More

    ಚಿಕ್ಕಣ್ಣ ಜತೆ ಮದುವೆ ಆಗಿಲ್ಲ … ಸ್ಪಷ್ಟನೆ ನೀಡಿದ ತ್ರಿವೇಣಿ

    ‘ಟಗರು’ ಚಿತ್ರದಲ್ಲಿನ ಕಾನ್​ಸ್ಟೇಬಲ್​ ಸರೋಜ ಅವರ ಪಾತ್ರದ ಮೂಲಕ ಜನಪ್ರಿಯರಾದ ತ್ರಿವೇಣಿ, ಆ ನಂತರ ಉಪೇಂದ್ರ ಅಭಿನಯದ ‘ಐ ಲವ್​ ಯೂ’ ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ ಕನ್ನಡ ಚಿತ್ರರಂಗದಲ್ಲಿ ಕಾನ್​ಸ್ಟೇಬಲ್​ ಸರೋಜ ಎಂದೇ ತ್ರಿವೇಣಿ ಜನಪ್ರಿಯರಾಗಿದ್ದಾರೆ. ಈಗ ತ್ರಿವೇಣಿ, ನಟ ಚಿಕ್ಕಣ್ಣ ಅವರ ಹುಟ್ಟುಹಬ್ಬಕ್ಕೆ ಶುಭ ಕೋರುವ ಮೂಲಕ ಅವಾಂತಕ್ಕೆ ಸಿಲುಕಿದ್ದಾರೆ.

    ಇದನ್ನೂ ಓದಿ: ಹಾಟ್​ಸ್ಟಾರ್​ನಲ್ಲಿ ಬಾಂಬ್​ ಸಿಡಿಸಲು ಲಕ್ಷ್ಮೀ ರೆಡಿ; ಓಟಿಟಿಗೆ ಬಂದೇ ಬಿಟ್ರು ಬಾಲಿವುಡ್​ ಕಿಲಾಡಿ …

    ಇತ್ತೀಚೆಗೆ ಚಿಕ್ಕಣ್ಣ ಅವರ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ತ್ರಿವೇಣಿ ಅವರು ಸೋಷಿಯಲ್​ ಮೀಡಿಯಾ ಮೂಲಕ ಚಿಕ್ಕಣ್ಣ ಅವರಿಗೆ ಶುಭ ಕೋರುವುದರ ಜತೆಗೆ, ಅವರರ ಜತೆಗಿರುವ ಒಂದು ಫೋಟೋ ಶೇರ್​ ಮಾಡಿದ್ದರು. ಈ ಫೋಟೋದಲ್ಲಿ ಚಿಕ್ಕಣ್ಣ ಮತ್ತು ತ್ರಿವೇಣಿ ಇಬ್ಬರೂ ಮದುವೆ ಪೋಷಾಕಿನಲ್ಲಿದ್ದುದರಿಂದ, ಅವರಿಬ್ಬರು ಮದುವೆಯಾಗಿರುಬಹುದು ಎಂಬ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಯಿತು.
    ಯಾವಾಗ ಇಂಥದ್ದೊಂದು ವದಂತಿ ಕೇಳಿ ಬಂತೋ, ಜಾಗೃತರಾದ ತ್ರಿವೇಣಿ, ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ತಾವು ಚಿಕ್ಕಣ್ಣ ಅವರನ್ನು ಮದುವೆಯಾಗಿಲ್ಲ, ಅವೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಾವು ಮದುವೆಯಾಗುವುದಿದ್ದರೆ ಎಲ್ಲರಿಗೂ ಅಧಿಕೃತವಾಗಿ ಹೇಳಿಯೇ ಮದುವೆಯಾಗುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: ರಾಯಗಢಕ್ಕೆ ಹೊರಟು ನಿಂತ ಗೋಲ್ಡನ್​ ಸ್ಟಾರ್; ಸುನಿ ಜತೆ ಮತ್ತೊಂದು ಹೊಸ ಸಿನಿಮಾ

    ಚಿಕ್ಕಣ್ಣ ಜತೆ ಮದುವೆ ಆಗಿಲ್ಲ ಎಂದ ಕಾನ್​ಸ್ಟೇಬಲ್​ ಖ್ಯಾತಿಯ ಸರೋಜ

    ಕೆಲವು ದಿನಗಳ ಹಿಂದೆ ನಟ ಚಿಕ್ಕಣ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ, ಅವರಿಗೆ ಶುಭ ಕೋರಿ ನಟಿ ತ್ರಿವೇಣಿ ('ಟಗರು' ಚಿತ್ರದ ಕಾನ್​ಸ್ಟೇಬಲ್​ ಸರೋಜ ಖ್ಯಾತಿಯ) ಒಂದು ಫೋಟೋ ಶೇರ್​ ಮಾಡಿದ್ದರು. ಈ ಫೋಟೋ ನೋಡಿ, ಚಿಕ್ಕಣ್ಣನವರ ಜತೆ ಅವರ ಮದುವೆಯಾಗಿದೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ಅಲ್ಲಗೆಳೆದಿರುವ ಅವರು, ತಾವು ಚಿಕ್ಕಣ್ಣ ಅವರನ್ನು ಮದುವೆಯಾಗಿಲ್ಲ ಎಂದು ಈ ಟಿಕ್​ಟಾಕ್​ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

    Posted by Vijayavani on Monday, June 29, 2020

    ಈ ಕುರಿತು ಮಾತನಾಡಿರುವ ಅವರು, ‘ಇತ್ತೀಚೆಗೆ ಚಿಕ್ಕಣ್ಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭ ಕೋರಿ ಒಂದು ಪೋಸ್ಟ್​ ಹಾಕಿದ್ದೆ. ಹಾಗೆಯೇ ಅವರ ಜತೆಗಿರುವ ಒಂದು ಫೋಟೋ ಶೇರ್​ ಮಾಡಿದ್ದೆ. ಇದು ಚಿತ್ರಕ್ಕಾಗಿ ತೆಗೆದ ಒಂದು ಫೋಟೋ. ಈ ಫೋಟೋ ನೋಡಿ, ನಾವಿಬ್ಬರು ಮದುವೆಯಾಗಿದ್ದೇವೆ ಎಂಬ ವದಂತಿ ಹರಡಿದೆ. ಅದೆಲ್ಲಾ ಸುಳ್ಳು. ನಾನು ಮದುವೆಯಾಗಿಲ್ಲ. ನಾನು ಮದುವೆಯಾಗುವುದಿದ್ದರೆ, ಅಧಿಕೃತವಾಗಿ ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ’ ಎಂದು ಅವರು ಹೇಳಿದ್ದಾರೆ.

    ಈಗ ತ್ರಿವೇಣಿ ಅವರೇ ಖುದ್ದಾಗಿ ಬಂದು ತಾವು ಚಿಕ್ಕಣ್ಣ ಅವರನ್ನು ಮದುವೆಯಾಗಿಲ್ಲ ಎಂದು ಹೇಳಿರುವುದರಿಂದ, ಇನ್ನಾದರೂ ಈ ವಿವಾದ ತಣ್ಣಗಾಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

    ನೀವಂದುಕೊಂಡಂತೆ ಏನೂ ಇಲ್ಲ … ಯಶ್ ಫೋಟೋಗೆ ರಾಧಿಕಾ ಪಂಡಿತ್ ಕಮೆಂಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts