More

    ಅಭಿವೃದ್ಧಿಯತ್ತ ಮಲಪ್ರಭಾ ಸಕ್ಕರೆ ಕಾರ್ಖಾನೆ

    ಎಂ.ಕೆ.ಹುಬ್ಬಳ್ಳಿ: ಉತ್ಪಾದನೆ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ದೇವರ ಕೃಪೆ ಹಾಗೂ ರೈತರ ಸಹಕಾರದಿಂದ ಪ್ರಸಕ್ತ ವರ್ಷ ಯಶಸ್ವಿಯಾಗಿ ಆರಂಭಗೊಂಡಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದಾರೆ ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಹೇಳಿದ್ದಾರೆ.

    ಸ್ಥಳೀಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಹಮ್ಮಿಕೊಂಡಿದ್ದ2019-20ನೇ ಸಾಲಿನ ವಾರ್ಷಿಕ ಮಹಾಸಭೆ(ವರ್ಚುವಲ್) ಯಲ್ಲಿ ಅವರು ಮಾತನಾಡಿದರು.

    ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿ, ನೂತನ ಆಡಳಿತ ಮಂಡಳಿ ಸಹಕಾರದಿಂದ ಹಣಕಾಸು ಸಂಸ್ಥೆಗಳ ಮೂಲಕ ಹಣದ ವ್ಯವಸ್ಥೆ ಮಾಡಿಕೊಂಡು ರೈತರ ಬಾಕಿ ಬಿಲ್, ಕಾರ್ಮಿಕರ ವೇತನ ಪಾವತಿಸಿದ್ದೇವೆ. ಪ್ರತಿದಿನ ಸುಮಾರು 4 ಸಾವಿರ ಟನ್ ಕಬ್ಬು ನುರಿಸಲಾಗುತ್ತಿದ್ದು, ಈವರೆಗೆ 94 ಸಾವಿರಕ್ಕೂ ಅಧಿಕ ಟನ್ ಕಬ್ಬು ನುರಿಸಿದ್ದೇವೆ. ಪ್ರಸಕ್ತ ಹಂಗಾಮಿನಲ್ಲಿ ಸುಮಾರು 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿಯಿದೆ ಎಂದು ಮಾಹಿತಿ ನೀಡಿದ್ದಾರೆ. ಕಾರ್ಖಾನೆ ಅಧ್ಯಕ್ಷ ನಾಸೀರ್ ಬಾಗವಾನ ಮಾತನಾಡಿ, 50ವರ್ಷಗಳಿಂದ ರೈತರ ಕಾಮಧೇನು ಆಗಿ ಕಾರ್ಯನಿರ್ವಹಿಸುತ್ತಿರುವ ಮಲಪ್ರಭಾ ಕಾರ್ಖಾನೆ ವಿಸ್ತರಣೆ ಅನಿವಾರ್ಯವಾಗಿದೆ. ಈಗಿರುವ ಯಂತ್ರೋಪಕರಣ ಹಳೆಯದಾಗುವ ಜತೆಗೆ ಖರ್ಚು-ವೆಚ್ಚ ಸರಿದೂಗಿಸಲು ಮುಂಬರುವ ದಿನಗಳಲ್ಲಿ ಪ್ರತಿದಿನ 5 ರಿಂದ 8 ಸಾವಿರ ಟನ್ ಕಬ್ಬು ನುರಿಯುವಂತೆ ಕಾರ್ಖಾನೆ ಸಾಮರ್ಥ್ಯ ಹೆಚ್ಚಿಸುವ ಉದೇಶ ಇಟ್ಟುಕೊಂಡಿದ್ದೇವೆ. ರೈತರು ಸಹಕಾರ ನೀಡಬೇಕು. ರೈತರ ಕಬ್ಬಿಗೆ ಯೋಗ್ಯವಾದ ದರ ಪಾವತಿಸುತ್ತೇವೆಂದು ಭರವಸೆ ನೀಡಿದ ಅವರು, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಅವರ ಉತ್ತಮ ಆಡಳಿತದಿಂದ ಕಾರ್ಖಾನೆ ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇವೆ. ಕಾರ್ಖಾನೆ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

    ಕಾರ್ಖಾನೆ ಉಪಾಧ್ಯಕ್ಷರಾದ ಲಕ್ಷ್ಮೀ ಅರಳಿಕಟ್ಟಿ, ಮಂಜುನಾಥ ಪಾಟೀಲ, ಜ್ಯೋತಿಬಾ ಹೈಬತ್ತಿ, ಬಸವರಾಜ ಬೆಂಡಿಗೇರಿ, ಅಶೋಕ ಬೆಂಡಿಗೇರಿ, ಅಶೋಕ ಯಮಕನ ಮರಡಿ, ಲಕ್ಷ್ಮಣ ಎಮ್ಮಿ, ಶಂಕರಗೌಡ ಪಾಟೀಲ, ಭರತೇಶ ಶೇಬಣ್ಣವರ, ಸಂಜೀವ ಹುಬಳೆಪ್ಪನವರ, ಸಿದ್ದಪ್ಪ ದೂರಪ್ಪನವರ, ಬಸವರಾಜ ಪುಂಡಿ, ಸಾವಂತ ಕಿರಬನವರ, ಮೀನಾಕ್ಷಿ ನೆಲಗಳಿ, ಅಧಿಕಾರಿಗಳು, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts