More

    ವಿಶ್ವ ಆರೋಗ್ಯ ಸಂಸ್ಥೆಗೆ ಧನಸಹಾಯ ರದ್ದು ಮಾಡಿದ ಟ್ರಂಪ್‌: ಕರೊನಾ ವಿಷಯದಲ್ಲಿ ಚೀನಾ ಪರ ಪಕ್ಷಪಾತ ಎಂಬ ಗಂಭೀರ ಆರೋಪ

    ನ್ಯೂಯಾರ್ಕ್‌: ಅಮೆರಿಕದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೇ(ಡಬ್ಲ್ಯುಎಚ್‌ಒ) ಪ್ರಮುಖ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅದಕ್ಕೆ ನೀಡುತ್ತಿರುವ ಧನಸಹಾಯವನ್ನು ರದ್ದು ಮಾಡುವುದಾಗಿ ಘೋಷಿಸಿದ್ದಾರೆ.

    ಕರೊನಾ ಸೋಂಕಿನ ವಿಷಯದಲ್ಲಿ ಡಬ್ಲ್ಯುಎಚ್‌ಒ ಚೀನಾದ ಪರವಾಗಿ ಪಕ್ಷಪಾತ ಮಾಡುತ್ತಿದೆ ಎಂದು ಈಚೆಗಷ್ಟೇ ಗಂಭೀರ ಆರೋಪ ಮಾಡಿದ್ದ ಟ್ರಂಪ್‌, ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಧನಸಹಾಯ ರದ್ದು ಮಾಡಲು ತೀರ್ಮಾನಿಸಿದ್ದು, ಈ ಸಂಬಂಧ ತಮ್ಮ ಟ್ವಿಟರ್‌ ಖಾತೆಯಲ್ಲಿಯೂ ಪ್ರಕಟಿಸಿದ್ದಾರೆ.

    ಕರೊನಾ ಸೋಂಕು ವಿಶ್ವವ್ಯಾಪಿ ವ್ಯಾಪಿಸುವ ಮುನ್ನ ಚೀನಾದಲ್ಲಿ ಅದು ಹರಡುತ್ತಿರುವುದನ್ನು ಹಾಗೂ ಇದೇ ರೀತಿ ಹರಡಿದರೆ ಮುಂದೆ ಇಡೀ ವಿಶ್ವದಲ್ಲಿಯೇ ತಲ್ಲಣ ಸೃಷ್ಟಿಯಾಗಬಹುದು ಎಂಬ ಅಂಶ ಡಬ್ಲ್ಯುಎಚ್‌ಒಗೆ ತಿಳಿದಿದ್ದರೂ ಅದು ಚೀನಾದ ಪರವಾಗಿ ಕೆಲಸ ಮಾಡಿ ಯಾವುದೇ ಮಾಹಿತಿಯನ್ನು ಮೊದಲೇ ತಿಳಿಸಿಲ್ಲ. ಈ ಬಗ್ಗೆ ತಮಗೆ ಯಾವುದೇ ಮುನ್ಸೂಚನೆ ನೀಡಿಲ್ಲ ಎನ್ನುವುದು ಟ್ರಂಪ್‌ ಆರೋಪ.

    ವಿಶ್ವ ಸಂಸ್ಥೆಯ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಆರ್ಥಿಕ ಸಹಕಾರವನ್ನು ನೀಡುತ್ತಿರುವ ದೇಶವೆಂದರೆ ಅದು ಅಮೆರಿಕ. ಕಳೆದ ಆರ್ಥಿಕ ವರ್ಷದಲ್ಲಿ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಗೆ 400 ದಶಲಕ್ಷ ಡಾಲರ್‌ ಧನಸಹಾಯ ಮಾಡಿದೆ. ಆದರೆ ಇದರ ಹೊರತಾಗಿಯೂ ಸೋಂಕು ವ್ಯಾಪಿಸುವುದಕ್ಕೆ ಸಂಬಂಧಿಸಿದಂತೆ ಅದು ಪಾರದರ್ಶಕತೆ ಕಾಯ್ದುಕೊಳ್ಳದೇ, ಚೀನಾದ ಪರವಾಗಿ ಪಕ್ಷಪಾತ ಮಾಡಿದೆ ಎನ್ನುವುದು ಟ್ರಂಪ್‌ ಗಂಭೀರ ಆರೋಪ. (ಏಜೆನ್ಸೀಸ್)

    ಕರೊನಾ ಕಂಟಕಕ್ಕೆ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಬರೋಬ್ಬರಿ 3 ಲಕ್ಷ ಗಾರ್ಮೆಂಟ್​ ನೌಕರರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts