More

    ಸುಷ್ಮಾ ಸ್ವರಾಜ್​ ಮೊದಲ ಪುಣ್ಯತಿಥಿಯಂದು ಗೌರವ ಸಲ್ಲಿಸಿದ ಪ್ರಧಾನಿ ಮೋದಿ…

    ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್​ ಅವರ ಮೊದಲ ವರ್ಷದ ಪುಣ್ಯ ತಿಥಿ ಇಂದು. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಕೇಂದ್ರ ಸಚಿವರು ಸುಷ್ಮಾ ಅವರನ್ನು ನೆನಪಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿದ್ದಾರೆ. ಇದನ್ನೂ ಓದಿ: ಚೀನಾ ಸೈನಿಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಯಾಕೆ ಹೇಳಿದರು?-ರಾಹುಲ್ ಗಾಂಧಿ

    ಕಳೆದ ವರ್ಷ ಸುಷ್ಮಾ ಸ್ವರಾಜ್​ ಮೃತಪಟ್ಟಾಗ, ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾವು ಮಾತಾಡಿದ್ದ ವಿಡಿಯೋವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿರುವ ಪ್ರಧಾನಿ, ಸುಷ್ಮಾ ಜಿ ಅವರ ಮೊದಲ ವರ್ಷದ ಪುಣ್ಯತಿಥಿ ಇಂದು. ಅವರ ಅಕಾಲಿಕ ನಿಧನ ಅನೇಕರಿಗೆ ದುಃಖ ತಂದಿದೆ. ಅವರು ನಿಸ್ವಾರ್ಥವಾಗಿ ದೇಶಸೇವೆ ಮಾಡಿದ್ದಾರೆ. ವಿಶ್ವಮಟ್ಟದಲ್ಲಿ ಭಾರತಕ್ಕೆ ಸ್ಪಷ್ಟ ಧ್ವನಿಯಾಗಿದ್ದರು ಎಂದು ಹೇಳಿದ್ದಾರೆ.

    ಕಳೆದ ವರ್ಷ ಹಮ್ಮಿಕೊಂಡಿದ್ದ ಸುಷ್ಮಾ ಸ್ವರಾಜ್​ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನರೇಂದ್ರ ಮೋದಿಯವರು, ಸುಷ್ಮಾ ಸ್ವರಾಜ್ ಭಾರತದ ಗೌರವಾನ್ವಿತ ನಾಯಕರಲ್ಲಿ ಒಬ್ಬರು ಎಂದು ಹೊಗಳಿದ್ದರು. ಅಲ್ಲದೆ, ಅವರೊಬ್ಬ ಬಹುಮುಖ ಪ್ರತಿಭೆಯುಳ್ಳ ನಾಯಕಿ. ಸಮರ್ಥ ವಾಗ್ಮಿ. ಅವರ ಮಾತುಗಳು ತುಂಬ ಪರಿಣಾಮಕಾರಿಯಾಗಿರುತ್ತದೆ ಮತ್ತು ಸ್ಫೂರ್ತಿದಾಯಕವಾಗಿರುತ್ತದೆ ಎಂದು ಹೇಳಿದ್ದರು. (ಏಜೆನ್ಸೀಸ್​)

    ಶಿಲಾನ್ಯಾಸದ ನಂತರ ಪ್ರಧಾನಿ ಮೋದಿ ಜೈ ಶ್ರೀರಾಮ್​ ಹೇಳದೆ, ಜೈ ಸಿಯಾ ರಾಮ್​ ಎಂದೇ ಹೇಳಿದ್ದೇಕೆ? ಕಾರಣ ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts