More

    ಗಿಡ-ಮರಗಳೇ ಶ್ರೇಷ್ಠ ಸಂಪತ್ತು

    ಆನಂದಪುರ: ಜೀವಸಂಕುಲದ ಜೀವ ಹಾಗೂ ಜೀವನಕ್ಕೆ ಆಧಾರವಾಗಿರುವ ಗಿಡ-ಮರಗಳೇ ನಿಜವಾದ ಶ್ರೇಷ್ಠ ಸಂಪತ್ತು ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.

    ವಿವಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಮರಗಳು ಪರಿಸರದ ಅಮೂಲ್ಯ ಅಂಶ. ಮರಗಳನ್ನು ಕಡಿದು ನಾಶ ಮಾಡಿದರೆ ಅದಕ್ಕೆ ಪರ್ಯಾಯವಾಗಿ ಬೇರೆ ವ್ಯವಸ್ಥೆ ಸಾಧ್ಯವಿಲ್ಲ. ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕ ಉತ್ಪಾದನೆ, ವಾತಾವರಣದಲ್ಲಿ ಉಷ್ಣಾಂಶ ನಿಯಂತ್ರಣ, ಮಣ್ಣಿನ ಫಲವತ್ತತೆ ವೃದ್ಧಿಗೊಳಿಸುವುದು ಸೇರಿದಂತೆ ಮರ-ಗಿಡಗಳು ಶ್ರೇಷ್ಠ ಕಾರ್ಯ ನಿರ್ವಹಿಸುತ್ತವೆ. ಪ್ರತಿಯೊಬ್ಬರೂ ಗಿಡ-ಮರ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು.
    ವಿವಿಯ ವಿಶೇಷಾಽಕಾರಿ ಡಾ. ಕೆ.ಸಿ.ಶಶಿಧರ, ವಿಸ್ತರಣಾ ನಿರ್ದೇಶಕ ಕೆ.ಟಿ.ಗುರುಮೂರ್ತಿ, ಡೀನ್ ಡಾ. ದಿನೇಶ್ ಕುಮಾರ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ಶಿವಶಂಕರ್, ಆಡಳಿತಾಽಕಾರಿ ಡಾ. ಎಂ.ಎಸ್.ನಾಗರಾಜು, ವಿದ್ಯಾರ್ಥಿ ಸಲಹೆಗಾರ ಡಾ. ಕಿರಣ್ ಕುಮಾರ್, ಡಾ. ಸಿದ್ದಪ್ಪ ಕನ್ನೂರು, ಡಾ. ಶಿವಪುತ್ರ, ಸಹ ಪ್ರಾಧ್ಯಾಪಕ ಡಾ. ಗಣಪತಿ, ಉಪ ವಲಯ ಅರಣ್ಯಾಽಕಾರಿ ಭದ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts