More

    ‘ನನ್ನ ನಗರ, ನನ್ನ ಬಜೆಟ್’ ಅಭಿಯಾನದಡಿ 16,261 ಸಲಹೆ ಸ್ವೀಕಾರ; ಒಂದೇ ವಿಷಯದ ಬಗ್ಗೆ ಶೇ. 70 ಸಲಹೆ!

    ಬೆಂಗಳೂರು: ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್ ಸಿದ್ಧತೆ ಕುರಿತು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗುತ್ತಿದ್ದು, ಶನಿವಾರದೊಳಗೆ (ಜ.28) ಆಯವ್ಯಯದ ಖರ್ಚು-ವೆಚ್ಚಗಳ ಸಂಪೂರ್ಣ ವಿವರ ಸಲ್ಲಿಸುವಂತೆ ಎಲ್ಲ ವಿಭಾಗದ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

    ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾದ ಬಳಿಕ ಪಾಲಿಕೆ ಬಜೆಟ್ ಮಂಡಿಸಲಾಗುವುದು. ಫೆ.15ರ ವೇಳೆಗೆ ಬಜೆಟ್ ಮಂಡನೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹಗಲಿನ ವೇಳೆಯಲ್ಲಿ ಆಯವ್ಯಯ ಮಂಡಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.

    ಬೆಂಗಳೂರು ವಾರ್ಡ್ ಸಮಿತಿ ಬಳಗ, ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಜನಾಗ್ರಹ ಸಂಸ್ಥೆ ವತಿಯಿಂದ ನಡೆದ ‘ನನ್ನ ನಗರ, ನನ್ನ ಬಜೆಟ್’ ಅಭಿಯಾನದಡಿ 243 ವಾರ್ಡ್‌ಗಳಲ್ಲಿ ಒಟ್ಟು 16,261 ಸಲಹೆಗಳನ್ನು ಸ್ವೀಕರಿಸಲಾಗಿದೆ. ನಾಗರಿಕರು ನೀಡಿರುವ ಸಲಹೆಗಳನ್ನು ಕ್ರೋಡೀಕರಿಸಿ ಮುಂಗಡ ಪತ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ವಿವರಿಸಿದರು.

    ಶೇ.70 ರಸ್ತೆ ನಿರ್ಮಾಣ ಸಲಹೆ: ಅಭಿಯಾನದಡಿ ಸ್ವೀಕೃತವಾದ ಒಟ್ಟು ಸಲಹೆಗಳಲ್ಲಿ ಶೇ.67 ಪಾದಚಾರಿ ಮಾರ್ಗ, ರಸ್ತೆಗಳು ಮತ್ತು ಒಳಚರಂಡಿ ನಿರ್ವಹಣೆಗೆ ಸಂಬಂಧಪಟ್ಟಿದ್ದಾಗಿವೆ. 470 ಕಿ.ಮೀ. ಹೊಸ ಪಾದಚಾರಿ ಮಾರ್ಗ ನಿರ್ಮಾಣ, 950 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ, ಪರಿಸರ ಮತ್ತು ಹವಾಮಾನಕ್ಕೆ ಆದ್ಯತೆ, ಹಣಕಾಸಿನ ಬಂಡವಾಳವನ್ನು ಗುಣಮಟ್ಟ ರಸ್ತೆ ನಿರ್ಮಾಣಕ್ಕೆ ಗಮನಹರಿಸಬೇಕು ಎಂದು ನಾಗರಿಕರು ಸಲಹೆ ಕೊಟ್ಟಿದ್ದಾರೆ. ಎಲ್ಲ ವಲಯದ ಬಹುತೇಕ ನಾಗರಿಕರು ಬೀದಿದೀಪ ಅಳವಡಿಸಲು ಮನವಿ ಮಾಡಿಕೊಂಡಿದ್ದಾರೆ ಎಂದು ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಹೇಳಿದರು.

    ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

    ಅದೇ ಕೊನೇ ಊಟ, ಕೊನೆಯ ಕೂಟ; ತಹಸೀಲ್ದಾರ್​ ಕಚೇರಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೌಕರನ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts