More

    ತೃಣಮೂಲ ಕಾಂಗ್ರೆಸ್‌ ನಾಯಕಿಗೆ ಅಧಿಕೃತ ಮನೆ ಖಾಲಿ ಮಾಡಲು ಸೂಚನೆ..

    Trinamool’s Mahua Moitra May Lose Official Residence Soon

    ನವದೆಹಲಿ: ಭ್ರಷ್ಟಾಚಾರ ಆರೋಪದ ಮೇಲೆ ಕಳೆದ ವಾರ ಲೋಕಸಭೆಯಿಂದ ಉಚ್ಛಾಟಿತರಾಗಿರುವ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಶೀಘ್ರದಲ್ಲೇ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ‘ಅಮಿತ್ ಶಾಗೆ ಇತಿಹಾಸ ತಿಳಿಯುತ್ತದೆ ಎಂದು ನಿರೀಕ್ಷಿಸಲಾಗದು: ನೆಹರು ವಿರುದ್ಧದ ವಾಗ್ದಾಳಿಗೆ ರಾಹುಲ್ ತಿರುಗೇಟು

    ಲೋಕಸಭೆಯ ವಸತಿ ಸಮಿತಿಯು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಆಕೆ ತನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ತಿಳಿಸಬೇಕು ಎಂದು ಸೂಚಿಸಿದೆ.

    ಮೊಯಿತ್ರಾ ಅವರಿಗೆ ವಿಶೇಷ ಕೋಟಾದ ಅಡಿಯಲ್ಲಿ ಸಚಿವಾಲಯವು ಮನೆಯನ್ನು ಮಂಜೂರು ಮಾಡಿದೆ. ಆದರೆ ಅವರ ವಿರುದ್ಧದ ‘ಪ್ರಶ್ನೆ ಕೇಳಲು ಹಣ’ ಆರೋಪದ ಕುರಿತು ನೈತಿಕ ಸಮಿತಿಯ ವರದಿಯ ನಂತರ ಶುಕ್ರವಾರ ಲೋಕಸಭೆಯಿಂದ ಹೊರಹಾಕಲಾಗಿತ್ತು.

    ತನ್ನ ವರದಿಯಲ್ಲಿ, ಸಮಿತಿಯು ಮೊಯಿತ್ರಾ ಅವರನ್ನು ಸಂಸತ್ತಿನಿಂದ ಹೊರಹಾಕುವಂತೆ ಶಿಫಾರಸು ಮಾಡಿದೆ. ಏಕೆಂದರೆ ಅವರ ಕ್ರಮಗಳು “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಅಪರಾಧ” ಎಂದು ಅದು ಹೇಳಿತ್ತು.
    ಬಿರುಸಿನ ಚರ್ಚೆ ಮತ್ತು ಧ್ವನಿ ಮತದ ನಂತರ ಲೋಕಸಭೆ ಓಂ ಬಿರ್ಲಾ ಅವರು, “ಸಂಸದ ಮಹುವಾ ಮೊಯಿತ್ರಾ ಅವರ ನಡವಳಿಕೆಯು ಅನೈತಿಕ ಮತ್ತು ಅಸಭ್ಯವಾಗಿದೆ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನ ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದರಾಗಿ ಮುಂದುವರಿಯುವುದು ಸೂಕ್ತವಲ್ಲ” ಎಂದು ಹೇಳಿದ್ದರು. ಬಳಿಕ ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಮಾತನಾಡಲು ಮಹುವಾ ಅವರಿಗೆ ಅವಕಾಶ ನೀಡಲಿಲ್ಲ, ಇದು ಕೆಲವು ವಿರೋಧ ಪಕ್ಷದ ನಾಯಕರಿಂದ ಪ್ರತಿಭಟನೆಗೆ ಕಾರಣವಾಯಿತು, ಆದರೂ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಯಿತು. ಈಗ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿದ್ದಾರೆ.

    ಸಂಸತ್ತಿನಲ್ಲಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ನಗದು ಮತ್ತು “ಐಷಾರಾಮಿ ಉಡುಗೊರೆ ವಸ್ತುಗಳು” ಸೇರಿದಂತೆ ಲಂಚ ಪಡೆದ ಆರೋಪವನ್ನು ಅವರು ಎದುರಿಸಿದ್ದರು.

    ಪಾಕಿಸ್ತಾನ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ: 23 ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts