಂಕು ಕಡಿಮೆ ಇರುವ ಪ್ರದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ತರುವುದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಹೊಸ ಮಾರ್ಗಸೂಚಿಯನ್ನೂ ಅಮೆರಿಕ ಪ್ರಕಟಿಸಿದೆ.

    ಇದರಂತೆ, ಸೋಷಿಯಲ್ ಡಿಸ್ಟೆನ್ಸಿಂಗ್​ ಪಾಲನೆ ಸರಿಯಾಗಿ ಮಾಡಿಕೊಂಡು ನಿಧಾನವಾಗಿ ಸಹಜ ಬದುಕಿನತ್ತ ಗಮನಹರಿಸಬಹುದು. ಮೂರು ಹಂತಗಳಲ್ಲಿ ದೇಶದ ವ್ಯಾಪಾರೋದ್ಯಮ ಮತ್ತು ಶಾಲೆಗಳನ್ನು ಮರು ಆರಂಭವಾಗಲಿದೆ. ಪ್ರತಿಯೊಂದು ಹಂತವೂ 14 ದಿನಗಳ ಅಂತರದಲ್ಲಿ ಅನುಷ್ಠಾನಗೊಳ್ಳಲಿದೆ.

    ಮೊದಲ ಹಂತದಲ್ಲಿ ಉದಾಹರಣೆಗೆ ಸಾರ್ವಜನಿಕವಾಗಿ ಕಟ್ಟುನಿಟ್ಟಾಗಿ ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲಿಸಲು ಸೂಚಿಸಲಾಗುತ್ತದೆ. 10ಕ್ಕಿಂತ ಹೆಚ್ಚು ಜನ ಎಲ್ಲಿಯೂ ಸೇರದಂತೆ ನಿರ್ಬಂಧ ವಿಧಿಸಲಾಗುತ್ತದೆ. ಅನಗತ್ಯ ಪ್ರಯಾಣವನ್ನು ತಡೆಯಲಾಗುತ್ತದೆ.

    ಎರಡನೇ ಹಂತದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲನೆಗೆ ಒತ್ತು ನೀಡುವುದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರವೇ 50ಕ್ಕಿಂತ ಹೆಚ್ಚು ಜನ ಒಂದೆಡೆ ಸೇರಬಹುದು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪ್ರಯಾಣವನ್ನೂ ಬೆಳೆಸಬಹುದಾಗಿದೆ.

    ಮೂರನೇ ಹಂತದಲ್ಲಿ ಬಹುತೇಕ ಅಮೆರಿಕನ್ನರು ಬಯಸುವ ಸಹಜ ಜನಜೀವನವನ್ನು ಮರುಸ್ಥಾಪಿಸುವುದು. ಹೊಸ ಸೋಂಕಿನ ಪ್ರಕರಣಗಳನ್ನು ಮೊದಲೇ ಗುರುತಿಸಿ ಅವರನ್ನು ಪ್ರತ್ಯೇಕಿಸಿ ಐಸೋಲೇಷನ್​ಗೊಳಪಡಿಸುವುದು.

    ಟ್ರಂಪ್ ಆಡಳಿತ ಪ್ರಕಟಿಸಿರುವ ಮಾರ್ಗಸೂಚಿ ಈಗ ಅಲ್ಲಿ ಚರ್ಚೆಯಲ್ಲಿದ್ದು, ಮುಂದಿನ ಬೆಳವಣಿಗೆಗಳನ್ನು ಎಲ್ಲರೂ ಕುತೂಹಲದಿಂದ ಗಮನಿಸುತ್ತಿದ್ದಾರೆ. ಈ ವಿಷಯವಾಗಿ ಅನೇಕ ಅಭಿಪ್ರಾಯಗಳೂ ವ್ಯಕ್ತವಾಗಿವೆ.(ಏಜೆನ್ಸೀಸ್)

    ಬಿಪಿಎಲ್​ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳಿಗೆ ತಲಾ 10 ಕಿಲೋ ಅಕ್ಕಿ ಮೂರು ತಿಂಗಳು- ನಾಳೆಯಿಂದಲೇ ವಿತರಣೆ ಎಂದ ಸಚಿವ ಗೋಪಾಲಯ್ಯ

     

    VIDEO| ದೆವ್ವ ಬಂತು ದೆವ್ವ!: ಕರೊನಾ ಲಾಕ್​ಡೌನ್ ಶುರುವಾದಾಗಿನಿಂದ ಈ ಗ್ರಾಮದಲ್ಲಿ ದೆವ್ವದ್ದೇ ಕಾಟ…

     

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts