More

    15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ

    ನವದೆಹಲಿ: ಆಕೆಗೀಗ 19 ವಯಸ್ಸು. ಜತೆಗೆ ಎರಡೂವರೆ ವರ್ಷದ ಮಗುವಿನ ತಾಯಿ ಬೇರೆ. ಏಕೆಂದರೆ ಆಕೆಗೆ 15ರ ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆ ಮಾಡಿಸಲಾಯಿತು. ಆದರೆ, ಇಷ್ಟಕ್ಕೆ ಬದುಕು ಮುಗಿಯಿತು ಎಂದು ಆಕೆ ಅಂದುಕೊಳ್ಳಲೇ ಇಲ್ಲ…!

    ಇತ್ತೀಚೆಗೆ ಪ್ರಕಟವಾದ ತ್ರಿಪುರ ಪಿಯು ಅಥವಾ 12ನೇ ತರಗತಿಯ ಪರೀಕ್ಷೆಯಲ್ಲಿ ಅಗ್ರಸ್ಥಾನಿಯಾಗಿ ತೇರ್ಗಡೆಯಾಗಿದ್ದಾಳೆ ಈಕೆ. ಶೇ.92.6 ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದರೆ, ಎಲ್ಲ ವಿಭಾಗದವರನ್ನೂ ಪರಿಗಣಿಸುವುದಾದರೆ 9ನೇ ರ್ಯಾಂಕ್​ ಪಡೆದಿದ್ದಾಳೆ.

    ಇದನ್ನೂ ಓದಿ; ಹೆಚ್ಚಾಗಲಿದೆ ಕರೆ ದರ, ಡೇಟಾ ಶುಲ್ಕ; ಬಳಕೆ ಹೆಚ್ಚಾದರೂ ನಷ್ಟದಲ್ಲಿವೆಯಂತೆ ಕಂಪನಿಗಳು…! 

    ಸಂಘಮಿತ್ರಾ ದೇಬ್​ ತ್ರಿಪುರಾ ರಾಜಧಾನಿ ಅಗರ್ತಲಾದಿಂದ 10 ಕಿ.ಮೀ. ದೂರದಲ್ಲಿರುವ ಗಾಂಧಿಗ್ರಾಮ ನಗರದಲ್ಲಿದ್ದಾಳೆ. ಈಕೆಯ ಪತಿ ರಾಜು ಘೋಷ್​ ಬಿಎಸ್​ಎಫ್​​ ಯೋಧನಾಗಿದ್ದು, ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದಾರೆ.

    ಮನೆ ಕೆಲಸ ಮುಗಿಸಿ, ಮಗುವಿನ ಆರೈಕೆ ಬಳಿಕ ಉಳಿದ ಸಮಯದಲ್ಲಿ ಓದುತ್ತಿದ್ದೆ. ನನ್ನ ಅತ್ತೆ ಮನೆಯವರು ನನಗೆ ಸಹಕರಿಸಿದ್ದಾರೆ ಎನ್ನುವ ಸಂಘಮಿತ್ರ, ಇದೇ ರೀತಿ ಪದವಿಯನ್ನು ಪೂರ್ಣಗೊಳಿಸುವ ಗುರು ಹೊಂದಿದ್ದಾಳೆ. ಮದುವೆಯಾಗಿ ಒಂದು ವರ್ಷದ ಬಳಿಕ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದ ಸಂಘಮಿತ್ರ ಶೇ.77 ಅಂಕ ಗಳಿಸಿದ್ದಳು.

    ಇದನ್ನೂ ಓದಿ; ದೇಶದಲ್ಲೇ ತಯಾರಾಗಲಿವೆ 11 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್​ಫೋನ್​ಗಳು; ಸ್ವಾವಲಂಬಿ ಭಾರತಕ್ಕೆ ಬಂತು ಬಲ 

    ಆದರೆ, ಸಂಘಮಿತ್ರ ಸಾಧನೆ ರಾಜ್ಯದಲ್ಲಿ ನಿಯಂತ್ರಣಕ್ಕೆ ಬಾರದ ಬಾಲ್ಯ ವಿವಾಹದ ಪಿಡುಗನ್ನು ಮರೆಮಾಚುವುದಿಲ್ಲ. ತ್ರಿಪುರದ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿದೆ. ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುವ ರಾಜ್ಯಗಳಲ್ಲಿ ತ್ರಿಪುರ ಎರಡನೇ ಸ್ಥಾನದಲ್ಲಿದೆ.

    ಸೆಪ್ಟಂಬರ್​​ಗೆ ಶಾಲಾ- ಕಾಲೇಜು ಆರಂಭ; ಮತ್ತೊಂದು ರಾಜ್ಯ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts