More

    ಸಾಂಪ್ರದಾಯಿಕ ಹಾಡುಗಳು ಉಳಿಯಲಿ – ರಂಗಭೂಮಿ ಕಲಾವಿದ ಎ.ಎಂ.ಹಾಲಯ್ಯ ಅಭಿಮತ

    ಹೂವಿನಹಡಗಲಿ: ಗ್ರಾಮೀಣ ಪ್ರದೇಶದ ಜೀವನ ಶೈಲಿ ಬಿಂಬಿಸುವ ಸೋಬಾನೆಯಂತಹ ಸಾಂಪ್ರದಾಯಿಕ ಹಾಡುಗಳು ನಶಿಸುತ್ತಿದ್ದು, ಉಳಿವಿಗಾಗಿ ಯುವ ಪೀಳಿಗೆ ಮುಂದಾಗಬೇಕು ಎಂದು ರಂಗಭೂಮಿ ಕಲಾವಿದ ಎ.ಎಂ.ಹಾಲಯ್ಯ ಅಭಿಪ್ರಾಯ ಪಟ್ಟರು.

    ತಾಲೂಕಿನ ಸೋಗಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚನ್ನವೀರೇಶ್ವರ ಭಜನಾ ಸಂಘದ ಆಶ್ರಯದಲ್ಲಿ ಬಿ.ಕಾಳಮ್ಮ ಮತ್ತು ತಂಡ ಮಂಗಳವಾರ ಹಮ್ಮಿಕೊಂಡಿದ್ದ ಸೋಬಾನೆ ಪದಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಮಹಿಳೆಯರು ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ಮಾತ್ರ ಸೋಬಾನೆ ಪದ ಹಾಡುತ್ತಿದ್ದರು. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೇದಿಕೆ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಯಲಾಟ ಕಲಾವಿದ ವೈ.ಮಲ್ಲಪ್ಪ ಗವಾಯಿ ಮಾತನಾಡಿದರು. ಗ್ರಾಪಂ ಸದಸ್ಯರಾದ ಯಲ್ಲಪ್ಪ, ಗಂಗಮ್ಮ, ಮಲ್ಲಮ್ಮ, ಈಡಿಗರ ಶೇಖರಪ್ಪ, ಎಸ್.ಕರಿಬಸಪ್ಪ ,ಡಿ.ಹೊನ್ನೇಶ , ಬಯಲಾಟ ನಿರ್ದೇಶಕ ಹೊಳೆಯಾಚಿ ಕೊಟ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts