More

    ಏಷ್ಯಾಡ್​ನಲ್ಲಿ ಇಂದಿನಿಂದ ಕುಸ್ತಿ ಸ್ಪರ್ಧೆ; ಹಲವು ಪದಕಗಳ ನಿರೀಕ್ಷೆ

    ಹಾಂಗ್​ಝೌ: ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಅಭಿಯಾನ ಆರಂಭಿಸಲಿರುವ ಕೊನೇ ಸ್ಪರ್ಧೆಯಾದ ಕುಸ್ತಿಗೆ ಬುಧವಾರ ಚಾಲನೆ ಸಿಗಲಿದೆ. ಮೊದಲ ದಿನ ಗ್ರೀಕೋ&ರೋಮನ್​ ಸ್ಪರ್ಧೆಗಳಷ್ಟೇ ನಡೆಯಲಿವೆ.

    ಫ್ರೀಸ್ಟೈಲ್​ನಲ್ಲಿ ಕ್ರೀಡಾಕೂಟಕ್ಕೆ ಆಯ್ಕೆ ಟ್ರಯಲ್ಸ್​ ಇಲ್ಲದೆ ನೇರಆಯ್ಕೆಯಾಗಿದ್ದ ಒಲಿಂಪಿಕ್ಸ್​ ಪದಕ ವಿಜೇತ ಪೈಲ್ವಾನ್​ ಭಜರಂಗ್​ ಪೂನಿಯಾ (65 ಕೆಜಿ ವಿಭಾಗ) ಚಿನ್ನ ಗೆಲ್ಲುವ ಮೂಲಕ ಸಾಮರ್ಥ್ಯ ನಿರೂಪಿಸಬೇಕಾದ ಸವಾಲು ಎದುರಿಸುತ್ತಿದ್ದಾರೆ. 20222ರ ಸೆಪ್ಟೆಂಬರ್​ನ ವಿಶ್ವ ಚಾಂಪಿಯನ್​ಷಿಪ್​ ಬಳಿಕ ಭಜರಂಗ್​ಗೆ ಇದು ಮೊದಲ ಸ್ಪರ್ಧೆ ಆಗಿರಲಿದೆ.

    ದೀಪಕ್​ ಪೂನಿಯಾ (86 ಕೆಜಿ ವಿಭಾಗ), ಅಮನ್​ ಶೆರಾವತ್​ (57 ಕೆಜಿ), ಅಂತಿಮ್​ ಪಾಂಗಲ್​ (53 ಕೆಜಿ), ಪೂಜಾ ಗೆಹ್ಲೋಟ್​ (50 ಕೆಜಿ), ಮಾನ್ಸಿ ಅಹ್ಲಾವತ್​ (57 ಕೆಜಿ) ಸ್ವರ್ಣ ನಿರೀೆಯಲ್ಲಿರುವ ಇತರ ಕುಸ್ತಿಪಟುಗಳಾಗಿದ್ದಾರೆ.

    ಏಷ್ಯಾಡ್​ನಲ್ಲಿ ಟೀಮ್​ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಂದ ಪದಕ ಸಾಧನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts