More

    ‘ತ್ರಿವಿಕ್ರಮ’ನ ಪರಾಕ್ರಮ!: 50 ಲಕ್ಷ ಮೊತ್ತಕ್ಕೆ ಆಡಿಯೋ ಹಕ್ಕುಗಳ ಮಾರಾಟ

    ಬೆಂಗಳೂರು: ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಮಗ ವಿಕ್ರಮ್ ರವಿಚಂದ್ರನ್ ಚಿತ್ರರಂಗಕ್ಕೆ ‘ತ್ರಿವಿಕ್ರಮ’ನಾಗಿ ಪದಾರ್ಪಣೆ ಮಾಡುತ್ತಿದ್ದು, ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ನಿರ್ದೇಶಕ ಸಹನಾ ಮೂರ್ತಿ, ವಿಕ್ರಮ್ಾಗಿಯೇ ಈ ಕಥೆ ಸಿದ್ಧಪಡಿಸಿದ್ದಾರೆ. ನಿರ್ವಪಕ ಸೋಮಣ್ಣ ಸಹ ಕೈ ಬಿಚ್ಚಿ ಹಣಹೂಡಿಕೆ ಮಾಡುತ್ತಿದ್ದಾರೆ. ಇದೀಗ ಈ ತಂಡ ವರಮಹಾಲಕ್ಷ್ಮೀ ಹಬ್ಬಕ್ಕೆ ಖುಷಿ ವಿಚಾರವೊಂದನ್ನು ಹಂಚಿಕೊಂಡಿದೆ. ಅದೇನೆಂದರೆ, ದೊಡ್ಡ ಮೊತ್ತಕ್ಕೆ ತ್ರಿವಿಕ್ರಮ ಚಿತ್ರದ ಆಡಿಯೋ ಹಕ್ಕುಗಳ ಮಾರಾಟವಾಗಿವೆ.

    ಇತ್ತೀಚಿನ ದಿನಗಳಲ್ಲಿ ಆಡಿಯೋ ಹಕ್ಕುಗಳಿಗೆ ಹೆಚ್ಚು ಮೊತ್ತ ಸಿಗುವುದಿಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತದೆ. ಆದರೆ, ‘ತ್ರಿವಿಕ್ರಮ’ ಚಿತ್ರದ ಹಾಡುಗಳ ಹಕ್ಕುಗಳು 50ಲಕ್ಷಕ್ಕೆ ಮಾರಾಟವಾಗಿದ್ದು, ಇದು ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿದೆ. ಎ2 ಮ್ಯೂಸಿಕ್ ಸಂಸ್ಥೆ ಈ ಹಕ್ಕುಗಳನ್ನು ಪಡೆದುಕೊಂಡಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ.

    ಇದನ್ನೂ ಓದಿ: ಈ ಗ್ರಾಮದಲ್ಲಿ ಆನ್​ಲೈನ್ ಕ್ಲಾಸ್​ ಫೇಲಾಯಿತು- ಶಾಲೆಯೇ ಮೊಬೈಲ್ ಆಯಿತು ನೋಡಿ!

    ‘ಸದ್ಯಕ್ಕೆ ಕರೊನಾ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಚಿತ್ರೀಕರಣ ಬದಿಗಿಟ್ಟಿ, ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಎರಡು ಹಾಡುಗಳನ್ನು ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಚಿತ್ರೀಕರಿಸಲಿದ್ದೇವೆ. ಡಿಸೆಂಬರ್​ನಲ್ಲಿ ಹಾಡುಗಳ ಬಿಡುಗಡೆ ಮಾಡಿ, 2021ಕ್ಕೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ನಿರ್ದೇಶಕ ಸಹನಾ ಮೂರ್ತಿ.

    ಅಂದಹಾಗೆ, ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಒಟ್ಟು 6 ಹಾಡುಗಳು ಮೂಡಿಬಂದಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಯೋಗರಾಜ್ ಭಟ್ ಹಾಡುಗಳನ್ನ ಬರೆದಿದ್ದಾರೆ. ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಹರಿಚರಣ್, ಶ್ರೇಯಾ ಘೋಶಾಲ್, ಸಿದ್ ಶ್ರೀರಾಮ್ ಮುಂತಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

    ‘ನಂಗೆ ಕಾಲಲ್ಲೆಲ್ಲ ಏನೋ ಒಂಥರಾ ಫೀಲಿಂಗ್​…’ ಎಂದು ಹೇಳ್ತಾ ಇರೋ ಮಹಿಳೆಯ ಕೇಸ್ ಈಗ ವೈದ್ಯಲೋಕದ ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts