More

    ಕರ್ನಾಟಕದ ಆರಂಭಿಕ ಆಟಗಾರ್ತಿ ವಿ.ಆರ್. ವನಿತಾ ಬಂಗಾಳ ತಂಡಕ್ಕೆ ವಲಸೆ

    ಬೆಂಗಳೂರು: 2021-22ನೇ ದೇಶೀಯ ಕ್ರಿಕೆಟ್ ಋತು ಆರಂಭಗೊಳ್ಳುವುದಕ್ಕೂ ಮುನ್ನ ಕರ್ನಾಟಕ ಮಹಿಳಾ ತಂಡ ಆಘಾತ ಎದುರಿಸಿದೆ. ತಂಡದ ಅನುಭವಿ ಆಟಗಾರ್ತಿ ವಿ.ಆರ್.ವನಿತಾ ಮುಂದಿನ ದೇಶೀಯ ಟೂರ್ನಿಗಳಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ರಾಷ್ಟ್ರೀಯ ತಂಡ ಪ್ರತಿನಿಧಿಸಿರುವ 31 ವರ್ಷದ ವನಿತಾ, 6 ಏಕದಿನ, 16 ಟಿ20 ಪಂದ್ಯಗಳನ್ನಾಡಲಿದ್ದಾರೆ. 2016ರ ಟಿ20 ವಿಶ್ವಕಪ್ ತಂಡದ ಸದಸ್ಯೆಯಾಗಿದ್ದರು. ವನಿತಾ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೂ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ನೀಡಿದೆ.

    ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಸೆಕ್ಸಿಯಾಗಿ ಚಿತ್ರೀಕರಿಸುವಂತಿಲ್ಲ!

    ಗೋವಾ ಎದುರು ಕಣಕ್ಕಿಳಿಯುವ ಮೂಲಕ 2006-07ರಲ್ಲಿ ಮೊದಲ ಬಾರಿಗೆ ರಾಜ್ಯ ತಂಡ ಪ್ರತಿನಿಧಿಸಿದ ವನಿತಾ, ಕಳೆದ 15 ವರ್ಷಗಳಿಂದ ತಂಡದ ಭಾಗವಾಗಿದ್ದರು. ಇದುವರೆಗೂ 96 ಲಿಸ್ಟ್ ಎ ಹಾಗೂ 102 ಟಿ20 ಪಂದ್ಯಗಳನ್ನಾಡಲಿದ್ದಾರೆ. ಲಿಸ್ಟ್ ಎನಲ್ಲಿ 1957 ರನ್ ಹಾಗೂ ಟಿ20ಯಲ್ಲಿ 2117 ರನ್ ಬಾರಿಸಿದ್ದಾರೆ. ಕೆಎಸ್‌ಸಿಎ ಲೀಗ್‌ನ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. 93 ಎಸೆತಗಳಲ್ಲಿ 19 ಬೌಂಡರಿ, 12 ಸಿಕ್ಸರ್ ಒಳಗೊಂಡಂತೆ 206 ಸಿಡಿಸಿದ್ದರು.

    ಇದನ್ನೂ ಓದಿ: ಪ್ರಿಯಾ ಮಲಿಕ್ ಅಭಿನಂದಿಸಿ ಟ್ರೋಲ್ ಆದ ಗಣ್ಯರ ಟ್ವೀಟ್

    ಸ್ಟಾರ್ ಆಟಗಾರ್ತಿಯರಾದ ರುಮೆಲಿ ಧಾರ್ ಹಾಗೂ ಜೂಲನ್ ಗೋಸ್ವಾಮಿರಂಥ ಸ್ಟಾರ್ ಆಟಗಾರ್ತಿಯರು ಬಂಗಾಳ ತಂಡದಲ್ಲಿದ್ದಾರೆ. ಕಳೆದ 15 ವರ್ಷಗಳಿಂದ ಕರ್ನಾಟಕ ತಂಡದ ಭಾಗವಾಗಿದ್ದೆ, ಇದೀಗ ತವರು ತಂಡ ತೊರೆಯುತ್ತಿರುವುದಕ್ಕೂ ಬೇಸರವಾಗುತ್ತಿದೆ. ಇದು ವೃತ್ತಿ ಪರ ಕ್ರಿಕೆಟ್ ಆಟಗಾರ್ತಿಯಾಗಿರುವುದರಿಂದ ಹೊಸ ಸವಾಲಿಗೆ ಸಿದ್ಧವಾಗಬೇಕಿದೆ. ಇನ್ನು ಹಲವು ವರ್ಷಗಳ ಕಾಲ ಕ್ರಿಕೆಟ್ ಆಡುವೆ ಎಂದು ವನಿತಾ ಹೇಳಿಕೊಂಡಿದ್ದಾರೆ.

    ಒಲಿಂಪಿಕ್ಸ್‌ನ ಈ ಕ್ರೀಡೆಯಲ್ಲಿ ಕಡಿಮೆ ಅಂಕ ಪಡೆದವರೇ ಚಿನ್ನ ಗೆಲ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts