More

    ಹತ್ತು ವರ್ಷ 3.5 ಲಕ್ಷ ಜನ ಆ ನಿಧಿಗಾಗಿ ಹುಡುಕಿದ್ದರು; ಅಷ್ಟಕ್ಕೂ ಎಲ್ಲಿತ್ತು? ಎಷ್ಟಿತ್ತು?

    ನವದೆಹಲಿ: ಅದೇನೂ ಕಳೆದು ಹೋದ ಭಂಡಾರವಲ್ಲ ಅಥವಾ ಸಾಗರದಾಳಕ್ಕೆ ಮುಳುಗಿದ ಹಡಗಿನಲ್ಲಿದ್ದ ಸಂಪತ್ತು ಅಲ್ಲ. ತನಗೆ ಕ್ಯಾನ್ಸರ್​ ಇದೆ ಎಂದು ಗೊತ್ತಾದ ಬಳಿಕ ಒಬ್ಬಾತ ತನ್ನ ಬಳಿಯಿದ್ದ ಚಿನ್ನ, ವಜ್ರ, ವೈಡೂರ್ಯವನ್ನೆಲ್ಲ ಪೆಟ್ಟಿಗೆಯೊಂದರಲ್ಲಿ ಮುಚ್ಚಿಟ್ಟಿದ್ದ. ಅದನ್ನು ಯಾರೂ ಬೇಕಾದರೂ ಹುಡುಕಿಕೊಳ್ಳಬಹುದು ಎಂದು ಘೋಷಿಸಿದ್ದ. ಇದಾಗಿ 10 ವರ್ಷಗಳ ಬಳಿಕ ಆ ಸಂಪತ್ತು ಒಬ್ಬನ ಪಾಲಾಗಿದೆ.

    ಉತ್ತರ ಅಮೆರಿಕದ ರಾಕಿ ಪರ್ವತ ಪ್ರದೇಶದಲ್ಲಿ ಅಮೂಲ್ಯ ಸಂಪತ್ತನ್ನು ಕಂಚಿನ ಪೆಟ್ಟಿಗೆಯೊಂದರಲ್ಲಿ ಅಡಗಿಸಿಡಲಾಗಿತ್ತು. ಕಳೆದ ಭಾನುವಾರ ಅದನ್ನು ಹುಡುಕುವಲ್ಲಿ ವ್ಯಕ್ತಿಯೊಬ್ಬ ಯಶಸ್ವಿಯಾಗಿದ್ದಾನೆ ಎಂದು ಅದರ ಒಡೆಯ 89 ವರ್ಷ ವಯಸ್ಸಿನ ಫಾರ್ರೆಸ್ಟ್​ ಫೆನ್​ ಮಾಹಿತಿ ನೀಡಿದ್ದಾನೆ.

    ಇದನ್ನೂ ಓದಿ; ಕರೊನಾ ರೋಗಿಗಳಿಗಿನ್ನು ಮನೆಯೇ ಆಸ್ಪತ್ರೆ; ಜೇಬಿಗೆ ತಕ್ಕಂಥ ಟ್ರೀಟ್​ಮೆಂಟ್​ ಪ್ಯಾಕೇಜ್​

    ಫೆನ್​ ಅಮೂಲ್ಯ ಕಲಾಕೃತಿಗಳು ಹಾಗೂ ಪುರಾತನ ವಸ್ತುಗಳ ಸಂಗ್ರಹಕಾರ. ತನಗೆ ಕಿಡ್ನಿ ಕ್ಯಾನ್ಸರ್​ ತಗುಲಿದೆ ಎಂಬುದು ಗೊತ್ತಾಗುತ್ತಿದ್ದಂತೆ ತನ್ನ ಬಳಿಯಿದ್ದ ವಸ್ತುಗಳನ್ನೆಲ್ಲ ಕಂಚಿನ ಪೆಟ್ಟಿಗೆಯಲ್ಲಿ ತುಂಬಿಸಿದ್ದ. ಪೆಟ್ಟಿಗೆ ಒಂಭತ್ತು ಕೆಜಿ ಇದ್ದರೆ, ಅದರಲ್ಲಿದ್ದ ಚಿನ್ನಾಭರಣ, ವಜ್ರ ಹಾಗೂ ಇತರ ಅಮೂಲ್ಯ ವಸ್ತುಗಳ ತೂಕ 10 ಕೆಜಿಯಾಗಿತ್ತು. ಇದನ್ನು ಉತ್ತರ ಅಮೆರಿಕದ ರಾಕಿ ಪರ್ವತ ಪ್ರದೇಶದ ಕಾಡೊಂದರಲ್ಲಿ ಅಡಗಿಸಿಟ್ಟಿದ್ದ.

    ನಿಧಿಯನ್ನು ಅಡಗಿಸಿಟ್ಟಿರುವ ಜಾಗ ಎಲ್ಲಿದೆ ಎಂಬ ಬಗ್ಗೆ ತಾನೇ ಬರೆದ 24 ಸಾಲುಗಳ ಕವನವೊಂದರಲ್ಲಿ ಸುಳಿವು ನೀಡಿದ್ದ. ಇದನ್ನು ಆಧರಿಸಿಯೇ ವ್ಯಕ್ತಿಯೊಬ್ಬ ಅದನ್ನು ಪತ್ತೆ ಹಚ್ಚಿದ್ದಾನೆ. ಕಂಚಿನ ಪೆಟ್ಟಿಗೆಯ ಚಿತ್ರ ಕಳುಹಿಸುವ ಮೂಲಕ ಪತ್ತೆ ಹಚ್ಚಿದ್ದನ್ನು ದೃಢಪಡಿಸಿದ್ದಾನೆ. ಆದರೆ, ತನ್ನ ಮಾಃಇತಿ ಬಹಿರಂಗಪಡಿಸಬೇಡಿ ಎಂದು ಆತ ಮನವಿ ಮಾಡಿರುವುದಾಗಿ ಫೆನ್​ ಹೇಳಿದ್ದಾನೆ. ಅದರಲ್ಲಿದ್ದ ವಸ್ತುಗಳ ಮೌಲ್ಯ 15 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ; ಕೊಳಚೆ ನೀರಿಗೂ ವಕ್ಕರಿಸಿದೆ ಕರೊನಾ; ಚೆನ್ನೈ ಬಳಿಕ ಅಹಮದಾಬಾದ್​ ಸರದಿ

     

    ಈ ನಿಧಿ ಪತ್ತೆ ಹಚ್ಚಲು ಕಳೆದ ಹತ್ತು ವರ್ಷಗಳಲ್ಲಿ 3.5 ಲಕ್ಷಕ್ಕೂ ಅಧಿಕ ಜನರು ಯತ್ನಿಸಿದ್ದರು. ಹಲವರು ತಮ್ಮ ಉದ್ಯೋಗವನ್ನೇ ತೊರೆದಿದ್ದರು. ಶೋಧ ಕಾರ್ಯದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ಸದ್ಯ ಕ್ಯಾನ್ಸರ್​ನಿಂದ ಗುಣಮುಖಗೊಂಡಿರುವ ಫೆನ್​ ಹೇಳಿದ್ದಾನೆ. ಆದರೆ, ಕೆಲವರು ಫೆನ್​ ಹೇಳುತ್ತಿರುವುದೆಲ್ಲ ಸುಳ್ಳು ಎಂದು ವಾದಿಸಿದ್ದರು.

    ನನ್ನ ವಿಮಾನದ ಟಿಕೆಟ್​ಗಾಗಿ ತಂದೆ ವರ್ಷದ ಸಂಬಳ ಖರ್ಚು ಮಾಡಿದ್ದರು; ಸಂಕಷ್ಟದ ದಿನ ನೆನೆದ ಗೂಗಲ್​ ಸಿಇಒ ಸುಂದರ್​ ಪಿಚಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts