More

    ಎನ್.ಆರ್.ಪುರ ಪಿಕಾರ್ಡ್ ಬ್ಯಾಂಕ್​ನಲ್ಲಿ ಬಿಜೆಪಿ ಬೆಂಬಲಿತರಿಗೆ ಬಹುಮತ

    ಎನ್.ಆರ್.ಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್) ಆಡಳಿತ ಮಂಡಳಿ ಚುನಾವಣೆಯಲ್ಲಿ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ದಾಖಲೆ ನಿರ್ವಿುಸಿದ್ದಾರೆ.

    ಶನಿವಾರ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಬೆಂಬಲಿತರು ವಿಜಯಿಯಾಗಿದ್ದಾರೆ. ಈ ಬಾರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾಂಗ್ರೆಸ್ 8ಕ್ಕೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಅವರ ಲೆಕ್ಕಾಚಾರ ತಲೆಕೆಳಗಾಗಿದೆ.

    12 ಸ್ಥಾನದ ಜತೆಗೆ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕರ ಸ್ಥಾನವೂ ಸೇರಿ 13 ನಿರ್ದೇಶಕರ ಬಲಾಬಲವನ್ನು ಬಿಜೆಪಿ ಹೊಂದಿದೆ.

    ಪಿಕಾರ್ಡ್ ಬ್ಯಾಂಕ್ ಚುನಾವಣೆ ಗೆಲುವು ಅದ್ಭುತವಾಗಿದೆ. ಸುಳ್ಳು ಹೇಳಿ ಅಧಿಕಾರ ಪಡೆಯುತ್ತಿದ್ದ ವಿಪಕ್ಷದವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹೇಳಿದರು.

    ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದ ಹಿನ್ನೆಲೆಯಲ್ಲಿ ಆಚರಿಸಿದ ವಿಜಯೋತ್ಸವದಲ್ಲಿ ಮಾತನಾಡಿ, ನಾನು ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದ ಅವಧಿಯಲ್ಲೂ ಇಷ್ಟು ಸ್ಥಾನಗಳನ್ನು ಗೆದ್ದಿರಲಿಲ್ಲ. ನಾವು ಯಾವಾಗಲೂ ಗೆಲ್ಲಲಾಗದ ಕ್ಷೇತ್ರದಲ್ಲೂ ಈ ಬಾರಿ ಗೆಲುವು ಸಾಧಿಸಿರುವುದು ವಿಶೇಷ ಎಂದು ಸಂತಸ ವ್ಯಕ್ತಪಡಿಸಿದರು.

    ಒಂದು ವಿಎಸ್​ಎಸ್​ಎನ್ ಹೊರತುಪಡಿಸಿ ಉಳಿದೆಲ್ಲ ವಿಎಸ್​ಎಸ್​ಎನ್​ಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಗೆಲುವು ಮುಂದಿನ ಗ್ರಾಪಂ ಚುನಾವಣೆಗೂ ಮುನ್ನುಡಿಯಾಗಿದೆ ಎಂದು ಹೇಳಿದರು.

    ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ಎಸ್.ಆಶೀಶ್​ಕುಮಾರ್, ತಾಲೂಕು ಅಧ್ಯಕ್ಷ ಅರುಣಕುಮಾರ್,ನಗರ ಘಟಕದ ಅಧ್ಯಕ್ಷ ಸುರಭಿ ರಾಜೇಂದ್ರ, ತಾಲೂಕು ಯುವ ಮೋರ್ಚಾ ಘಟಕದ ಅಧ್ಯಕ್ಷ ಅಶ್ವನ, ಟಿ.ಆರ್.ಜಯರಾಂ, ಭಾಸ್ಕರ್ ವೆನಿಲ್ಲಾ, ಜೆ.ಜಿ.ನಾಗರಾಜ್, ಮಂಜುನಾಥ್ ಲಾಡ್, ವಿನೋದ, ಡಿ.ಆರ್.ಶ್ರೀನಾಥ್, ಎ.ಬಿ.ಮಂಜುನಾಥ್, ವಿಜಯಕುಮಾರ್, ಎನ್.ಎಂ.ಕಾರ್ತಿಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts