More

  ಕೆ.ಶಿವರಾಂ ಅವರಿಗೆೆ ಶ್ರದ್ಧಾಂಜಲಿ

  ಸರಗೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆದಿಕರ್ನಾಟಕ ಮಹಾಸಭಾ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನಿವೃತ್ತ ಐಎಎಸ್ ಅಧಿಕಾರಿ ದಿ.ಕೆ.ಶಿವರಾಂ ಅವರಿಗೆ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

  ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬಿರ್ವಾಳ್ ಬಸವರಾಜು ಮಾತನಾಡಿ, ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಹುಟ್ಟು ಹಾಕಿದ್ದ ಕೆ.ಶಿವರಾಂ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲಿಗರಾಗಿದ್ದಾರೆ ಎಂದು ಸ್ಮರಿಸಿದರು.

  ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಕೆ.ಶಿವರಾಂ ಅವರು ಹಳ್ಳಿಗಳಲ್ಲಿ ಒಂದರಿಂದ ಮೂರು ದಿನ ಗ್ರಾಮ ವಾಸ್ತವ್ಯ ಹೂಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅವರ ಕ್ರಾಂತಿಕಾರಕ ಕಾರ್ಯಕ್ರಮಗಳು ಎಲ್ಲೆಡೆ ಪ್ರಚಾರವಾಯಿತ್ತಲ್ಲದೇ, ರಾಜಕಾರಣಿಗಳು ಸೇರಿದಂತೆ ಇತರ ಅಧಿಕಾರಿಗಳು ಅನುಕರಿಸುವಂತಾಯಿತು ಎಂದರು.

  ಛಲವಾದಿ ಸಮಾಜಕ್ಕೆ ಆರ್ಥಿಕ ಸಬಲತೆ ತರಲು ಶ್ರಮಿಸಿರುವುದಲ್ಲದೆ, ಗೊಲ್ಲರಹಟ್ಟಿಯಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಪಣ ತೊಟ್ಟಿದ್ದರು. ಆಗಲೇ ಜನರಲ್ಲಿ ಜಾಗೃತಿ ಮೂಡಿಸುವ ಕೈಂಕರ್ಯ ತೊಟ್ಟಿದ್ದರು ಎಂದರು.

  ಪಪಂ ಸದಸ್ಯ ಚಲುವಕೃಷ್ಣ, ಗ್ರಾಪಂ ಸದಸ್ಯ ಲಂಕೆ ರಮೇಶ್, ಕುರ್ಣೇಗಾಲ ಬೆಟ್ಟಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಮಾಜಿ ಗ್ರಾಪಂ ಸದಸ್ಯ ಚಿನ್ನಯ್ಯ, ಸೋಮಣ್ಣ, ಪ್ರಭಾಕರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಇಟ್ನ ರಾಜಣ್ಣ, ನಾಯಕ ಸಮಾಜ ತಾಲೂಕು ಅಧ್ಯಕ್ಷ ಶಂಭುಲಿಂಗನಾಯಕ, ಇದಿಯಪ್ಪ, ತಿಮ್ಮಯ್ಯ, ಬಿಡಗಲು ಶಿವಣ್ಣ, ಶಿವಶಂಕರ್, ಬಿಲ್ಲಯ್ಯ, ಗೋಪಾಲಸ್ವಾಮಿ, ಮಲ್ಲಿಕಾರ್ಜುನಯ್ಯ, ಮಹಾದೇವ, ಕಂದೇಗಾಲ ನಾಗರಾಜು, ಶಿವರಾಜು, ದಯಾನಂದ, ಮಹೇಂದ್ರ, ಈಶ್ವರ, ಚಿನ್ನಯ್ಯ, ಸಾಗರೆ ಶಂಕರ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts