More

  ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ

  ಸರಗೂರು: ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಅವಲಂಬಿಸಿದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

  ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಕೃಷಿಯ ಜತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಮಾಡುವುದರಿಂದ ಒಂದರಲ್ಲಿ ನಷ್ಟವಾದರೆ, ಒಂದು ಕೈಹಿಡಿಯುತ್ತದೆ ಎಂದರು.

  ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ. ಈರೇಗೌಡ ಮಾತನಾಡಿ, ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ರಾಜಕೀಯ ಬೆರೆಸದೆ ಉತ್ತಮವಾಗಿ ಸಂಘವನ್ನು ನಡೆಸಿಕೊಂಡು ಹೋಗಬೇಕು. ಹೈನುಗಾರರು ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡುವಂತೆ ತಿಳಿಸಿದರು. ರಾಸುಗಳಿಗೆ ವಿಮೆ, ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ತೆರೆದಿದ್ದು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.

  ಪಿಡಿಒ ಇ-ಸ್ವತ್ತು ನೀಡಲು ಸತಾಯಿಸುತ್ತಿದ್ದಾರೆ ಎಂದು ಗ್ರಾಮದ ಕೆಲವರು ಶಾಸಕರ ಗಮನಕ್ಕೆ ತಂದರು. ಈ ವೇಳೆ ಸ್ಥಳದಲ್ಲಿದ ಪಿಡಿಒಗೆ ಕೂಡಲೇ ಈ ಸ್ವತ್ತು ನೀಡುವಂತೆ ಶಾಸಕರು ಸೂಚಿಸಿದರು.

  ಇದಕ್ಕೂ ಮುನ್ನ ನೂತನ ಸಂಘದ ಕಟ್ಟಡ ಉದ್ಘಾಟನೆ, ಹಾಲು ಶೇಖರಣೆಗೆ ಚಾಲನೆ ಹಾಗೂ ಕ್ಷೀರಕ್ರಾಂತಿಯ ಹರಿಕಾರರಾದ ಡಾ. ವರ್ಗೀಸ್ ಕುರಿಯನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.

  ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ದ್ರಾಕ್ಷಾಯಿಣಿ ಬಸವರಾಜಪ್ಪ, ಹಿರಿಯ ಸಹಕಾರಿಗಳಾದ ಬಸವರಾಜಪ್ಪ, ವಿಸ್ತರಣಾಧಿಕಾರಿ ಅರೀಫ್ ಇಕ್ಬಾಲ್, ಎಂ.ವೈ. ಜಗದಾಂಬ, ಪಿಡಿಒ ಬಿ.ಸಂತೋಷ್, ಮುಖಂಡರಾದ ಗೌಡಿಕೆ ರಾಜಪ್ಪ, ಗ್ರಾ.ಪಂ. ಸದಸ್ಯ ವರದನಾಯಕ, ಮಮತಾ, ಕಲ್ಪನಾ, ಸಿದ್ದರಾಜು, ಶ್ರೀನಿವಾಸ್, ಮಹದೇವಪ್ಪ, ಎಸ್.ಎಂ. ಮಹೇಶ್ವರಪ್ಪ, ಚಿಕ್ಕನಾಯಕ, ರಂಗಶೆಟ್ಟಿ, ಪುಟ್ಟಶೆಟ್ಟಿ, ಸಿ. ತಿಮ್ಮನಾಯಕ, ಸಣ್ಣತಿಮ್ಮನಾಯಕ, ನಂಜಪ್ಪ, ಶೇಷನಾಯಕ, ನಾಗನಾಯಕ, ಶಿವು ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts