More

    ಕರೊನಾ : ಸಕ್ರಿಯ ಪ್ರಕರಣಗಳಲ್ಲಿ ಇವು ಟಾಪ್​ ಟೆನ್ ಜಿಲ್ಲೆಗಳು

    ನವದೆಹಲಿ : ಕರೊನಾ ಸಾಂಕ್ರಾಮಿಕದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಇದೀಗ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಮಿಲಿಯನ್ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶವು 1,45,000 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 1,046,000 ಕ್ಕಿಂತ ಹೆಚ್ಚಾಗಿಸಿದೆ.

    ಸೋಂಕಿನ ಉಲ್ಬಣವನ್ನು ನಿಯಂತ್ರಿಸಲು ಇಡೀ ದೇಶದ ಸರ್ಕಾರಗಳು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಸುಮಾರು ಅರ್ಧದಷ್ಟು ಪ್ರಕರಣಗಳು ಕೇವಲ 10 ಜಿಲ್ಲೆಗಳಿಂದ ವರದಿಯಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ಟಾಪ್​ನಲ್ಲಿರುವ ನಾಲ್ಕು ಜಿಲ್ಲೆಗಳೂ ಸೇರಿದಂತೆ ಒಟ್ಟು ಆರು ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಿವೆ.

    ಇದನ್ನೂ ಓದಿ: ಕರೊನಾ ಲಸಿಕೆ ಹಾಕೊಂಡಿದ್ರೆ ಇಲ್ಲಿ ಬಿಯರ್ ಫ್ರೀ!; ಮಹಿಳೆಯರಿಗೆ ಚಿನ್ನದ ಮೂಗುತಿ​, ಲಸಿಕೆ ಅಭಿಯಾನಕ್ಕೆ ಶುರುವಾದ್ವು ಆಫರ್ಸ್​.

    ಗಮನಿಸಬಹುದಾದ ಒಂದು ಅಂಶವೆಂದರೆ, ಕರೊನಾ ಸೋಂಕು ಉಲ್ಬಣವಾಗಿರುವುದಕ್ಕೆ ಕೇವಲ ಮಹಾನಗರಗಳು ಮಾತ್ರ ಕಾರಣವಲ್ಲ. ಎರಡನೇ ಶ್ರೇಣಿಯ ಮತ್ತು ಮೂರನೇ ಶ್ರೇಣಿಯ ನಗರಗಳೂ ಅತಿಹೆಚ್ಚಿನ ಪ್ರಕರಣಗಳನ್ನು ದಾಖಲಿಸಿವೆ. ದೇಶದಲ್ಲಿ ದಾಖಲಾಗಿರುವ ಒಟ್ಟು ಆ್ಯಕ್ಟೀವ್ ಕರೊನಾ ಪ್ರಕರಣಗಳಲ್ಲಿ ಶೇ. 46 ರಷ್ಟು ಈ ಕೆಳಗಿನ 10 ಜಿಲ್ಲೆಗಳಲ್ಲಿ ಕಂಡುಬಂದಿವೆ. 

    1. ಪುಣೆ : ಆ್ಯಕ್ಟೀವ್ ಪ್ರಕರಣಗಳಲ್ಲಿ ಶೇ. 9.54 ರಷ್ಟು ಪ್ರಕರಣಗಳೊಂದಿಗೆ ಮಹಾರಾಷ್ಟ್ರದ ಈ ಜಿಲ್ಲೆ ಕರೊನಾ ಗ್ರ್ಯಾಫ್​​ನಲ್ಲಿ ಪ್ರಥಮ ಸ್ಥಾನ ಪಡೆದಿದೆ.
    2. ಮುಂಬೈ: ದೇಶದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈನಲ್ಲಿ ಶೇ. 8.41 ರಷ್ಟು ಪ್ರಕರಣಗಳು ವರದಿಯಾಗಿವೆ.
    3. ಥಾಣೆ : ಮಹಾರಾಷ್ಟ್ರದ ಈ ಜಿಲ್ಲೆಯಲ್ಲಿ ಶೇ. 6.45 ರಷ್ಟು ಪ್ರಕರಣಗಳಿವೆ.
    4. ನಾಗಪುರ : ಮಹಾರಾಷ್ಟ್ರದ ಈ ಜಿಲ್ಲೆ ಶೇ. 6.02 ರಷ್ಟು ಪ್ರಕರಣಗಳನ್ನು ವರದಿ ಮಾಡಿದೆ.
    5. ಬೆಂಗಳೂರು ನಗರ : ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರ ಜಿಲ್ಲೆಯು ಶೇ. 4.06 ರಷ್ಟು ಪ್ರಕರಣಗಳನ್ನು ವರದಿ ಮಾಡಿವೆ.
    6. ನಾಶಿಕ್ : ಮಹಾರಾಷ್ಟ್ರದ ಮತ್ತೊಂದು ಜಿಲ್ಲೆ ನಾಶಿಕ್ ಶೇ. 3.44 ರಷ್ಟು ಆ್ಯಕ್ಟೀವ್ ಪ್ರಕರಣಗಳನ್ನು ಹೊಂದಿದೆ.
    7. ದೆಹಲಿ: ಕರೊನಾ ಪ್ರಕರಣಗಳಿಗೆ ರಾಷ್ಟ್ರ ರಾಜಧಾನಿ ದೆಹಲಿಯ ಕೊಡುಗೆ ಶೇ. 2.54 ರಷ್ಟು.
    8. ರಾಯಪುರ : ಛತ್ತೀಸಗಢದ ರಾಜಧಾನಿ ರಾಯಪುರದಲ್ಲಿ ಶೇ. 1.78 ರಷ್ಟು ಪ್ರಕರಣಗಳಿವೆ.
    9. ದುರ್ಗ್​ : ಛತ್ತೀಸಗಢದಲ್ಲಿ ಎರಡನೇ ದೊಡ್ಡ ನಗರಪ್ರದೇಶವಾದ ದುರ್ಗ್​ನಲ್ಲಿ ಶೇ. 1.76 ರಷ್ಟು ಪ್ರಕರಣಗಳಿವೆ.
    10. ಔರಂಗಾಬಾದ್ : ಮಹಾರಾಷ್ಟ್ರದ ಮತ್ತೊಂದು ಜಿಲ್ಲೆ ಔರಂಗಾಬಾದ್​ನಲ್ಲಿ ಶೇ. 1.62 ಸಕ್ರಿಯ ಪ್ರಕರಣಗಳಿವೆ.

    ಮಹಾರಾಷ್ಟ್ರ, ಛತ್ತೀಸಗಡ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಕೇರಳ ದೇಶದಲ್ಲಿ ಅತಿಹೆಚ್ಚು ಕರೊನಾ ಪ್ರಕರಣಗಳನ್ನು ದಾಖಲಿಸುತ್ತಿದ್ದು, ಇವುಗಳಲ್ಲಿ ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲೇ ವರದಿಯಾಗಿವೆ. (ಏಜೆನ್ಸೀಸ್)

    ಪ್ರತಿಭಟನೆ ಮುಂದೂಡಿ, ಮಾತುಕತೆಗೆ ಬನ್ನಿ : ಸಚಿವರ ಆಗ್ರಹ

    ಶೇ. 99.3 ರಷ್ಟು ಮರ ಕಡಿಯುವ ಅರ್ಜಿಗಳಿಗೆ ಹಸಿರು ನಿಶಾನೆ; ಇದು ಗೋವಾದ ವೃಕ್ಷ ಪ್ರಾಧಿಕಾರಗಳ ಕಾರ್ಯವೈಖರಿ !

    ‘ದೆಹಲಿಯಲ್ಲೊಬ್ಬರು ಪಾಳೆಯಗಾರ, ಕರ್ನಾಟಕದಲ್ಲೊಬ್ಬರು ಮಾಂಡಲಿಕ’! ರಾತ್ರಿ ಕರ್ಫ್ಯೂ ನಾಟಕ ಎಂದ ಸಿದ್ದರಾಮಯ್ಯ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts