More

    ಫೇಸ್​ಬುಕ್​ ಮೆಟಾಗೆ ಎದುರಾಗಿದೆ ಸಂಕಟ?

    ನ್ಯೂಯಾರ್ಕ್: ಸಾಮಾಜಿಕ ಜಾಲತಾಣ ಫೇಸ್​ಬುಕ್​ನ ಮಾತೃ ಸಂಸ್ಥೆ ಮೆಟಾಗೆ ಈಗ ಬಹುದೊಡ್ಡ ಸವಾಲು ಕಾದಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಎರಡು ದಿನದ ಹಿಂದೆ ಫೇಸ್​ಬುಕ್ ಷೇರುಮೌಲ್ಯ ಶೇ. 26 ಕುಸಿತ ಕಾಣುವ ಮೂಲಕ ಕಂಪನಿಯ ಸುಮಾರು 14 ಲಕ್ಷ ಕೋಟಿ ರೂ. ಸಂಪತ್ತು ಕರಗಿ ಹೋಗಿತ್ತು. ಇದಾದ ಬಳಿಕ ಮೆಟಾ ಕಂಪನಿ ಕುರಿತು ಹಲವು ವಿಶ್ಲೇಷಣೆಗಳು ಕೇಳಿಬರುತ್ತಿವೆ.

    ಫೇಸ್​ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದ್ದರೆ, ಅಂಗ ಸಂಸ್ಥೆಯಾದ ವಾಟ್ಸ್​ಆಪ್, ಇನ್​ಸ್ಟಾಗ್ರಾಂ ಬಳಕೆದಾರರ ಸಂಖ್ಯೆಯಲ್ಲೂ ಏರಿಕೆ ಕಂಡುಬರುತ್ತಿಲ್ಲ. ಕಳೆದ 18 ವರ್ಷಗಳಲ್ಲೇ ಮೊದಲ ಬಾರಿಗೆ ಬಳಕೆದಾರರ ಸಂಖ್ಯೆ ಇಳಿಕೆಯಾಗಿರುವುದು ಕಂಪನಿಗೆ ಹಿನ್ನಡೆ ಉಂಟುಮಾಡಿದೆ. ಐಫೋನ್ ತಯಾರಿಕೆ ಕಂಪನಿ ಆಪಲ್ ಹೊಸ ಭದ್ರತಾ ಫೀಚರ್​ಗಳನ್ನು ಗ್ರಾಹಕರಿಗೆ ನೀಡಿದೆ. ಫೇಸ್​ಬುಕ್ ಇನ್ನಿತರ ಆಪ್​ಗಳು ಗ್ರಾಹಕರ ಚಟುವಟಿಕೆಯ ಮೇಲೆ ನಿಗಾ ಇಡದಂತೆ ಡೇಟಾ ರಕ್ಷಣೆ ಮಾಡಿಕೊಳ್ಳಲು ಇದರಲ್ಲಿ ಅವಕಾಶ ಇದೆ. ಫೇಸ್​ಬುಕ್​ನ ಬಹುಪಾಲು ಜಾಹೀರಾತು ಐಫೋನ್ ಬಳಕೆದಾರರ ಮೇಲೆ ಅವಲಂಬಿತವಾಗಿವೆ. ಗ್ರಾಹಕರ ಡೇಟಾ ಇಲ್ಲದಿದ್ದರೆ ಜಾಹೀರಾತು ಕೂಡ ಕಡಿಮೆಯಾಗಲಿದೆ.

    ಮತ್ತೊಂದೆಡೆ ಗೂಗಲ್ ಜಾಹೀರಾತು ಪಾಲನ್ನು ಹೆಚ್ಚಿಸಿಕೊಳ್ಳುತ್ತಿದೆ. ಇ-ಕಾಮರ್ಸ್ ಇನ್ನಿತರ ವೇದಿಕೆಗೆ ಆದ್ಯತೆ ನೀಡಿರುವ ಕಾರಣ ಕಳೆದ ತ್ರೖೆಮಾಸಿಕದಲ್ಲಿ ಜಾಹೀರಾತು ಏರಿಕೆ ಕಂಡಿದೆ. ಟಿಕ್​ಟಾಕ್, ರೀಲ್ಸ್ ಇನ್ನಿತರ ಆಪ್​ಗಳಿಂದ ಫೇಸ್​ಬುಕ್ ಭಾರಿ ಪೈಪೋಟಿ ಎದುರಿಸುತ್ತಿದೆ. ದೊಡ್ಡ ಸಂಖ್ಯೆಯ ಬಳಕೆದಾರರು ಇತರ ಆಪ್​ಗಳತ್ತ ಮುಖಮಾಡುತ್ತಿದ್ದಾರೆ. ಮೆಟಾವರ್ಸ್ ತಂತ್ರಜ್ಞಾನಕ್ಕಾಗಿ ಫೇಸ್​ಬುಕ್ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ಇದರಿಂದ ನಿರೀಕ್ಷಿತ ಆದಾಯ ಬರಲು ಇನ್ನೂ ಹಲವು ವರ್ಷಗಳೇ ಬೇಕಾಗುತ್ತವೆ. ಈ ಕಾರಣಕ್ಕಾಗಿ ಸದ್ಯ ಫೇಸ್​ಬುಕ್ ಹಿನ್ನಡೆ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.

    ಸಮತಾಮೂರ್ತಿ ಅನಾವರಣ: ವಿಶ್ವದ 2ನೇ ಅತಿ ಎತ್ತರದ ಪ್ರತಿಮೆ ಲೋಕಾರ್ಪಣೆ ಮಾಡಿದ ಮೋದಿ

    ಸ್ಫೋಟಕಕ್ಕೆ ಬಲಿಯಾದ ಪತ್ರಕರ್ತ; ವರದಿಗಾರಿಕೆಗೆ ತೆರಳಿದಾಗ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts