More

    2 ಬಾರಿ ಕರೊನಾವನ್ನು ಮಣಿಸಿದವ, ಟೋಕಿಯೊದಲ್ಲಿ ಸ್ವರ್ಣ ಗೆದ್ದ

    ಟೋಕಿಯೊ: ಎರಡು ಬಾರಿ ಕೋವಿಡ್‌ಗೆ ತುತ್ತಾಗಿದ್ದ ಬ್ರಿಟನ್‌ನ ಈಜುಪಟು ಟಾಮ್ ಡೀನ್, ಒಲಿಂಪಿಕ್ಸ್ ಈಜು ಸ್ಪರ್ಧೆಯ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಕ್ರೀಡಾಕೂಟಕ್ಕೂ ಮುನ್ನ ನಾಲ್ಕು ತಿಂಗಳ ಅಂತರದಲ್ಲಿ 2 ಬಾರಿ ಕೋವಿಡ್ ಕಾಣಿಸಿಕೊಂಡಿತ್ತು. ಜನವರಿ ತಿಂಗಳಲ್ಲಿ 2ನೇ ಬಾರಿ ಕೋವಿಡ್ ಕಾಣಿಸಿಕೊಂಡಿದ್ದರಿಂದ ಟಾಮ್ ಡೀನ್ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವುದೇ ಅನುಮಾನ ಮೂಡಿತ್ತು. 1 ನಿಮಿಷ 44.22 ಸೆಕೆಂಡ್‌ಗಳಲ್ಲಿ ಈ ದೂರ ಕ್ರಮಿಸಿ ಸ್ವರ್ಣ ಗೆದ್ದುಕೊಂಡರು.

    ಇದನ್ನೂ ಓದಿ: ಸ್ಥಳೀಯ ಭಾಷೆ ಕಲಿತರಷ್ಟೇ ಈ ರಾಜ್ಯದ ಕ್ರಿಕೆಟ್ ತಂಡದಲ್ಲಿ ಸ್ಥಾನ..?

    ಹೃದಯರಕ್ತನಾಳದ ಸಮಸ್ಯೆ ಎದುರಿಸಿದ್ದ ಟಾಮ್ ಡೀನ್, ಸತತವಾಗಿ ಕೆಮ್ಮಿನಿಂದ ಬಳಲಿದ್ದರು. ಇದರಿಂದ ತರಬೇತಿಯನ್ನು ಸ್ಥಗಿತಗೊಳಿಸಿದ್ದ ಟಾಮ್ ಡೀನ್, ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದರು. ಏಪ್ರಿಲ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಒಲಿಂಪಿಕ್ ಪದಕ ನನ್ನ ಜೀವನದ ದೊಡ್ಡ ಮೈಲುಗಲ್ಲು ಎಂದು ಡೀನ್ ಹೇಳಿದ್ದಾರೆ. ಇದೇ ವಿಭಾಗದಲ್ಲಿ ಬ್ರಿಟನ್‌ನ ಮತ್ತೋರ್ವ ಈಜುಪಟು ಡುಕನ್ ಸ್ಕಾಟ್ ಬೆಳ್ಳಿ ಪದಕ ಜಯಿಸಿದ್ದಾರೆ.

    ಇದನ್ನೂ ಓದಿ: ಕರ್ನಾಟಕದ ಆರಂಭಿಕ ಆಟಗಾರ್ತಿ ವಿ.ಆರ್. ವನಿತಾ ಬಂಗಾಳ ತಂಡಕ್ಕೆ ವಲಸೆ, 

    ಮಹಿಳಾ ಜಿಮ್ನಾಸ್ಟಿಕ್‌ನ ತಂಡದ ವಿಭಾಗದಲ್ಲಿ ಸತತ 4ನೇ ಸ್ವರ್ಣ ಪದಕದ ಮೇಲೆ ಕಣ್ಣಿಟ್ಟಿದ ಅಮೆರಿಕ ತಂಡಕ್ಕೆ ರಷ್ಯಾ ಒಲಿಂಪಿಕ್ ಸಮಿತಿ (ಆರ್‌ಒಸಿ) ತಂಡ ಅಡ್ಡಿಯಾಯಿತು. ಮಂಗಳವಾರ ನಡೆದ ತಂಡದ ವಿಭಾಗದ ೈನಲ್‌ನಲ್ಲಿ ಆರ್‌ಒಸಿ ತಂಡ 0.8 ಅಂತರದಲ್ಲಿ ಅಮೆರಿಕ ತಂಡವನ್ನು ಮಣಿಸಿತು. ಅಮೆರಿಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಬ್ರಿಟನ್ ತಂಡ ಕಂಚಿನ ಪದಕ ಗೆದ್ದುಕೊಂಡಿತು. ಪುರುಷರ ಹಾಗೂ ಮಹಿಳಾ ತಂಡಗಳ ವಿಭಾಗದಲ್ಲಿ ಸ್ವರ್ಣ ಪದಕಗಳು ಆರ್‌ಒಸಿ ಪಾಲಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts