More

    ಸುಬ್ರಹ್ಮಣ್ಯ ರಕ್ಷಿತಾರಣ್ಯದಲ್ಲಿ ಮರ ಕಳವು, ಅರಣ್ಯಾಧಿಕಾರಿಗಳು ಶಾಮೀಲು ಬಗ್ಗೆ ಸ್ಥಳೀಯರ ದೂರು

    ಕಡಬ: ಸುಬ್ರಹ್ಮಣ್ಯ ವಲಯ ಐತ್ತೂರು ರಕ್ಷಿತಾರಣ್ಯದಲ್ಲಿ ಲಕ್ಷಾಂತರ ರೂ.ಬೆಲೆಬಾಳುವ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ಮರಗಳ್ಳರೊಂದಿಗೆ ಕೈಜೋಡಿಸಿ ಕಡಿದಿದ್ದಾರೆ ಎಂಬ ಸ್ಥಳೀಯರ ದೂರಿನಂತೆ ಮಂಗಳೂರಿನ ಅರಣ್ಯ ಸಂಚಾರ ದಳದ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

    ಸುಬ್ರಹ್ಮಣ್ಯ ವಲಯದ ಐತ್ತೂರು ಸುಂಕದಕಟ್ಟೆ, ಬಿಳಿನೆಲೆ, ಕೊಣಾಜೆ, ಮುಜೂರು ಮುಂತಾದ ರಕ್ಷಿತಾರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಕೇರಳಕ್ಕೆ ಮಾರಾಟ ಮಾಡಲಾಗಿದೆ. ಸ್ಥಳದಲ್ಲಿ ಹಲವಾರು ಮರಗಳನ್ನು ಕಡಿದಿರುವ ಪುರಾವೆಗಳಿವೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹಾಗೂ ಈ ಹಿಂದೆ ಕಾರ್ಯನಿರ್ವಹಿಸಿದ ವಲಯ ಅರಣ್ಯಾಧಿಕಾರಿ ತ್ಯಾಗರಾಜ ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆ. ಅದರಲ್ಲಿ ಫಾರೆಸ್ಟರ್ ರವಿಚಂದ್ರ, ಅರಣ್ಯ ರಕ್ಷಕ ಅಶೋಕ, ಚಂದ್ರಪ್ರಕಾಶ್ ಹಾಗೂ ಇತರ ಫಾರೆಸ್ಟರ್‌ಗಳು ಶಾಮೀಲಾಗಿದ್ದಾರೆ ಎಂದು ಸ್ಥಳಗಳ ಜಿಪಿಎಸ್ ಚಿತ್ರ ಸಮೇತ ಅರಣ್ಯ ಸಂಚಾರ ದಳಕ್ಕೆ ಸ್ಥಳೀಯರು ದೂರು ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts