More

    ಕ್ಷೇತ್ರದ ಶಾಸಕರು ಸಚಿವರಾದ ದಿನದಂದೇ ನಗರಸಭೆ ಆಯುಕ್ತರ ಉರುಳು ಸೇವೆ; ವೈರಲ್ ಆಯ್ತು ವಿಡಿಯೋ

    ತಿಪಟೂರು: ಕ್ಷೇತ್ರದ ಶಾಸಕ ಬಿ.ಸಿ. ನಾಗೇಶ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಕಾಕತಾಳೀಯವೆಂಬಂತೆ ನಗರಸಭೆ ಆಯುಕ್ತ ಉಮಾಕಾಂತ್ ದೇವಾಲಯದಲ್ಲಿ ಉರುಳು ಸೇವೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ! ಇದು ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.

    ನಗರದ ಶ್ರೀ ಕೆಂಪಮ್ಮ ದೇವಿ ದೇವಾಲಯದಲ್ಲಿ ಬುಧವಾರ ಮಧ್ಯಾಹ್ನ ನಗರಸಭೆ ಆಯುಕ್ತ ಉರುಳು ಸೇವೆ ಮಾಡಿ, ವಿಶೇಷ ಪೂಜೆ ಮಾಡಿಸಿದ್ದಾರೆ. ಅಂದು ಮಧ್ಯಾಹ್ನ ರಾಜಭವನದಲ್ಲಿ ಸಂಪುಟ ದರ್ಜೆ ಸಚಿವರಾಗಿ ಬಿ.ಸಿ.ನಾಗೇಶ್ ಪ್ರಮಾಣ ವಚನ ಸ್ವೀಕರಿಸಿದ್ದರು.
    ಆಯುಕ್ತ ಉಮಾಕಾಂತ್ ಉರುಳು ಸೇವೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಆಗಿದ್ದು, ಶಾಸಕರು ಮಂತ್ರಿ ಆದ ಕಾರಣದಿಂದಲೇ ಆಯುಕ್ತರು ಉರುಳು ಸೇವೆ ಮಾಡಿದ್ದಾರೆಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

    ಇದನ್ನೂ ಓದಿ: ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ನನ್ನ ಉರುಳು ಸೇವೆಗೂ, ರಾಜಕೀಯಕ್ಕೂ ತಳುಕು ಹಾಕಬೇಡಿ ಎಂದು ನಗರಾಯುಕ್ತ ಉಮಾಂಕಾಂತ್ ಸ್ಪಷ್ಟಪಡಿಸಿದ್ದಾರೆ.
    ನಾನು ಸೇವೆ ಸಲ್ಲಿಸಿದ ಎಲ್ಲ ಕಡೆಗಳಲ್ಲೂ ಆಯಾ ಗ್ರಾಮದ, ಊರಿನ ಗ್ರಾಮದೇವತೆಗೆ ಪೂಜೆ ಸಲ್ಲಿಸಿ, ಊರಿಗೆ ಒಳಿತನ್ನು ಪ್ರಾರ್ಥಿಸುವುದು ವಾಡಿಕೆ. ತಿಪಟೂರು ನಗರ ಆದಷ್ಟು ಬೇಗ ಕರೊನಾ ಮುಕ್ತವಾಗಲಿ ಎಂದು ಗ್ರಾಮದೇವತೆಯಲ್ಲಿ ಬೇಡಿಕೊಂಡು ಪೂಜೆ ಸಲ್ಲಿಸಿದ್ದೆ, ಪ್ರತಿ ಮಂಗಳವಾರ ಮತ್ತು ಶುಕ್ರವಾರ ಎಷ್ಟೇ ಹೊತ್ತಾದರೂ ಗ್ರಾಮದೇವತೆ ಸನ್ನಿಧಿಗೆ ಬಂದು ಹೋಗುತ್ತೇನೆ. ನನ್ನ ಉರುಳುಸೇವೆಯನ್ನು ರಾಜಕೀಯಕ್ಕೆ ತಳುಕು ಹಾಕಬೇಡಿ, ಇದು ನನ್ನ ವೈಯಕ್ತಿಕ ಸೇವೆ ಎಂದಿದ್ದಾರೆ.

    ಶಾಸಕರು ಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೂ, ನನ್ನ ಉರುಳು ಸೇವೆಗೂ ಯಾವುದೇ ಸಂಬಂಧವಿಲ್ಲ. ಬುಧವಾರ ಏಕಾದಶಿ ಪ್ರಯುಕ್ತ ಮೊದಲೇ ನಿಶ್ಚಯಿಸಿದಂತೆ ಉರುಳು ಸೇವೆ ಮಾಡಿದ್ದೇನೆ. ಇದನ್ನು ರಾಜಕೀಯಕ್ಕೆ ತಳುಕು ಹಾಕಬೇಡಿ.
    | ಉಮಾಕಾಂತ್ ಆಯುಕ್ತರು, ನಗರಸಭೆ, ತಿಪಟೂರು.

    ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾರೆ; ಪ್ರಾಧ್ಯಾಪಕನ ಕಾಮಪುರಾಣವನ್ನು ಬಿಚ್ಚಿಟ್ಟ ಪತ್ನಿ

    ಬ್ರಿಟಿಷ್‌ ರಾಯಭಾರಿಗೆ ಕೈಯಿಂದ ಮಸಾಲೆದೋಸೆ ತಿನ್ನಿಸಿದ ಕನ್ನಡಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts