More

    ವಿದ್ಯಾರ್ಥಿಗಳ ಕುಟುಂಬಕ್ಕೆ ಧನಸಹಾಯ

    ನಿಪ್ಪಾಣಿ: ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅವರು ತಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ತೆರೆದ ಹದಯ ಶಸಚಿಕಿತ್ಸೆಗೆ ಒಳಗಾದ ಬಡ ವಿದ್ಯಾರ್ಥಿಗಳ ಮನೆಗಳಿಗೆ ಶನಿವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ವಿಎಸ್‌ಎಂ ೌಂಡೇಷನ್‌ನಿಂದ 21 ಸಾವಿರ ರೂ. ಧನಸಹಾಯ ಮಾಡಿದರು.

    ವಿಎಸ್‌ಎಂ ಹಿರಿಯ ಪ್ರಾಥಮಿಕ ಶಾಲೆಯ 5ನೇಯ ತರಗತಿಯ ವಿದ್ಯಾರ್ಥಿ ಅಭಿಷೇಕ ವಿಕ್ರಮ ಕದಮ ಹಾಗೂ 6ನೇಯ ತರಗತಿಯ ವಿದ್ಯಾರ್ಥಿ ಆರ್ಯನ್ ಕುಂದನ್ ಖೋತ ತೆರೆದ ಹದಯ ಶಸಚಿಕಿತ್ಸೆಗೆ ಒಳಗಾದ ಬಡ ವಿದ್ಯಾರ್ಥಿಗಳು. ಅಭಿಷೇಕ ತಂದೆ ವಿಕ್ರಮ ಚರ್ಮಕಾರರಾಗಿದ್ದು ಬೆಂಗಳೂರಿನ ನಾರಾಯಣ ಹದಯಾಲಯ ಆಸ್ಪತ್ರೆಯಲ್ಲಿ ತನ್ನ ಮಗನ ಶಸಚಿಕಿತ್ಸೆಗೆ 5 ಲಕ್ಷ ರೂ.ಭರಿಸಲು ಅಪಾರ ಕಷ್ಟಪಡಬೇಕಾಯಿತು. ಶಾಲೆಯ ಮುಖ್ಯೋಪಾಧ್ಯಾಯ ಯಲ್ಲಪ್ಪ ಹಂಡಿ ಶೈಕ್ಷಣಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಯಡಿ ಅಭಿಷೇಕ ಶಸಚಿಕಿತ್ಸೆಗಾಗಿ ಹರಸಾಹಸಪಟ್ಟಿದ್ದರು. ಕೊನೆಗೂ ಅವರಿಗೆ ಲ ಸಿಗಲಿಲ್ಲ. ಅಲ್ಲಲ್ಲಿ ಹಣ ಕಲೆ ಹಾಕಿ ವಿಕ್ರಮ ತನ್ನ ಮಗನ ಯಶಸ್ವಿ ಶಸಚಿಕಿತ್ಸೆ ಮಾಡಿಸಿ ಬಂದಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಆಸ್ಪತ್ರೆಗೆ ಮಾಡಿದ ವೆಚ್ಚ ಸಿಗಬೇಕೆಂದು ವಿಕ್ರಮ ಕದಮ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕಡತ ಸಲ್ಲಿಸಿದ್ದಾರೆ. ಸಚಿವೆ ಜೊಲ್ಲೆ ಅವರು ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿಯಲ್ಲಿ ಧನಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಆರ್ಯನ್ ಶಸ ಚಿಕಿತ್ಸೆ ಸರ್ಕಾರದ ಯೋಜನೆಯಡಿಯಾಗಲು ಕ್ಷೇತ್ರ ಶಿಕ್ಷಣಾಕಾರಿ ರೇವತಿ ಮಠದ ಮತ್ತು ಮುಖ್ಯೋಪಾಧ್ಯಾಯ ಯಲ್ಲಪ್ಪ ಹಂಡಿ ಅಪಾರವಾಗಿ ಪ್ರಯತ್ನಿಸಿದ ನಂತರ ಆರ್ಯನ್ ಶಸಚಿಕಿತ್ಸೆ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಬಿಪಿಎಲ್ ಪಡಿತರ ಚೀಟಿ ಆಧಾರದ ಮೇಲೆ ಒಂದು ಶಸ್ತ್ರಚಿಕಿತ್ಸೆ ಉಚಿತವಾಗಿ ನಡೆದಿದ್ದು, ಮತ್ತೊಂದು ಅಲ್ಪ ವೆಚ್ಚದಲ್ಲಿ ಆಗಿದೆ. ಶಾಲೆಯ ಮುಖ್ಯೋಪಾಧ್ಯಾಯ ಯಲ್ಲಪ್ಪ ಹಂಡಿ ಕಾರ್ಯಕ್ಕೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಕಾರ್ಯಾಧ್ಯಕ್ಷ ಆರ್.ವೈ.ಪಾಟೀಲ, ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ಶಾಲೆಯ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಸಂಜಯ ಮೊಳವಾಡೆ, ಉಪಾಧ್ಯಕ್ಷರು, ಎಲ್ಲ ಸಂಚಾಲಕರು ಶ್ಲಾಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts