More

    ಇಷ್ಟಲಿಂಗ ಜನಕ ಬಸವಣ್ಣ ಕಲಾಕೃತಿ ಲೋಕಾರ್ಪಣೆ

    ಮೈಸೂರು: ಬಸವಣ್ಣನವರು ಎಲ್ಲರಿಗೂ ಶಿವನನ್ನು ಪೂಜಿಸುವ ಅವಕಾಶ ಸಿಗಬೇಕು ಎಂದು ಇಷ್ಟಲಿಂಗವನ್ನು ಪೂಜಿಸುವ ಪರಿಕಲ್ಪನೆಯನ್ನು ತಂದರು. ಅಂತೆಯೆ ಎಲ್ಲರೂ ಶಿವಲಿಂಗದ ಆರಾಧನೆ ಆರಂಭಿಸಿದರು. ಇದರಿಂದ ದೇವರ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಸಾರಿದರು ಎಂದು ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮೀಜಿ ತಿಳಿಸಿದರು.

    ಮೈಸೂರು ಆರ್ಟ್ ಗ್ಯಾಲರಿ, ಕನ್ನಡ ಸಾಹಿತ್ಯ ಕಲಾಕೂಟ ಸಹಯೋಗದಲ್ಲಿ ಭಾನುವಾರ ರಾಮಾನುಜ ರಸ್ತೆಯ ಮೈಸೂರು ಆರ್ಟ್ ಗ್ಯಾಲರಿ ಆವರಣದಲ್ಲಿ ಇಷ್ಟಲಿಂಗ ಜನಕ ಬಸವಣ್ಣ ಕಲಾಕೃತಿ ಲೋಕಾರ್ಪಣೆ ಹಾಗೂ ಬಸವ ಜಯಂತಿ ಉದ್ಘಾಟಿಸಿ ಮಾತನಾಡಿದರು.

    ಇಷ್ಟಲಿಂಗದ ಪರಿಕಲ್ಪನೆಗೂ ಮುನ್ನ ಸ್ಥಾವರ ಲಿಂಗ ಪೂಜೆ ಆಚರಣೆಯಲ್ಲಿತ್ತು. ಈ ಸಂದರ್ಭದಲ್ಲಿ ಎಲ್ಲ ವರ್ಗದವರಿಗೂ ಶಿವಲಿಂಗ ಪೂಜೆ ಮಾಡಲು ಅವಕಾಶ ಸಿಗುತ್ತಿರಲಿಲ್ಲ. ವಿಶೇಷವಾಗಿ ಎಲ್ಲಾ ವರ್ಗದ ಹೆಣ್ಣು ಮಕ್ಕಳಿಗೆ ಈ ಅವಕಾಶವಿರಲಿಲ್ಲ. ಅಲ್ಲದೇ ಈ ಸಂದರ್ಭದಲ್ಲಿ ನಾನಾ ರೀತಿಯಲ್ಲಿ ತಾರತಮ್ಯ ಮಾಡಲಾಡಲಾಗುತ್ತಿತ್ತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts