ಕರ್ನಾಟಕದ ಆರಂಭಿಕ ಆಟಗಾರ್ತಿ ವಿ.ಆರ್. ವನಿತಾ ಬಂಗಾಳ ತಂಡಕ್ಕೆ ವಲಸೆ

ಬೆಂಗಳೂರು: 2021-22ನೇ ದೇಶೀಯ ಕ್ರಿಕೆಟ್ ಋತು ಆರಂಭಗೊಳ್ಳುವುದಕ್ಕೂ ಮುನ್ನ ಕರ್ನಾಟಕ ಮಹಿಳಾ ತಂಡ ಆಘಾತ ಎದುರಿಸಿದೆ. ತಂಡದ ಅನುಭವಿ ಆಟಗಾರ್ತಿ ವಿ.ಆರ್.ವನಿತಾ ಮುಂದಿನ ದೇಶೀಯ ಟೂರ್ನಿಗಳಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ರಾಷ್ಟ್ರೀಯ ತಂಡ ಪ್ರತಿನಿಧಿಸಿರುವ 31 ವರ್ಷದ ವನಿತಾ, 6 ಏಕದಿನ, 16 ಟಿ20 ಪಂದ್ಯಗಳನ್ನಾಡಲಿದ್ದಾರೆ. 2016ರ ಟಿ20 ವಿಶ್ವಕಪ್ ತಂಡದ ಸದಸ್ಯೆಯಾಗಿದ್ದರು. ವನಿತಾ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೂ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ನೀಡಿದೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ! … Continue reading ಕರ್ನಾಟಕದ ಆರಂಭಿಕ ಆಟಗಾರ್ತಿ ವಿ.ಆರ್. ವನಿತಾ ಬಂಗಾಳ ತಂಡಕ್ಕೆ ವಲಸೆ