More

    ಸ್ಥಳೀಯ ಭಾಷೆ ಕಲಿತರಷ್ಟೇ ಈ ರಾಜ್ಯದ ಕ್ರಿಕೆಟ್ ತಂಡದಲ್ಲಿ ಸ್ಥಾನ..?

    ಕೋಲ್ಕತ: ಉದ್ದ ಕೂದಲು ಬಿಡುವಂತಿಲ್ಲ, ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವಂತಿಲ್ಲ, ಸಭ್ಯತೆ ಮೈಗೂಡಿಸಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಸ್ಥಳೀಯ ಭಾಷೆ ಬಂಗಾಲಿಯನ್ನು ಕಲಿಯಬೇಕು. ಹೀಗೆ ಯುವ ಕ್ರಿಕೆಟಿಗರಿಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ ಬಂಗಾಳ 23 ವಯೋಮಿತಿ ಕ್ರಿಕೆಟ್ ತಂಡದ ಕೋಚ್ ಲಕ್ಷ್ಮೀರತನ್ ಶುಕ್ಲಾ. ವೃತ್ತಿಪರ ಕ್ರಿಕೆಟಿಗರಿಗೆ ಶಿಸ್ತು ಮುಖ್ಯ, ಹೀಗಾಗಿ ಯುವ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಲಕ್ಷ್ಮೀರತನ್. ಸೋಮವಾದರಿಂದ ಆರಂಭಗೊಂಡ 23 ವಯೋಮಿತಿ ಫಿಟ್ನೆಸ್ ಶಿಬಿರದ ವೇಳೆ ಲಕ್ಷ್ಮೀರತನ್ ಈ ನಿಯಮಗಳನ್ನು ಆಟಗಾರರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಒಲಿಂಪಿಕ್ಸ್‌ನ ಈ ಕ್ರೀಡೆಯಲ್ಲಿ ಕಡಿಮೆ ಅಂಕ ಪಡೆದವರೇ ಚಿನ್ನ ಗೆಲ್ತಾರೆ!

    ಸ್ಥಳೀಯ ಭಾಷೆ ಕಲಿತರಷ್ಟೇ ಈ ರಾಜ್ಯದ ಕ್ರಿಕೆಟ್ ತಂಡದಲ್ಲಿ ಸ್ಥಾನ..?ಬಂಗಾಳದ ಮಾಜಿ ಆಟಗಾರ ಹಾಗೂ ಮಾಜಿ ಕ್ರೀಡಾಸಚಿವರೂ ಆದ ಲಕ್ಷ್ಮೀರತನ್, ರಾಜಕೀಯದಿಂದ ಹಿಂದೆ ಸರಿದ ಬಳಿಕ ಮತ್ತೆ ಕ್ರಿಕೆಟ್‌ನತ್ತ ಗಮನಹರಿಸಿದ್ದಾರೆ. 23 ವಯೋಮಿತಿ ತಂಡದ ಮುಖ್ಯಕೋಚ್ ಆಗಿ ನೇಮಿಸಲಾಗಿದೆ. ಸೋಮವಾರ 60 ಆಟಗಾರರ ತರಬೇತಿ ಶಿಬಿರ ಆರಂಭಗೊಂಡಿತು. ಈ ವೇಳೆ ಮಾತಾನಾಡಿದ ಅವರು ಯುವ ಕ್ರಿಕೆಟಿಗರಿಗೆ ಕೆಲವೊಂದು ಉಪಯುಕ್ತ ಮಾಹಿತಿ ಹಂಚಿಕೊಂಡರು.

    ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ!

    18 ವರ್ಷಗಳ ಕಾಲ ಬಂಗಾಳ ತಂಡದ ಭಾಗವಾಗಿದ್ದ ಲಕ್ಷ್ಮೀರತನ್ ಶುಕ್ಲಾ, 2015ರಲ್ಲಿ ಎಲ್ಲ ಮಾದರಿಗೂ ನಿವೃತ್ತಿ ಘೋಷಿಸಿ ಟಿಎಂಸಿ ಸೇರ್ಪಡೆಗೊಂಡಿದ್ದರು. ಬಳಿಕ ಸಿಎಂ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಕ್ರೀಡಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ತಂಡದ ಪರ 3 ಏಕದಿನ ಪಂದ್ಯಗಳನ್ನಾಡಿದ್ದಾರೆ. 137 ಪ್ರಥಮ ದರ್ಜೆ ಪಂದ್ಯಗಳಿಂದ 6217 ರನ್, 141 ಲಿಸ್ಟ್ ಎ ಪಂದ್ಯಗಳಿಂದ 2997 ಹಾಗೂ 81 ಟಿ20 ಪಂದ್ಯಗಳಿಂದ 994 ರನ್ ಬಾರಿಸಿದ್ದಾರೆ.

    ಕರ್ನಾಟಕದ ಆರಂಭಿಕ ಆಟಗಾರ್ತಿ ವಿ.ಆರ್. ವನಿತಾ ಬಂಗಾಳ ತಂಡಕ್ಕೆ ವಲಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts