More

    ಕೇಂದ್ರ ಸಚಿವರ ಕಾರನ್ನು ಓವರ್​ಟೇಕ್​ ಮಾಡಿದ ಪ್ರವಾಸಿಗರಿಗೆ ಕಾದಿತ್ತು ಬಿಗ್​ ಶಾಕ್​..!

    ಬಾಲಾಸೊರ್​: ಕೇಂದ್ರ ಸಚಿವರು ಸಾಗುತ್ತಿದ್ದ ಕಾರನ್ನು ಓವರ್​ಟೇಕ್​ ಮಾಡಿದ ಪಶ್ಚಿಮ ಬಂಗಾಳ ಮೂಲದ ಪ್ರವಾಸಿಗರನ್ನು ಬಾಲಾಸೊರ್​ ಪೊಲೀಸರು ಬಂಧಿಸಿ, ಕಾರುಗಳನ್ನು ವಶಕ್ಕೆ ಪಡೆದ ಘಟನೆ ಬಾಸ್ತಾ ಪೊಲೀಸ್​ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ಸೋಮವಾರ (ಫೆ. 22) ನಡೆದಿದೆ.

    ಪ್ರತಾಪ್​ ಸಂತೋಷ್​ ಚಂದ್ರ ಸಾರಂಗಿ ( ಕೇಂದ್ರ ಸರ್ಕಾರದ ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವ) ಕಾರನ್ನು ಓವರ್​ಟೇಕ್​ ಮಾಡಿದ ಬೆನ್ನಲ್ಲೇ ಪ್ರವಾಸಿಗರಿಗೆ ಶಾಕ್​ ಎದುರಾಗಿದೆ.

    ಇದನ್ನೂ ಓದಿರಿ: 3 ವರ್ಷಗಳ ಹಿಂದೆಯೇ ಸತ್ತ ಮಗಳು ದಿಢೀರ್​ ಪ್ರತ್ಯಕ್ಷ! ಗಂಡನ ಬಿಟ್ಟು ಬಂದವಳ ರೋಚಕ ಕಥೆಯಿದು!

    ಪಶ್ಚಿಮ ಬಂಗಾಳ ಮೂಲದ ಸಂತೋಷ್​ ಷಾ ಎನ್ನುವವರು ತಮ್ಮ ಕುಟುಂಬದೊಂದಿಗೆ ಎರಡು ಕಾರುಗಳಲ್ಲಿ ಒಡಿಶಾದ ಪಂಚಲಿಂಗೇಶ್ವರದಿಂದ ಕೋಲ್ಕತಕ್ಕೆ ಹಿಂದಿರುಗುತ್ತಿದ್ದಾಗ ಈ ಸನ್ನಿವೇಶ ಜರುಗಿದೆ.

    ನಾವು ಪ್ರಯಾಣಿಸುವಾಗ ಬಾಸ್ತಾ ಸಮೀಪದಲ್ಲೇ ಸೈರನ್​ ಧ್ವನಿ ಕೇಳಿಸಿತು. ಆಂಬುಲೆನ್ಸ್​ ಅಂದುಕೊಂಡು ದಾರಿ ಬಿಟ್ಟೆವು. ಅದು ಆಂಬುಲೆನ್ಸ್​ ಅಲ್ಲ ಬೆಂಗಾವಲು ವಾಹನದೊಂದಿಗೆ ಸಾಗಿದ ಸಚಿವರು ಕಾರು ಎಂದು ತದನಂತರದಲ್ಲಿ ಗೊತ್ತಾಯಿತು. ಸ್ವಲ್ಪ ಸಮಯದಲ್ಲಿ ಪೈಲಟ್​ ಕಾರು ಹೆದ್ದಾರಿಯಿಂದ ಕಚ್ಛಾ ರಸ್ತೆಗೆ ಹೋಯಿತು. ಇದಾದ ಬಳಿಕವೇ ನಾವು ಅವರನ್ನು ಓವರ್​ಟೇಕ್​ ಮಾಡಿದೆವು ಎಂದು ಸಂತೋಷ್​ ಷಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಇದಾದ ಬಳಿಕ ಸಚಿವರ ಪೈಲಟ್​ ಕಾರು, ಎರಡು ವಾಹನಗಳನ್ನು ಸುಮಾರು 20 ಕಿ.ಮೀ ವರೆಗೆ ಚೇಸ್​ ಮಾಡಿ ಜಲೇಸ್ವರ್​ ಏರಿಯಾದ ಲಖನಾಥ್​ ಟೋಲ್​ ಗೇಟ್​ ಬಳಿ ವಶಕ್ಕೆ ಪಡೆದು ಬಾಸ್ತಾ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಸಂತೋಷ್​ ಕುಟುಂಬವನ್ನು ಸುಮಾರು 5 ಗಂಟೆಗಳ ಕಾಲ ಬಂಧಿಸಿ, ತದನಂತರದಲ್ಲಿ ಬಿಡುಗಡೆ ಮಾಡಿ ಕಳುಹಿಸಿದ್ದಾರೆ. ಮತ್ತೊಮ್ಮೆ ಈ ತಪ್ಪು ಮಾಡುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಈ ಆರತಿಗೆ ‘ಆರತಿಗೊಬ್ಬಳು, ಕೀರುತಿಗಿಬ್ಬರು!’; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆ

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಶಿವಮೊಗ್ಗ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ: ಚಿಕ್ಕಬಳ್ಳಾಪುರದಲ್ಲಿ ಗಣಿಸ್ಫೋಟಕ್ಕೆ ಐವರು ಬಲಿ

    ಪತಂಜಲಿಯ ಕೊರೊನಿಲ್ ಮಾತ್ರೆಯಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ರಾ ಕೇಂದ್ರ ಆರೋಗ್ಯ ಸಚಿವ!; ಸ್ಪಷ್ಟನೆ ಕೋರಿದ ಐಎಂಎ

    Web Exclusive | ಹಳಿ ತಪ್ಪಿದ ಹೋಟೆಲ್ ಉದ್ಯಮ: ಖಾದ್ಯ ತೈಲ, ತರಕಾರಿ ತುಟ್ಟಿ; ಜಿಎಸ್​ಟಿ ಮನ್ನಾ ಮಾಡಲು ಉದ್ಯಮಿಗಳ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts