More

    ಕಾಶ್ಮೀರದ ವಿಚಾರವಾಗಿ ತಾಲಿಬಾನ್ ನಾಯಕ ಅನಸ್ ಹೇಳಿದ್ದೇನು…?

    ಕಾಬೂಲ್: ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳಿಂದ ಭಾರತಕ್ಕೆ ಏನಾದರೂ ಅಪಾಯ ಇದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದರಲ್ಲೂ ಕಾಶ್ಮೀರದ ವಿಚಾರವಾಗಿ ತಾಲಿಬಾನಿಗಳ ನಿಲುವು ಏನು ಎಂಬುದನ್ನು ಅವರ ನಾಯಕನೇ ತಿಳಿಸಿದ್ದಾನೆ.

    ಕಳೆದ 20 ವರ್ಷಗಳಿಂದ ನಡೆಯುತ್ತಿದ್ದ ತಾಲಿಬಾನ್ ಮತ್ತು ಅಮೆರಿಕಾ ಸೈನಿಕರ ನಡುವಿನ ಸಂಘರ್ಷ ನಿನ್ನೆಗೆ ಕೊನೆಗೊಂಡಿದೆ. ಇದರ ನಡುವೆ ತಾಲಿಬಾನಿಗಳು ಸರ್ಕಾರ ರಚಿಸಲು ಮುಂದಾಗಿದ್ದು, ಇದರ ಪರಿಣಾಮ ಭಾರತಕ್ಕೆ ತಟ್ಟಲಿದೆಯಾ ಎಂಬ ಪ್ರಶ್ನೆ ಕಾಡತೊಡಗಿದೆ.

    ತಾಲಿಬಾನಿಗಳ ಟಾಪ್ ಲೀಡರ್ ಅನಸ್ ಹಕ್ಕಾನಿ ಈ ವಿಚಾರವಾಗಿ ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ್ದಾನೆ. ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಷಯ ಮತ್ತು ನಾವು ಕಾಶ್ಮೀರದ ವಿಷಯದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳುವ ಮೂಲಕ ಪಾಕ್ ಭಯೋತ್ಪಾದಕರಿಗೆ ಶಾಕ್ ನೀಡಿದ್ದಾನೆ.

    ಪಾಕಿಸ್ತಾನವನ್ನು ಬೆಂಬಲಿಸಲು ನೀವು ಕೂಡ ಕಾಶ್ಮೀರದಲ್ಲಿ ಮಧ್ಯಪ್ರವೇಶಿಸುವಿರಾ? ಎಂದು ಅನಸ್ ಹಕ್ಕಾನಿ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಶ್ಮೀರವು ನಮ್ಮ ನ್ಯಾಯವ್ಯಾಪ್ತಿಯ ಒಂದು ಭಾಗವಲ್ಲ ಮತ್ತು ಹಸ್ತಕ್ಷೇಪವು ನೀತಿಗೆ ವಿರುದ್ಧವಾಗಿದೆ. ಹಾಗಾಗಿ ನಾವು ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾನೆ.

    ತಾಲಿಬಾನಿಗಳ ಹೊಗಳಿದ ಪಾಕ್ ಮಾಜಿ ಕ್ರಿಕೆಟಿಗ… ನೀನೆ ಅವರ ಮುಂದಿನ ಪಿಎಂ ಎಂದ ನೆಟ್ಟಿಗರು

    ನೀರು ಕುಡಿಯುವ ನೆಪದಲ್ಲಿ ಸಂಬಂಧಿಕ ಯುವತಿ ಮೇಲೆ ಅತ್ಯಾಚಾರ… ಕಾಮುಕನಿಗೆ ಕಠಿಣ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts