More

    ರೈಲು ಹತ್ತುವಾಗ ಸುಮ್ಮನಿದ್ರು, ಇಳಿದ ಮೇಲೆ ‘ಹೈಡ್ರಾಮ’ ಶುರು ಮಾಡಿದ್ರು!

    ಬೆಂಗಳೂರು: ಮೆಜೆಸ್ಟಿಕ್​ ಬಳಿಯ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳ್ಗಗೆ ದೆಹಲಿಯಿಂದ ಬಂದಿಳಿದ 537 ಪ್ರಯಾಣಿಕರ ಪೈಕಿ 300ಕ್ಕೂ ಹೆಚ್ಚು ಮಂದಿ ಹೋಟೆಲ್​ಗಳಲ್ಲಿ ಕ್ವಾರಂಟೈನ್​ ಆಗಲು ಸಿದ್ಧವಿಲ್ಲ ಎಂದು ಹೈಡ್ರಾಮ ನಡೆಸಿದರು.

    ಪ್ಲಾಟ್ ಫಾರಂನಲ್ಲೇ ನಿಂತ ನೂರಾರು ಪ್ರಯಾಣಿಕರು ನಾವು ವಾಪಸ್​ ಹೋಗಲು ರೆಡಿ. ಆದರೆ ಹೋಂ ಕ್ವಾರಂಟೈನ್​ ಹೊರತು ಬೇರೆಡೆ ಇರಲ್ಲ ಎಂದು ಕೂಗಾಡಿದರು. ಕ್ವಾರಂಟೈನ್​ನಲ್ಲಿ ಇರಬೇಕಾದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ನಮ್ಗೆ ನೀವೆ ಟಿಕೆಟ್ ಬುಕ್ ಮಾಡಿಸಿ ವಾಪಸ್ ಕಳುಹಿಸಿ ಎಂದು ಕೆಲವರು ವಾಗ್ವಾದಕ್ಕೆ ಇಳಿದಿದ್ದರು.

    ಇದನ್ನೂ ಓದಿರಿ ಪಾಕ್​ ಸೇನೆಯ ಬೇಡಿಕೆ ಕೇಳಿ ಬೆಚ್ಚಿಬಿದ್ದ ಪ್ರಧಾನಿ ಇಮ್ರಾನ್!

    ಮಂಗಳವಾರ ರಾತ್ರಿ ದೆಹಲಿಯಿಂದ ಹೊರಟಿದ್ದ ರೈಲು ಗುರುವಾರ ಬೆಳಗ್ಗೆ ಮೆಜೆಸ್ಟಿಕ್​ ಬಳಿಯ ರೈಲ್ವೆ ನಿಲ್ದಾಣ ತಲುಪಿತು. ಪೂರ್ವ ನಿಗದಿಯಂತೆ ಎಲ್ಲ ಪ್ರಯಾಣಿಕರನ್ನೂ ನಗರದ ಸುಮಾರು 90 ಹೊಟೇಲ್​ಗಳಲ್ಲಿ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಪ್ರಯಾಣಿಕರು ತಮ್ಮ ಆದ್ಯತೆ ಮೇರೆಗೆ ಕ್ವಾರಂಟೈನ್ ಆಗುವ ಹೋಟೆಲ್​ಗಳ ಆಯ್ಕೆಗೆ ಅವಕಾಶ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರಯಾಣಿಕರಿಗೆ ಸರ್ಕಾರಿ ಹಾಸ್ಟೆಲ್, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

    ಆದರೂ ನೂರಾರು ಪ್ರಯಾಣಿಕರು ಹೋಂ ಕ್ವಾರಂಟೈನ್​ ಬೇಕೆಂದು ಪಟ್ಟು ಹಿಡಿದರು. ರೈಲ್ವೆ ನಿಲ್ದಾಣದಿಂದ ಯಾವೊಬ್ಬ ಪ್ರಯಾಣಿಕರೂ ಎಸ್ಕೇಪ್​ ಆಗದಂತೆ ನೋಡಿಕೊಂಡ ಭದ್ರತಾ ಪಡೆಯು ಪ್ರಯಾಣಿಕರನ್ನು ಬಿಎಂಟಿಸಿ ಬಸ್​ ಹತ್ತಿಸಿ ನಿಗದಿತ ಕ್ವಾರಂಟೈನ್​ ಸ್ಥಳಕ್ಕೆ ತಲುಪಿಸಿತು.

    ಇದನ್ನೂ ಓದಿರಿ 700 ಕಿ.ಮೀ. ದೂರದ ಸ್ವಗ್ರಾಮಕ್ಕೆ ಗರ್ಭಿಣಿ ಪತ್ನಿ, ಮಗಳ ಹೊತ್ತು ಸಾಗಿದ್ದೇ ರೋಚಕ ಕಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts