More

    ಈ ಆರತಿಗೆ ‘ಆರತಿಗೊಬ್ಬಳು, ಕೀರುತಿಗಿಬ್ಬರು!’; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆ

    ಗೋಕಾಕ: ‘ಆರತಿಗೊಬ್ಬಳು, ಕೀರುತಿಗೊಬ್ಬ’ ಎಂದು ಕುಟುಂಬ ನಿಯಂತ್ರಣ ಯೋಜನೆಯ ಘೋಷವಾಕ್ಯವೊಂದಿದೆ. ಅಂದರೆ ಎರಡೇ ಮಕ್ಕಳು ಸಾಕು ಎಂಬ ಹಿನ್ನೆಲೆಯಲ್ಲಿ ಇಂಥದ್ದೊಂದು ಸ್ಲೋಗನ್​ ಕೆಲವು ವರ್ಷಗಳ ಹಿಂದೆ ಬಹಳಷ್ಟು ಪ್ರಚಲಿತದಲ್ಲಿತ್ತು. ಈಗ ಅದನ್ನು ನೆನಪಿಸುವ ರೀತಿಯಲ್ಲಿ, ಅರ್ಥಾತ್​ ‘ಆರತಿಗೊಬ್ಬಳು, ಕೀರುತಿಗಿಬ್ಬರು’ ಎಂಬಂಥ ಹೆರಿಗೆಯೊಂದು ಆಗಿದೆ.

    ವಿಶೇಷವೆಂದರೆ ಇಲ್ಲಿ ಆರತಿಗೇ ‘ಆರತಿಗೊಬ್ಬಳು, ಕೀರುತಿಗಿಬ್ಬರು’ ಎಂಬಂತೆ ತ್ರಿವಳಿ ಶಿಶುಗಳು ಜನಿಸಿವೆ. ಗೋಕಾಕ ನಗರದ ನಾಕಾ ನಂ.1 ಹತ್ತಿರವಿರುವ ಶಾಂತಾ ನರ್ಸಿಂಗ್ ಹೋಮ್ ಪ್ರಸೂತಿಗೆ ದಾಖಲಾಗಿದ್ದ ಗರ್ಭಿಣಿ ಆರತಿ ಎಂಬವರು ತ್ರಿವಳಿ ಶಿಶುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆರತಿ ಕಳೆದ 10 ದಿನಗಳ ಹಿಂದೆ ಶಾಂತಾ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದರು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಅವರು ಸೋಮವಾರ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಈ ಆರತಿಗೆ 'ಆರತಿಗೊಬ್ಬಳು, ಕೀರುತಿಗಿಬ್ಬರು!'; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆತಡವಾದರೂ ದೊಡ್ಡ ಖುಷಿ: ಮದುವೆಯಾಗಿ ಎಂಟು ವರ್ಷಗಳು ಕಳೆದರೂ ಮಕ್ಕಳಾಗದ ಹಿನ್ನೆಲೆಯಲ್ಲಿ ಆರತಿ ಅವರು ಡಾ.ಅಶೋಕ ಕೊಪ್ಪ ಅವರ ಆಸ್ಪತ್ರೆಯ ಬಂಜೆತನ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 28 ವಾರಗಳ ಹಿಂದೆ ಆರತಿ ಅವರು ಗರ್ಭಿಣಿಯಾದ ಬಳಿಕ ನಮ್ಮ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಜನಿಸಿರುವ ಮೂವರು ಕೂಸುಗಳ ಪೈಕಿ ಎರಡು ಗಂಡು ಹಾಗೂ ಒಂದು ಹೆಣ್ಣು ಎಂದು ಡಾ.ಅಶೋಕ ಅವರು ವಿಜಯವಾಣಿಗೆ ತಿಳಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಆಸ್ಪತ್ರೆಯ ಡ್ರೆಸ್ ಚೇಂಜಿಂಗ್ ರೂಮಲ್ಲಿ ಕ್ಯಾಮೆರಾ! ಮೊಬೈಲ್ ಚಾರ್ಜ್​ಗೆ ಹಾಕಿ ರೆಕಾರ್ಡಿಂಗ್!

    3 ವರ್ಷಗಳ ಹಿಂದೆಯೇ ಸತ್ತ ಮಗಳು ದಿಢೀರ್​ ಪ್ರತ್ಯಕ್ಷ! ಗಂಡನ ಬಿಟ್ಟು ಬಂದವಳ ರೋಚಕ ಕಥೆಯಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts