More

    ಫರ್ಹಾನ್​ ಅಭಿನಯದ ‘ತೂಫಾನ್​’ ಬಿಡುಗಡೆ ದಿನಾಂಕ ಫಿಕ್ಸ್​ ಆಯ್ತು …

    ಮುಂಬೈ: ದೇಶದಲ್ಲಿ ಕರೊನಾ ಎರಡನೇ ಅಲೆ ಹೆಚ್ಚಾದಂತೆ, ಬಿಡುಗಡೆಯಾಗಬೇಕಿದ್ದ ಚಿತ್ರಗಳೆಲ್ಲ ಮುಂದೂಡಲ್ಪಟ್ಟಿವೆ. ಇಂಥ ಸಂದರ್ಭದಲ್ಲಿ ಹಲವು ಚಿತ್ರತಂಡಗಳು ‘ಚಿತ್ರಮಂದಿರಗಳ ಆಸೆ ಬಿಟ್ಟು, ಓಟಿಟಿಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದವು. ಅಂತಹ ತಂಡಗಳ ಪೈಕಿ, ಫರ್ಹಾನ್​ ಅಖ್ತರ್​ ಅಭಿನಯದ ‘ತೂಫಾನ್​’ ಚಿತ್ರತಂಡವೂ ಒಂದು.

    ಇದನ್ನೂ ಓದಿ: ದರ್ಶನ್​ ಕರೆಗೆ ಓಗೊಟ್ಟು ಜಾಗ್ವಾರ್​​ ದತ್ತು ಪಡೆದ ಅಮೂಲ್ಯ …

    ಫರ್ಹಾನ್​ ಅಭಿನಯದ 'ತೂಫಾನ್​' ಬಿಡುಗಡೆ ದಿನಾಂಕ ಫಿಕ್ಸ್​ ಆಯ್ತು ...

    ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ 21ರಂದು ‘ತೂಫಾನ್​’ ಚಿತ್ರವು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳಿವೆ ಎನ್ನುವಷ್ಟರಲ್ಲಿ ಚಿತ್ರತಂಡದವರು ಬಿಡುಗಡೆಯನ್ನು ಮುಂದೂಡಿದ್ದರು. ದೇಶದಲ್ಲಿ ಕರೊನಾ ಕೇಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಜನರಿಗೆ ಸಹಾಯಹಸ್ತ ಚಾಚುವುದು ತಮ್ಮ ಮುಖ್ಯ ಉದ್ದೇಶವಾಗಿರುವುದರಿಂದ `ತೂಫಾನ್’ ಚಿತ್ರವನ್ನು ಮುಂದೂಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಚಿತ್ರತಂಡದವರು ಘೋಷಿಸಿದ್ದರು.

    ಹೀಗೆ ಮುಂದಕ್ಕೆ ಹೋದ ಚಿತ್ರದ ಬಿಡುಗಡೆ, ಇದೀಗ ಕೊನೆಗೂ ಫಿಕ್ಸ್​ ಆಗಿದೆ. ಜುಲೈ 16ರಂದು ಅಮೇಜಾನ್​ ಪ್ರೈಮ್​ನಲ್ಲೇ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಕುರಿತು ಚಿತ್ರತಂಡದವರೇ ಅಧಿಕೃತವಾಗಿ ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಜೀ಼ ಕನ್ನಡದ ‘ಮಹರ್ಷಿವಾಣಿ’ ಕಾರ್ಯಕ್ರಮಕ್ಕೆ 7 ವಸಂತ ಪೂರೈಸಿದ ಸಂಭ್ರಮ

    `ತೂಫಾನ್’ ಚಿತ್ರದಲ್ಲಿ ಫರ್ಹಾನ್, ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಪರೇಶ್ ರಾವಲ್, ಮೃಣಾಲ್ ಠಾಕೂರ್, ವಿಜಯ್ ರಾಜ್, ಮೋಹನ್ ಅಗಾಸ್ಸೆ ಮುಂತಾದವರು ನಟಿಸಿದ್ದಾರೆ. ಈ ಹಿಂದೆ `ಭಾಗ್ ಮಿಲ್ಕಾ ಭಾಗ್’, `ದಿಲ್ಲಿ ೬’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ರಾಕೇಶ್ ಓಂಪ್ರಕಾಶ್ ಮೆಹ್ರಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    25 ವರ್ಷಗಳ ಹಿಂದಿನ ಮಧುರ ನೆನಪನ್ನು ಮೆಲುಕು ಹಾಕಿದ ನಾಗತಿಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts