More

    ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರ ಮತ್ತು ವಿದೇಶಿ ಸೇವಾ ಸಂಸ್ಥೆಗಿನ್ನು ಸುಷ್ಮಾ ಸ್ವರಾಜ್​ ಹೆಸರು: ಮಾಜಿ ಸಚಿವೆಗೆ ಕೇಂದ್ರದ ಗೌರವ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರಕ್ಕೆ ಸುಷ್ಮಾ ಸ್ವರಾಜ್​ ಭವನ ಎಂದು ಮತ್ತು ವಿದೇಶಿ ಸೇವಾ ಸಂಸ್ಥೆಗೆ ಸುಷ್ಮಾ ಸ್ವರಾಜ್​ ಇನ್ಸ್ಟಿಟ್ಯೂಟ್​ ಆಫ್ ಫಾರಿನ್​ ಸರ್ವಿಸ್​ ಎಂದು ಸರ್ಕಾರ ಘೋಷಿಸಿದೆ.

    ನಾಳೆ (ಫೆ.14)ಕ್ಕೆ ಮಾಜಿ ವಿದೇಶಾಂಗ ಸಚಿವೆಯಾಗಿದ್ದ ದಿ.ಸುಷ್ಮಾ ಸ್ವರಾಜ್​ ಅವರ 68ನೇ ಜನ್ಮದಿನಾಚರಣೆಯಿದೆ. ಜನ್ಮ ದಿನದ ಮುನ್ನಾ ದಿನವಾದ ಇಂದು ಮಾಜಿ ಸಚಿವೆಯ ಸ್ಮರಣಾರ್ಥ ಪ್ರವಾಸಿ ಭವನ ಮತ್ತು ವಿದೇಶಾಂಗ ಸೇವಾ ಸಂಸ್ಥೆಗೆ ಅವರ ಹೆಸರನ್ನು ಮರುನಾಮಕರಣ ಮಾಡಿರುವುದಾಗಿ ಘೋಷಿಸಲಾಗಿದೆ.

    ಈ ಕುರಿತಾಗಿ ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವ ಎಸ್​.ಜಯಶಂಕರ್​, “ಪ್ರವಾಸಿ ಭಾರತೀಯ ಕೇಂದ್ರವನ್ನು ಸುಷ್ಮಾ ಸ್ವರಾಜ್​ ಭವನವೆಂದು ಮತ್ತು ವಿದೇಶಿ ಸೇವಾ ಸಂಸ್ಥೆಯನ್ನು ಸುಷ್ಮಾ ಸ್ವರಾಜ್​ ಇನ್ಸ್ಟಿಟ್ಯೂಟ್​ ಆಫ್​ ಫಾರಿನ್​ ಸರ್ವಿಸ್​ ಎಂದು ಮರುನಾಮಕರಣ ಮಾಡಿರುವುದಾಗಿ ಸರ್ಕಾರ ಘೋಷಿಸಿರುವುದು ಸಂತೋಷ ತಂದಿದೆ. ನಮಗೆ ಸದಾ ಸ್ಫೂರ್ತಿ ತುಂಬುತ್ತಲೇ ಬಂದಿರುವ ವ್ಯಕ್ತಿಗೆ ಇದು ಸೂಕ್ತ ಗೌರವ” ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts