ಸ್ಫೋಟಕಕ್ಕೆ ಬಲಿಯಾದ ಪತ್ರಕರ್ತ; ವರದಿಗಾರಿಕೆಗೆ ತೆರಳಿದಾಗ ದುರಂತ

ಭುವನೇಶ್ವರ: ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತ ಸ್ಫೋಟಕಕ್ಕೆ ಬಲಿಯಾದ ದುರಂತವೊಂದು ಸಂಭವಿಸಿದೆ. ರೋಹಿತ್ ಬಿಸ್ವಾಲ್​ (43) ಸ್ಫೋಟಕಕ್ಕೆ ಬಲಿಯಾದ ಪತ್ರಕರ್ತ. ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಇಂದು ಈ ದುರಂತ ಸಂಭವಿಸಿದೆ. ಮಾವೊವಾದಿಗಳಿಟ್ಟ ಸ್ಫೋಟಕ ಇದೆಂದು ಶಂಕಿಸಲಾಗಿದ್ದು, ವರದಿಗಾರಿಕೆ ವೇಳೆ ಅದರ ಸನಿಹಕ್ಕೆ ಹೋದ ಪತ್ರಕರ್ತ ಸಾವಿಗೀಡಾಗಿದ್ದಾನೆ. ಒಡಿಶಾದ ದೈನಿಕ ಪತ್ರಿಕೆಯ ವರದಿಗಾರನಾಗಿದ್ದ ರೋಹಿತ್, ಮದನ್​ಪುರ್​-ರಾಮ್​ಪುರ್ ಬ್ಲಾಕ್​ನ ಮೋಹನ್​ಗಿರಿ ಗ್ರಾಮದ ಪಂಚಾಯತ್ ಚುನಾವಣೆಯಲ್ಲಿ ಗ್ರಾಮಸ್ಥರು ಮತ ಚಲಾಯಿಸಬಾರದು ಎಂದು ಪೋಸ್ಟರ್​ಗಳನ್ನು ಅಲ್ಲಿ ಹಾಕಲಾಗಿತ್ತು. ಮಾವೋವಾದಿಗಳು ಅದನ್ನು ಹಾಕಿರಬಹುದು ಎಂದು ಅಂದಾಜಿಸಲಾಗಿದೆ. … Continue reading ಸ್ಫೋಟಕಕ್ಕೆ ಬಲಿಯಾದ ಪತ್ರಕರ್ತ; ವರದಿಗಾರಿಕೆಗೆ ತೆರಳಿದಾಗ ದುರಂತ